Spread the love

ತಿಪಟೂರು:ವಾಲ್ಮೀಕಿ ರಾಮಾಯಣ ಜಗತ್ತಿನ ಕಲ್ಯಾಣಕ್ಕೆ ಸ್ಪೂರ್ಥಿಯಾಗಿದ್ದು,ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಜಗತ್ತಿಗೆ ಬೆಳಕಾಗಿವೆ,ಮಹನೀಯರ ಆದರ್ಶಗಳನ್ನ ಜಾತಿ ಸಂಕೋಲೆಗೆ ಸೀಮಿತಗೊಳಿಸದೇ ಸರ್ವಜನಾಂಗದ ಚೇತನವಾಗಿ ಪಾಲನೆ ಮಾಡಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರಸಭೆ ಆವರಣದಲ್ಲಿ ತಾಲ್ಲೋಕು ಆಡಳಿತದಿಂದ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾಲ್ಮೀಕಿ ಮಹಾಕಾವ್ಯ ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಒಂದು ಮಾನವನ ಜೀವನ ಮೌಲ್ಯಗಳನ್ನ ಒಳಗೊಂಡಿದ್ದು.ವಾಲ್ಮೀಕಿಯ ತತ್ವ ಆದq aರ್ಶಗಳ,ಅಳವಡಿಸಿಕೊಳ್ಳ ಬೇಕು.ಸಾಮಾನ್ಯ ಬಡಕುಟುಂಬದಲ್ಲಿ ಹುಟ್ಟಿದ ಎಲ್.ಜಿ ಹಾವನೂರು ನಾಯಕ ಸಮುದಾಯದಲ್ಲಿ ಅತಿ ಎತ್ತರದ ಸ್ಥಾನಕ್ಕೆ ಬೆಳೆದು.ತನ್ನ ವಿದ್ವಾತ್ ಮೂಲಕ,ಹಿಂದುಳಿದ ವರ್ಗಗಳ ಬೆಳವಣಿಗೆಗೆ ದಿಕ್ಸೂಚಿಯಾಗಿರುವ ಹಾವನೂರು ವರದಿ ನೀಡುವ ಮೂಲಕ ಪ್ರೌಡಿಮೆ ಮೆರೆದಿದ್ದಾರೆ, ಮಹನೀಯರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಿಕ್ಷಿತರಾಗಿ ಆರ್ಥಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ರಾಜ್ಯಹಾಗೂ ರಾಷ್ಟ್ರದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಾಗಭೂಷಣ್ ಬಗ್ಗನಡು ರಾಮಾಯಣ ಮಹಾಕಾವ್ಯ ಜಗತ್ತಿನ ಶ್ರೇಷ್ಠ ಕಾವ್ಯ,ಜಗತ್ತಿನಾದ್ಯಾಂತ 1ಲಕ್ಷ ರಾಮಾಯಣ ಕೃತಿಗಳನ್ನ ಕಾಣಬಹುದು, ಎಲ್ಲಾ ರಾಮಾಯಣಗಳಿಗೂ ವಾಲ್ಮೀಕಿ ರಾಮಾಯಣವೇ ಮೂಲಗ್ರಂಥವಾಗಿದೆ.ವಾಲ್ಮೀಕಿ ಸೃಜಿಸಿರುವ ರಾಮಾಯಣ ಮಹಾಕಾವ್ಯವನ್ನ ಅದರ್ಶವಾಗಿ ಅಧ್ಯಯನ ಮಾಡಿದರೆ.ವ್ಯಕ್ತಿಯನ್ನ ಸರ್ವಸಂಪನ್ನ ವ್ಯಕ್ತಿಯಾಗಿ ರೂಪಿಸುತ್ತದೆ.

,ಇತ್ತಿಚಿನ ದಿನಗಳಲ್ಲಿ ರಾಮನ ಆದರ್ಶಗಳಿಂಗಿಂತ ರಾಮನನ್ನ ಫ್ಯಾಷನ್ ಗಿ ಬಳಕೆ ಮಾಡುತ್ತಿರುವುದು ಸರಿಯಲ್ಲ.ಪಿತೃವಾಕ್ಯಪರಿಪಾಲಕನಾದ ರಾಮನನ್ನ ಪೂಜೆ ಮಾಡಿ ತಂದೆ ತಾಯಿಯನ್ನ ಪೋಷಣೆ ಮಾಡದಿದ್ದರೆ.ರಾಮನ ಹೆಸರು ಹೇಳುವ ಯೋಗ್ಯತೆ ಇರುವುದಿಲ್ಲ.ರಾಮಾಯಣದಲ್ಲಿ ರಾಮಪಿತೃವಾಕ್ಯಪರಿಪಾಲಕನಾದರೆ,ಸೀತೆ ದಾಂಪತ್ಯ ಜೀವನದ ಬದ್ದತೆ ಸಾಕ್ಷಿಯಾಗಿದ್ದಾಳೆ.ಲಕ್ಷ್ಮಣನಲ್ಲಿ ಭ್ರತೃತ್ವ ಪ್ರೀತಿ ಕಂಡರೆ,ಹನುಮಂತನಲ್ಲಿ ಸ್ವಾಮೀನಿಷ್ಠೆ.ಶಬರಿಯಲ್ಲಿ ತಾಳ್ಮೆಗೆ ಸಾಕ್ಷಿಯಾದರೆ.ಭರತ ನಿಸ್ವಾರ್ಥ ರಾಜಕಾರಣಕ್ಕೆ ಸಾಕ್ಷಿಯಾಗುತ್ತಾನೆ. ಆದರೆ ಭಕ್ತ ಹಾಗೂ ಭಗವಂತನ ನಡುವಿನ ಸಂಬಂದ ಆಡಂಬರವಾಗುತ್ತಿರುವುದು ವಿಷಾದನೀಯ.ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಧ್ಯಯನದಲ್ಲಿ ತೊಡಗಬೇಕು.ತಮ್ಮಲ್ಲಿ ಅಡಗಿರುವ ಅದಮ್ಯ ಪ್ರತಿಭೆಗಳನ್ನ ಹೊರತೆಗೆಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.


ನಗರಸಭೆ ಪ್ರಭಾರ ಅಧ್ಯಕ್ಷೆ ಶ್ರೀಮತಿ ಮೇಘಶ್ರೀ ಭೂಷಣ್ ಮಾತನಾಡಿ ವಾಲ್ಮೀಕಿಯವರ ಆದರ್ಶಗಳನ್ನ ಎಲ್ಲರೂ ಪಾಲಿಸಬೇಕು,ದೈವ ಸ್ವರೂಪಿಯಾದ ರಾಮಾಯಣ ಗ್ರಂಥವನ್ನ ಪ್ರತಿಮನೆಯಲ್ಲಿ ಪೂಜಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ.ಎಎಸ್ಪಿ ಯಶ್ ಕುಮಾರ್ ಶರ್ಮ.ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಮದಕರಿ ನಾಯಕ ಸಂಘದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮಹೇಶ್ ಸಂಜೀವಯ್ಯ.ಪಂಚವಟಿ ಶಿವಶಂಕರ್.ಬಿಸಿಎಂ ಅಧಿಕಾರಿ ಜಲಜಾಕ್ಷಮ್ಮ.ನಗರಸಭಾ ಸದಸ್ಯರಾದ ಹೂರ್ ಬಾನು.ಮಹಮದ್ ಗೌಸ್.ಮುಂತ್ತಾದವರು ಉಪಸ್ಥಿತರಿದರು.
ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಾಲಯದಿಂದ ವಾಲ್ಮೀಕಿ ಮಹರ್ಷಿ ಭಾವಚಿತ್ರವನ್ನ ಮೆರವಣಿಗೆ ನಡೆಸಲಾಯಿತು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!