ತಿಪಟೂರು: ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ
ಇಲಾಖೆಯ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ
ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು
ಆರೋಪಿಸಿದ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು

ವಿದ್ಯಾರ್ಥಿ ನಿಲಯದಲ್ಲಿ ವೇಳಾಪಟ್ಟಿಯ ಪ್ರಕಾರ ಆಹಾರವನ್ನು
ತಯಾರು ಮಾಡುತ್ತಾರೆ. ಆದರೆ ಇಲ್ಲಿ ಶುಚಿ ಹಾಗೂ ರುಚಿ ಇಲ್ಲ.
ಶಾಲೆಗಳಿಂದ ಸ್ವಲ್ಪ ತಡವಾಗಿ ಬಂದರೆ ಊಟ ಖಾಲಿಯಾಗಿದೆ ಎಂದು
ಹೇಳುತ್ತಾರೆ. ಮೊಟ್ಟೆಗಳನ್ನು ಕೂಡಿ ಎಂದು ಕೇಳಿದರೆ ಇಲ್ಲ ಎನ್ನುತ್ತಾರೆ.ಎಂದು ಆರೋಪಿಸಿದ ವಿದ್ಯಾರ್ಥಿಗಳು ಆಹಾರ ತಟ್ಟೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.ಹಾಸ್ಟೆಲ್ ನಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡುವ ವಿದ್ಯಾರ್ಥಿಗಳನ್ನ ಟಾರ್ಗೇಟ್ ಮಾಡುತ್ತಾರೆ.ಸಣ್ಣಪುಟ್ಟ ವಿಚಾರಗಳಿಗು ಅಪಹಾಸ್ಯ ಮಾಡಿ ಮೂದಲಿಸುತ್ತಾರೆ.ಇಲ್ಲಿಯ ಕರ್ಮಕಾಂಡಗಳನ್ನ ಯಾರ ಬಳಿಯೂ ಹೇಳಿಕೊಳ್ಳುವಂತ್ತಿಲ್ಲ.ವಾರ್ಡನ್ ಸರಿಯಾಗಿ ಹಾಸ್ಟೆಲ್ ಗೆ ಬರೋದಿಲ್ಲ.ಬಡ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ, ಆದರೆ ಸರ್ಕಾರದಿಂದ ಬರುವ ವಸ್ತುಗಳನ್ನ ಅಧಿಕಾರಿಗಳು ಸ್ವಾಹಾ ಮಾಡುತ್ತಿದ್ದಾರೆ.ಇದರಿಂದ ಶುಚಿ ರುಚಿ ಇಲ್ಲದ ಉಪ್ಪು ಉಳಿಇಲ್ಲದ ಆಹಾರ ನೀಡುತ್ತಾರೆ,ನಾವು ದೂರದ ಊರುಗಳಿಂದ ಓದುವುದಕ್ಕೆ ಒಂದಿದ್ದೇವೆ,ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು. ಇನ್ನೂ ಹಾಸ್ಟೆಲ್ ನಲ್ಲಿ ಸರಿಯಾದ ಸ್ವಚ್ಚತೆಇಲ್ಲ
ಶೌಚಾಲಯಗಳು ಸ್ವಚ್ಛವಾಗಿರುವುದಿಲ್ಲ ಎಂದು ದೂರಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮನ್ವಯದ ಕೊರತೆ.: ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಬಹುತೇಕ ಹಾಸ್ಟೆಲ್ ಕಥೆ ಇದೆ ಆಗಿದೆ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ತ್ರಿವೇಣಿಯವರಿಗೆ ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ,ಇಲಾಖೆಯ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತ್ತಾಗಿದ್ದು,ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಅನೇಕ ಸಮಸ್ಯೆಯಾಗುತ್ತಿವೆ, ಆದರೆ ಸಮಸ್ಯೆಗಳ ಬಗ್ಗೆ ಮಾತನಾಡಿದರೆ,ಸಮಸ್ಯೆ ಎದುರಿಸ ಬೇಕಾಗುತ್ತದೆ ಅನೋ ಭಯದಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿದ್ದಾರೆ,ಪ್ರತಿವರ್ಷ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚುಮಾಡಿದರೂ,ಸಮರ್ಪಕವಾಗಿ ಅನುಷ್ಟಾನವಾಗದೆ. ಅಧಿಕಾರಿಗಳ ಜೇಬು ಸೇರುವುದ್ದಾದರೆ,ಸರ್ಕಾರದ ಉದೇಶ ಸಫಲವಾಗಲು ಹೇಗೆ ಸಾಧ್ಯ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್ ನಲ್ಲಿ ಸಮಸ್ಯೆಗಳ ಆಗರವಾಗಿದೆ,ಹಾಸ್ಟೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನ ಅಡುಗೆ ಕೆಲಸಕ್ಕೆ ನಿಯೋಜನೆ ಮಾಡಿಕೊಂಡು ವಿದ್ಯಾರ್ಥಿಯೊಬ್ಬ ಸುಡುವ ಬಿಸಿ ಸಾಂಬಾರ್ ಸುರಿದುಕೊಂಡು ಗಾಯಗೊಂಡ ಘಟನೆ ಮಾಸುವ ಮುನ್ನವೆ ಕಳಪೆ ಆಹಾರ ಪೂರೈಕೆ ವಿದ್ಯಾರ್ಥಿಗಳಿಗೆ ಪೂರೈಸುತ್ತಿರುವುದು. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ




