Spread the love

ತಿಪಟೂರು:ತಾಲ್ಲೋಕಿನ ದಲಿತರ ಬಹುದಿನಗಳ ಕೂಗಿನಂತೆ ತಿಪಟೂರು ನಗರದ ಹೃದಯ ಭಾಗವಾದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದ ಮಾರನಗೆರೆ ರಸ್ತೆ,ಅಗ್ನಿಶಾಮಕ ಠಾಣೆ ಮುಂಭಾಗ ಸುಮಾರು 3ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ವಿನೂತನ ವಿನ್ಯಾಸದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ.ಭವನ ಪೂರ್ಣಗೊಂಡು ಮೂರು ವರ್ಷಗಳು ಕಳೆಯುತ್ತಾ ಬಂದರು ಭಾಗ್ಯಗಳ ಸರ್ಕಾರ ಉದ್ಘಾಟನೆ ಭಾಗ್ಯಮಾತ್ರ ನೀಡಿಲ್ಲ.

ಹೊಸ ಕಟ್ಟಡ ಸೆಲಬೆ ಗಟ್ಟತೊಡಗಿದ್ದು, ಕಟ್ಟಡದ ಸುತ್ತಲೂ ಗಿಡಗಂಟೆಗಳು ಬೆಳೆದು,ಕಟ್ಟಡ ಮೂಲ ಸೌಂದರ್ಯವನ್ನೆ ಹಾಳುಮಾಡಿವೆ.ಉದ್ಘಾಟನೆಗೂ ಮುನ್ನವೇ ಡಾ//ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಿರ್ಮಾಣ ಮಾಡಲಾಗಿದ್ದ, ಶೌಚಾಲಯದ ಮೇಲ್ಚಾವಣಿ ಹಾರಿಹೋಗಿದು,ಶೌಚಾಲಯಗಳು ಶಿಥೀಲಾವಸ್ಥೆ ತಲುಪುತ್ತಿವೆ.ಬಡವರು ಬಲ್ಲಿದರಿಗೆ ನೆರವಾಗಲಿ, ದಲಿತರು ಮದುವೆ ಮುಂಜಿಯಂತ ಶುಭಕಾರ್ಯಗಳನ್ನ ಮಾಡಿಕೊಳಲಿ, ದಲಿತರು ಮದುವೆ ಮುಂಜಿ,ಯಂತ ಶುಭಕಾರ್ಯಮಾಡಲು ಮನೆಗಳ ಬಳಿ ಸ್ಥಳಾವಕಾಶದ ಕೊರತೆಯ ಕಾರಣ ಜನ ಕಲ್ಯಾಣ ಮಂಟಪಗಳು,ಪಾರ್ಟಿ ಹಾಲ್ ಗಳತ್ತ ಮುಖಮಾಡಿದ್ದಾರೆ.ಉಳ್ಳವರು ದುಬಾರಿ ಹಣತೆತ್ತು ಚೌಟ್ರಿಗಳಲ್ಲಿ ಕಾರ್ಯಕ್ರಮಗಳನ್ನ ನಡೆಸಿದರೆ,ಬಡವರು ಇತ್ತ ಮನೆಗಳ ಬಳಿ ಕಾರ್ಯಕ್ರಮಗಳನ್ನ ಮಾಡಲು ಪರದಾಡುವ ಸ್ಥಿತಿ ಅರಿತ ಸರ್ಕಾರಗಳು ಸಾರ್ವಜನಿಕರ ಉಪಯೋಗಕ್ಕಾಗಿ ಡಾ//ಬಿ.ಆರ್ ಅಂಬೇಡ್ಕರ್ ಭವನ ,ವಾಲ್ಮೀಕಿ ಭವನ.ಬಾಬು ಜಗಜೀವನ್ ರಾಮ್ ಭವನ.ಸೇವಾಲಲ್ ಭವನ.ಸೇರಿದಂತೆ ದಾರ್ಶನಿಕರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ,ಶೋಷಿತ ಸಮುದಾಯಗಳಿಗೆ ನೆರವಾಗುವ ಕೆಲಸ ಮಾಡುತ್ತಾ ಬಂದಿದೆ, ಅದೇ ಸದಾಶಯದೊಂದಿಗೆ ತಿಪಟೂರಿನಲ್ಲಿ ನಿರ್ಮಾಣಗೊಂಡ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟನೆ ಭಾಗ್ಯಕಾಣದೆ,ನಿರುಪಯುಕ್ತವಾಗುವತ್ತ ಸಾಗುತ್ತಿದೆ.

ಡಾ//ಬಿ.ಆರ್ ಅಂಬೇಡ್ಕರ್ ಭವನದ ಸ್ಥಿತಿಗತಿಯ ಬಗ್ಗೆ ಧ್ವನಿ ಎತ್ತಬೇಕಾದ ದಲಿತ ಮುಖಂಡರು ಮಾತ್ರ,ಜಾಣಕುರುಡರಂತೆ ಓಡಾಡುತ್ತಿರುವುದು,ತಾಲ್ಲೋಕಿನ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದ್ದು. ತಾಲ್ಲೋಕಿನ ಶಾಸಕರು ಇತ್ತ ಗಮನಹರಿಸಿ ಉದ್ಘಾಟನೆ ಭಾಗ್ಯ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!