ತಿಪಟೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರ ವಿರುದ್ದ ನಿರಂತರ ಅಪಪ್ರಚಾರ ಹಾಗೂ ಷಡ್ಯಂತ್ರಗಳು ನಡೆಯುತ್ತಿವೆ,ಧರ್ಮಸ್ಥಳಪವಿತ್ರತೆ ಹಾಳುಮಾಡುವ ನಿಟ್ಟಿನಲ್ಲಿ ಕರಾವಳಿ ಭಾಗದ ಮುಸ್ಲೀಂ ಸಂಘಟನೆಗಳು ಹಾಗೂ ಕೇರಳ ಕ್ರಿಶ್ಚಿಯನ್ ಮಿಷನರಿಗಳ ಪ್ರಚೋದಿತ ಷಡ್ಯಂತ್ರ ಮೇಲ್ನೋಟಕ್ಕೆ ಕಂಡುಬರುತ್ತಿದ್ದು.ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಮಾಹಿತಿ ನೀಡದೆ ಏಕಾಏಕಿ ಎಸ್.ಐ.ಟಿ ರಚನೆಯ ಹಿಂದೆ ಕಾಣದಕೈಗಳ ಒತ್ತಡ ಕಾರಣವಿರಬಹುದು ಎನ್ನುವುದು ಕಾಣುತ್ತಿದೆ.ಮುಸುಕುಧಾರಿ ವ್ಯಕ್ತಿ ಹಾಗೂ ಅವನ ಪೂರ್ವಪರಗಳ ಸಮಗ್ರತನಿಖೆ ನಡೆಸಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಲೋಕೇಶ್ವರ್ ಒತ್ತಾಯಿಸಿದರು.

ನಗರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಶ್ರದ್ದೆ ಇಲ್ಲದವರು,ಕರಾವಳಿ ಭಾಗದ ಹಿಂದೂವಿರೋಧಿ ಶಕ್ತಿಗಳ ಒತ್ತಡಕ್ಕೆ ಮಣಿದು,ಬುರುಡೆ ಪುರಾಣವನ್ನ ಎಸ್.ಐ.ಟಿ ಗೆ ವಹಿಸಿದ್ದಾರೆ.ಕರಾವಳಿ ಭಾಗದ ಪೊಲೀಸ್ ಅಧಿಕಾರಿಗಳು ಸರ್ಥವಾಗಿದ್ದರೂ,ಹೊರಗಿನಿಂದ ಪ್ರಣವ್ ಮೊಹಂತಿಯವರನ್ನ ಎಸ್ ಐಟಿ ಮುಖ್ಯಸ್ಥರನ್ನಾಗಿ ಮಾಡುವ ಅಗತ್ಯವಿರಲ್ಲಿಲ್ಲ,ಎಸ್ .ಐ.ಟಿ ತನಿಖಾಧಿಕಾರಿಗಳು ಅನಾಮುಧೇಯ ಮುಸಕುಧಾರಿ ವ್ಯಕ್ತಿ ತಂದಿರುವ, ತಲೆಬುರುಡೆ ಎಲ್ಲಿಂದ ತಂದರು,ಯಾರ ಬುರುಡೆ ಎನ್ನುವುದನ್ನ ಮೊದಲು ತನಿಖೆ ಮಾಡಿ ನಂತರ ಭೂಮಿ ಉತ್ಕನನ ಮಾಡಬೇಕಿತ್ತು,ಆದರೆ ಅನಾಮಿಕ ಹೇಳಿದಂತೆ,ವಿಐಪಿ ರಕ್ಷಣೆ ನೀಡಿ.ಪೋಲೀಸರು ಅನಾಮಿಕನ ಕೈಗೊಂಬೆಯಂತೆ ಕೆಲಸ ಮಾಡಿ,ಸಾರ್ವಜನಿಕರಲ್ಲಿ ಪೊಲೀಸ್ ವ್ಯವಸ್ಥೆಯ ಮೇಲೆಯೇ ಅಪನಂಬಿಕೆ ಬರುವಂತೆ ನಡೆದುಕೊಂಡಿದ್ದಾರೆ.ಭೂಮಿ ಉತ್ಕನನದಲ್ಲಿ ಅನಾಮಿಕ ಹೇಳಿದಂತೆ ಯಾವುದೇ ಶವಗಳ ರಾಶಿ ಸಿಕ್ಕಿಲ್ಲ, ಆದರಿಂದ ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಷಡ್ಯಂತ್ರದ ಹಿಂದೆ ಯಾರೋ ಇದ್ದಾರೆ ಎನ್ನುವುದು ಕಾಣುತ್ತದೆ.ಸರ್ಕಾರ ಮೊದಲು ಅನಾಮಿಕ ಯಾರು ಅವನ ಹಿಂದೆಯಾವ ಶಕ್ತಿಗಳು ಕೆಲಸ ಮಾಡುತ್ತಿವೆ ಎನ್ನುವುದನ್ನ ತನಿಖೆ ಮಾಡಬೇಕು.ಧರ್ಮಸ್ಥಳ ಧರ್ಮಾಧಿಕಾರಿಗಳು ಭಾರತದ ಸಂಸ್ಕೃತಿ ಹಾಗೂ ಸಂಸ್ಕಾರಗಳ,ರಕ್ಷಣೆ ಧಾರ್ಮಿಕ ಪರಂಪರೆ ಉಳಿಸಲು ಕೆಲಸ ಮಾಡುತ್ತಿದ್ದಾರೆ,ನಿತ್ಯ ಅನ್ನದಾಸೋಹದ ಮೂಲಕ ಸಾವಿರಾರು ಜನರಿಗೆ ಅನ್ನದಾನ ಮಾಡಿ ಮಂಜುನಾಥಸ್ವಾಮಿ ಸೇವೆ ಮಾಡುತ್ತಿದ್ದಾರೆ.ತಿರುಪತಿ,ಶನಿಸಿಂಗಾಪುರ,ಶಬರಿಮಲೈ ಸೇರಿದಂತೆ ಹಿಂದೂಧಾರ್ಮಿಕ ಶ್ರಾದ್ದಾಕೇಂದ್ರಗಳ ಮೇಲೆ ನಿರಂತರ ಅಪಪ್ರಚಾರ ನಡೆಯುತ್ತಿದೆ.ನಿರಂತರವಾಗಿ ಹಿಂದೂವಿರೋದಿಗಳು ಕೆಲಸ ಮಾಡುತ್ತಿದ್ದಾರೆ.ಧಾರ್ಮಿಕ ಕೇಂದ್ರಗಳು ಧರ್ಮಾಧಿಕಾರಿಗಳು.ಮಠಾಧೀಶರ ಮೇಲೆ ಷಡ್ಯಂತ್ರ ಮಾಡಿ ಅಪಪ್ರಚಾರ ಮಾಡಿದರೆ ಹಿಂದೂ ಸಮಾಜ ಸಹಿಸುವುದಿಲ್ಲ.ಧರ್ಮವಿರೋದಿಗಳ ಕುಕೃತ್ಯ ಕೈ ಬಿಡದಿದ್ದರೆ ತಕ್ಕಪಾಠಕಲಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಧರ್ಮಸ್ಥಳ ಜಾತ್ಯಾತೀತವಾಗಿ ಎಲ್ಲಾ ಹಿಂದೂಗಳ ಶ್ರದ್ದಾಕೇಂದ್ರ.ಇಲ್ಲಿನ ಪಾವಿತ್ರತೆ ಉಳಿಸಲು ಸರ್ಕಾರ ಮುಂದ್ದಾಗಬೇಕು ಎಂದು ತಿಳಿಸಿದರು.

ಪತ್ರಿಕಾಘೋಷ್ಠಿಯಲ್ಲಿ ಮಾಜಿ ನಗರಸಭಾ ಉಪಾಧ್ಯಕ್ಷ ಸೊಪ್ಪುಗಣೇಶ್,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ ರಾಜಣ್ಣ.ನಗರಸಭೆ ಸದಸ್ಯೆ ಭಾರತೀ ಮಂಜುನಾಥ್.ಮುಖಂಡರಾದ ರೇಣುಪಟೇಲ್.ಷಡಕ್ಷರಿ.ಶಶಿಭೂಷಣ್.ತಿಮ್ಮೆಗೌಡ.ರಾಜಶೇಖರ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







