Spread the love

ತಿಪಟೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಘಟನೆ ಖಂಡಿಸಿ ತಿಪಟೂರು ಬಂದ್ ವೇಳೆ ಖಾಸಗೀ ಯೂಟ್ಯೂಬ್ ಸಂದರ್ಶನದ ವೇಳೆ ಪಾಕಿಸ್ಥಾನ ಹಾಗೂ ಮುಸ್ಲೀಂ ಮದರಸಗಳ ಬಗ್ಗೆ ಪ್ರಚೋದನ ಕಾರಿಯಾಗಿ ಮಾತನಾಡಿದ್ದಾರೆ, ಎಂದು ಆರೋಪಿಸಿ ಬಿಜೆಪಿ ಮುಖಂಡ ಗಾಂಧೀ ನಗರದ ಪ್ರಕಾಶ್ ಎಂಬುವವರನ್ನ ಬೆಳಗ್ಗೆ ತಿಪಟೂರು ನಗರಠಾಣೆ ಪೊಲೀಸರು ಠಾಣೆಗೆ ಕರೆತರಲಾಗಿದೆ, ಬಿಜೆಪಿ ಕಾರ್ಯಕರ್ತರನನ್ನ ಠಾಣೆಗೆ ಕರೆತಂದ ವಿಚಾರ ತಿಳಿಯುತ್ತಿದ್ದಂತೆ ಠಾಣೆ ಬಳಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಬಿಜೆಪಿ ಕಾರ್ಯಕರ್ತರನನ್ನ ಬಂಧಿಸಿ ದೌರ್ಜನ್ಯ ಮಾಡಲಾಗಿದೆ ಎಂದು ಘೋಷಣೆ ಕೂಗಿದರು..
ಬಿಜೆಪಿ ಮುಖಂಡರಾದ ಗಂಗರಾಜು.ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್,ವಿಶ್ವದೀಪ್,ಪ್ರಕಾಶ್, ರಾಜು, ಮುಂತ್ತಾದವರು ಉಪಸ್ಥಿತರಿದರು.

error: Content is protected !!