Spread the love

ತಿಪಟೂರು:ಕನಕದಾಸರು ಜಗತ್ತಿನ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು ನಮ್ಮ ದೇಶದಲ್ಲಿ ಇರುವ ಜಾತಿತಾರತಮ್ಯಕ್ಕೆ ಕನಕದಾಸರ ಚಿಂತನೆಗಳು ದಿವ್ಯಾಷಧಿಗಳಾಗಿವೆ ಎಂದು ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಜಿ.ಅಶ್ವತ್ ನಾರಾಯಣ್ ತಿಳಿಸಿದರು.
ತಾಲ್ಲೋಕಿನ ಕಸಬಾ ಹೋಬಳಿ ಟಿ.ಎಂ ಮಂಜುನಾಥ ನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಾಅತಿಥಿಗಳಾಗಿ ಭಾಗವಹಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಪುಷ್ಪಾರ್ಚಾನೆ ಮಾಡಿ ಮಾತನಾಡಿದ ಅವರು ದಾಸಶ್ರೇಷ್ಠ ಕನಕ ದಾಸರು ಜಗತ್ತುಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು.ನಮ್ಮ ದೇಶದಲ್ಲಿ ತಾಂಡವವಾಡುತ್ತಿದ ಅಸಮಾನತೆ ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ದ ಭಕ್ತಿ ಮಾರ್ಗದಲ್ಲಿ ಸುಧಾರಣೆ ಮಾಡಿದ ಮಹಾನ್ ಸಂತ,ಕನಕದಾಸರ ಕೀರ್ತನೆಗಳು.ಸಮಾಜದಲ್ಲಿ ಹಲವಾರು ಬದಲಾವಣೆ ತರಲು ಕಾರಣವಾದ ಮಹಾಪುರುಷ.ದಾಸರ ಚಿಂತನೆಗಳನ್ನ ಪ್ರತಿಯೊಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಜೀವನ ಸಮಾನತೆಯ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ.ದೇಶದಲ್ಲಿ ಸಮಾನತೆಗಾಗಿ ಹಲವಾರು ಹೋರಾಟಗಳು ನಡೆದಿವೆ.ಆದರೆ ಕನಕದಾಸರು ಜಾತಿಯ ಕಾರಣ ಆದ ಅವಮಾನಕ್ಕೆ ಭಕ್ತಿಯಿಂದ ದೇವರನ್ನ ತನ್ನೆಡೆಗೆ ಒಲಿಸಿಕೊಂಡ ಶ್ರೇಷ್ಠ ಭಕ್ತ ,ಕನಕದಾಸರ ಭಕ್ತಿಯ ಕುರುಹಾಗಿ ಉಡುಪಿಯ ಶ್ರೀಕೃಷ್ಣ ಮಂದಿಯದಲ್ಲಿ ಕನಕಕಿಂಡಿ ಕಾಣಬಹುದು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಲಿಂಗಯ್ಯ.ಬಂಡೆ ವಿಜಯ್ ಕುಮಾರ್ .ಶ್ರೀಮತಿ ಅನಸೂಯ ಜಿ.ಅಶ್ವತ್ ನಾರಾಯಣ್.ಮುಖ್ಯೋಪಧ್ಯಾಯರಾದ ಭೂಜಾತೆ.ಶಿಕ್ಷಕರಾದ ರೇಖಾ.ರೋಹಿಣಿ ಭಾಗವತ್ . ಮುಂತ್ತಾದವರು ಉಪಸ್ಥಿತರಿದರು.

ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಜಿ.ಅಶ್ವತ್ ನಾರಾಯಣ್ ಕಚೇರಿಯಲ್ಲಿ ನಡೆದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!