ತಿಪಟೂರು:ಜುಲೈ 20ರಂದು ಭಾನುವಾರ ಸಂಜೆ 05ಗಂಟೆಗೆ ಟೀಮ್ ಹಲ್ಕಾ ಸಂಘಟನೆ ವತಿಯಿಂದ ಮಿಸ್ಟರ್ – ತಿಪಟೂರು 2025 ದೇಹದಾಡ್ಯ ಸ್ಪರ್ಧೆ ಏರ್ಪಡಿಸಲಾಗಿದೆ.

ನಗರದ ಕೌಸ್ತುಭಾ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಟೀಮ್ ಹಲ್ಕಾ ಸಂಘಟನೆ ಅಧ್ಯಕ್ಷ ಹಾಗೂ ದೇಹಧಾಡ್ಯ ಪಟ್ಟು ಫರಾಜ್ ಖಾನ್ ಮಾತನಾಡಿ ನಮ್ಮ ಮನುಷ್ಯನ ದೈಹಿಕ ಆರೋಗ್ಯಕ್ಕೆ ವ್ಯಾಯಾಮ ಮುಖ್ಯ,ಯುವಕರಲ್ಲಿ ದೈಹಿಕ ಆರೋಗ್ಯ ವೃದ್ದಿಗೆ ಸಹಕಾರಿಯಾಗಬಲ್ಲ,ದೇಹಧಾಡ್ಯ ಕ್ರೀಡೆಯನ್ನ ಪ್ರೋತ್ಸಾಹಿಸುವ ದೃಷ್ಠಿಯಿಂದ ತಿಪಟೂರು ನಗರದ ಕರ್ನಾಟಕ ಲೇಹೌಟ್ ಪಕ್ಕದ ಜಿಕೆಎಂ ನಗರದಲ್ಲಿ ಮಿಸ್ಟರ್ ತಿಪಟೂರು ದೇಹದಾಡ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟ ಹೆಸರಾಂತ ದೇಹಾದಾಡ್ಯ ಪಟುಗಳು ಭಾಗವಹಿಸುತ್ತಿದ್ದು.ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ತಿಳಿಸಿದರು.

ಮದೀನ ಮಸೀದಿ ಉಪಾಧ್ಯಕ್ಷ ಹಾಗೂ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸೈಫುಲ್ಲ ಎಂ. ಮಾತನಾಡಿ ಮನುಷ್ಯನ ಆರೋಗ್ಯಕ್ಕೆ ಕ್ರೀಡೆ ಹಾಗೂ ವ್ಯಾಯಾಮ ಸಹಕಾರಿಯಾಗಿವೆ. ಉತ್ತಮ ಆರೋಗ್ಯಕ್ಕೆ ದೇಹ ಸಧೃಡವಾಗಿರಬೇಕು, ಯುವಕರಲ್ಲಿ ದೇಹದಾಡ್ಯ ಕ್ರೀಡೆ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಟೀಮ್ ಹಲ್ಕಾ ಸಂಘಟನೆ ಸಹಯೋಗದಲ್ಲಿ ಮಿಸ್ಟರ್ ತಿಪಟೂರು ದೇಹದಾಡ್ಯ ಸ್ಪರ್ಧೆಏರ್ಪಡಿಸಲಾಗಿದ್ದು.ಕ್ರೀಡಾಕೂಟದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ತಿಪಟೂರು ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆವಹಿಸಲಿದ್ದು.ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ತಿಪಟೂರು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್‌ಅರಸೀಕೆರೆ ನಗರಸಭೆ ಅಧ್ಯಕ್ಷ ಎಂ.ಸಮೀಉಲ್ಲಾ.ಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ.ಖ್ಯಾತವೈದ್ಯರಾದ ಡಾ//ಶ್ರೀಧರ್.ಡಾ//ವಿವೇಚನ್.ಡಾ//ರಕ್ಷಿತ್ ಗೌಡ.ಮುಖಂಡರಾದ ಮೇಘಶ್ರೀ ಭೂಷಣ್.ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಫುಲ್ಲ.ಹಾಜಿ ಮಹಮದ್ ದಸ್ತಗೀರ್.ಹಾಜಿ ಸಲೀಂ ಸಾಬ್ .ಮಿಲ್ಲತೆ -ಎ-ಮುಸ್ಲೀಂ ಸಂಘಟನೆ ಅಧ್ಯಕ್ಷ ಹಾಜಿ ಶೇಕ್ ಫರಾಜ್ ಮುಂತ್ತಾದವರು ಭಾಗವಹಿಸಲ್ಲಿದ್ದಾರೆ.ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕಾಗಿ ತಿಳಿಸಿದರು. ಪತ್ರಿಕಾ ಘೋಷ್ಟಿಯಲ್ಲಿ ಟೀಮ್ ಹಲ್ಕಾ ಸಂಘಟನೆ ಮುಖಂಡ ಸಂಜಯ್ ಕುಮಾರ್.ತಬ್ರೇಜ್.ಶೇಕ್ ಫರಾಜ್.ಡಿ.ಕೆ ಅಲಿಂ.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




