ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಹಾಗೂ ಮೃತರ ಕುಟುಂಬಗಳಿಗೆ ನೈತಿಕ ಬೆಂಬಲ ನೀಡಲು ಸೌಹಾರ್ದ ತಿಪಟೂರು ವೇದಿಕೆವತಿಯಿಂದ ನಗರಸಭಾ ವೃತ್ತದ ಬಳಿ ಶ್ರದ್ದಾಂಜಲಿ ಅರ್ಪಿಸಲಾಯಿತು.ಭಯೋತ್ವಾದನಕೃತ್ಯದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನಾನಿರತರನ್ನ ಉದೇಶಿಸಿ ಸೌಹಾರ್ದ ತಿಪಟೂರು ಅಧ್ಯಕ್ಷ ಅಲ್ಲಾಭಕ್ಷು ಮಾತನಾಡಿ ಪಹಲ್ಗಾಮ್ ಉಗ್ರಗಾಮಿಗಳು ಅಮಾಯಕರನ್ನ ಹತ್ಯೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ,ಬಯೋತ್ಪಾದನೆಗೆ ಜಾತಿ ಧರ್ಮ ಇರುವುದಿಲ್ಲ, ದುಷ್ಟತನ, ಹಾಗೂ ಧರ್ಮದ ಅಮಲನ್ನ ತಲೆಗೇರಿಸಿಕೊಂಡವರು,ಈ ರೀತಿಯ ಹೀನ ಕೃತ್ಯ ಮಾಡುತ್ತಾರೆ,ಯಾರೋ ದುಷ್ಟರು ಮಾಡಿರುವ ಕೃತ್ಯವನ್ನ ಎಲ್ಲಾ ಮುಸಲ್ಮಾನರ ತಲೆಗೆ ಕಟ್ಟುವ ಕುತಂತ್ರ ನಡೆಯುತ್ತಿದೆ,ಇತ್ತಿಚಿನ ದಿನಗಳಲ್ಲಿ ಧರ್ಮದ ಆಧಾರದಲ್ಲಿ ಅಮಾಯಕರ ಹತ್ಯೆ ಹಾಗೂ ಸಮಾಜವನ್ನ ವಿಭಜನೆ ಮಾಡುವ ಹುನ್ನಾರದ ಬಗ್ಗೆ ನಾಗರೀಕ ಸಮಾಜ ಎಚ್ಚರ ವಹಿಸಬೇಕು, ಕೇಂದ್ರ ಸರ್ಕಾರ ಭದ್ರತಾ ವೈಪಲ್ಯದಿಂದ ಉಗ್ರಕೃತ್ಯ ನಡೆದಿದೆ.ಉಗ್ರಗಾಮಿ ಕೃತ್ಯದಲ್ಲಿ ಹಲವಾರು ಅನುಮಾನಗಳು ಮೂಡುತ್ತಿವೆ, ಅಮೇರಿಕದ ಉಪಾಧ್ಯಕ್ಷರು ಭಾರತದ ಪ್ರವಾಸ ಕೈಗೊಂಡಿರುವ ಸಮಯದಲ್ಲಿ ಉಗ್ರಕೃತ್ಯ ನಡೆದಿರುವುದು, ಹಲವಾರು ಅನುಮಾನಗಳಿಗೆ ಎಡೆಮಾಡಿದೆ, ಕೇಂದ್ರಸರ್ಕಾರ ಒಡಂಬಡಿಕೆ ಮಾಡಿಕೊಳ್ಳುತ್ತಿರುವ ಕೃಷಿಕಾಯ್ದೆಗಳ ಗಮನ ಬೇರೆದೆ ಸೆಳೆಯಲು ಹೂಡಿರುವ ಷಡ್ಯಂತ ಎಂದು ಮೇಲ್ನೊಟಕ್ಕೆ ಅನುಮಾನಕಾಣುತ್ತಿದೆ.ಪ್ರವಾಸೋದ್ಯವ ಜಮ್ಮು ಕಾಶ್ಮೀರದ ಜೀವಾಳ,ಕಾಶ್ಮೀರಿ ಜನರ ಆದಾಯದ ಮೇಲೆ ಕರಿನೆರಳು ಕವಿದಿದೆ,ಭಯೋತ್ವಾಧನೆ ಕೃತ್ಯವನ್ನ ಪ್ರತಿಯೋಬ್ಬರೂ ಖಂಡಿಸಬೇಕು,ನಾವೇಲ್ಲ ಭಾರತೀಯರು ಒಗ್ಗಟಿನಿಂದ ಎದುರಿಸಬೇಕು,ಜಮ್ಮು ಕಾಶ್ಮೀರದಲ್ಲಿ ಹಿಂದೂ ಮುಸ್ಲೀಂಮರು ಸೌಹಾರ್ದವಾಗಿದ್ದಾರೆ,ಘಟನೆ ಖಂಡಿಸಿ ಜಮ್ಮುಕಾಶ್ಮೀರ ಬಂದ್ ಗೆ ಕರೆನೀಡಲಾಗಿದೆ, ಭಯೋತ್ಪಾದನೆಯನ್ನ ಪ್ರತಿಯೊಬ್ಬರು ಖಂಡಿಸಬೇಕು, ಸೌರ್ದತೆಗೆ ಧಕ್ಕೆ ಭಾರದಂತೆ ನಾವು ಜಾಗೃತರಾಗ ಬೇಕು ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತಸಂಘ, ಹಸಿರುಸೇನೆ ಸಂಘ, ಸೌಹಾರ್ದ ಸಂಸ್ಥೆ, ಬೆಲೆಕಾವಲು ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ವೀರಶೈವ ಲಿಂಗಾಯಿತ ಸಂಘಟನೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ,ದಲಿತ ಸಂಘಟನೆಗಳ ಒಕ್ಕೂಟ. ಭಾಗವಹಿಸಿದ್ದವು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಜಯನಂದಯ್ಯ, ರಂಗಾಪುರ ಚನ್ನಬಸವಣ್ಣ, ದೇವರಾಜು ತೀಮ್ಲಾಪುರ, ಸಾಹಿತಿ ಗಂಗಾಧರ್, ಕೃಷ್ಣಮೂರ್ತಿ ಬಿಳಿಗೆರೆ ಅಲ್ಲಾಭಕಾಷ್, ಶ್ರೀಕಾಂತ್ ಕೆಳಹಟ್ಟಿ, ರೇಣುಕರಾಧ್ಯ,ಕಾಂಗ್ರೇಸ್ ಅಲ್ಪ ಸಂಖ್ಯಾತರ ಘಟಕದ ನಗರಾಧ್ಯಕ್ಷ ಶಫೀ ಉಲ್ಲಾ, ಷರೀಪ್,ಸಮೀ ಉಲ್ಲಾ,ಅಲ್ಲಾಭಕ್ಷು,ಕಾ.ಸಾ ಪ ಅಧ್ಯಕ್ಷ ಬಸವರಾಜು, ಮಂಜಪ್ಪ,ಪ್ರಾಂತರೈತಸಂಘದ ಮಹಿಳಾ ಅಧ್ಯಕ್ಷೆ ರಾಜಮ್ಮ,ಮುಖಂಡರಾದ ಮಲ್ಲಿಕಾರ್ಜುನ್, ನಾಗರಾಜು, ಡಿಎಸ್ಎಸ್ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ ಮತ್ತಿತ್ತರು ಹಾಜರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ




