Spread the love

ತಿಪಟೂರು: ಆದಿಜಾಂಬವ ಸಹಕಾರ ಸಂಘ ಸಮುದಾಯದಲ್ಲಿ ಶಿಕ್ಷಣ.ಸಂಘಟನೆ ಹಾಗೂ ಆರ್ಥಿಕವಾಗಿ ಸಮುದಾಯವನ್ನ ಜಾಗೃತಿಗೊಳಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ವಿ.ಯೋಗೇಶ್ ತಿಳಿಸಿದರು.

ನಗರದ ವಿದ್ಯಾನಗರದಲ್ಲಿರುವ ಯೋಗೇಶ್ ರವರ ಕಚೇರಿಯಲ್ಲಿ ಶ್ರೀ ಆದಿಜಾಂಬವ ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ 2026 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಆದಿಜಾಂಬವ ಸಹಕಾರ ಸಂಘ ಆರ್ಥಿಕವಾಗಿ ಸಧೃಡವಾಗ ಬೇಕು.ಸಮುದಾಯದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿಗೊಳಿಸುವ ಕೆಲಸ ಮಾಡಬೇಕು.ಸಂಘದ ಕಾರ್ಯಕ್ರಮಗಳು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಕೆಲಸ ಮಾಡಬೇಕು,ಆಗಮಾತ್ರ ಸಹಕಾರ ಸಂಘದ ಉದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ನಿಯಮಿತದ ಅಧ್ಯಕ್ಷ ಎಂ.ಎಸ್. ಮಹದೇವ್,ಉಪಾಧ್ಯಕ್ಷ ಎಸ್. ಶಂಕರಪ್ಪ,ನಿರ್ದೇಶಕರಾದ ಟಿ.ಕೆ. ಪಟ್ಟಾಭಿರಾಮು,ಕೃಷ್ಣಮೂರ್ತಿ, ಕಾರ್ಯದರ್ಶಿ ರೋಹಿತ್,ನಗದು ಸಹಾಯಕ ಹರ್ಷ, ಸದಸ್ಯರಾದ ನಂಜುಂಡಪ್ಪ,ಶಿವಣ್ಣ,ಸದಾನಂದ್, ಸುಮಿತ್ರ ಜಗದೀಶ್ ಮತ್ತು ಪ್ರಕಾಶ್ ಸೇರಿದಂತೆ ನಿಯಮಿತದ ಪದಾಧಿಕಾರಿಗಳು,ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!