ತಿಪಟೂರು: ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಅಂಗವಾಗಿ ಈದ್ ಮಿಲಾದ್(ಮಿಲಾದುನ್ನಬಿ)ಯನ್ನು ತಿಪಟೂರು ನಗರದ ವಿವಿದೆಡೆ ಸಂಭ್ರಮದಿಂದ ಆಚರಿಸಲಾಯಿತು.

ಶುಕ್ರವಾರ ಮುಂಜಾನೆ ಹೆಚ್ಚಿನ ಮಸೀದಿಗಳಲ್ಲಿ ಮೌಲೂದ್ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ವನ್ನು ನೀಡಲಾಯಿತು.ನಗರದ ಗಾಂಧೀನಗರದ ಮಸೀದಿ ರಸ್ತೆ.ದಸ್ತಗಿರಿಕಟ್ಟೆ.ಚಾಮುಂಡೇಶ್ವರಿ ಬಡಾವಣೆ,ಗುರಪ್ಪನಕಟ್ಟೆ ಬೋವಿಕಾಲೋನಿ.ಪೋಲೀಸ್ ಚೌಕಿ ಸರ್ಕಲ್ ಹಾಗೂ ಆರ್.ಸಿ.ಸಿ ಟ್ಯಾಂಕ್ ಸರ್ಕಲ್ .ಪೊಲೀಸ್ ಲೈನ್ .ಮಕಾನ್ ಲೈನ್ ರಸ್ತೆ ಸೇರಿದಂತೆ ಹಲವುಕಡೆಗಳಲ್ಲಿ, ವಿದ್ಯುತ್ ದೀಪಾಲಂಕಾರ ಹಾಗೂ ಬ್ಯಾನರ್ ಬಂಟಿಗ್ಸ್ ಗಳಿಂದ ಅಲಂಕರ ಮಾಡಲಾಗಿತ್ತು.

ಬೆಳಗ್ಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮುಸಲ್ಮಾನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಆರ್.ಸಿ.ಸಿ ಟ್ಯಾಂಕ್ ಸರ್ಕಲ್.ಬೋವಿಕಾಲೋನಿ ಸರ್ಕಲ್ ನಲ್ಲುಸಿಹಿ ತಿಂಡಿ ಹಾಗೂ ಪಾನೀಯ ವಿತರಿಸಲಾಯಿತು.

ಮುಸಲ್ಮಾನರು ತಮ್ಮ ಮನೆಗಳಲ್ಲಿ ಸಿಹಿ ಖ್ಯಾದ್ಯಗಳು ಹಾಗೂ ಮಾಂಸದ ಊಟ ತಯಾರು ಮಾಡಿ, ಯುವಕರು,ಮಹಿಳೆಯರು ಮಕ್ಕಳು ಹೊಸ ಬಟ್ಟೆಧರಿಸಿ ಸಂಭ್ರಮಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ









