Spread the love

ತಿಪಟೂರು :ತಾಲ್ಲೋಕಿನ ಶ್ರೀಕ್ಷೇತ್ರ ಕೆರೆಗೋಡಿರಂಗಾಪುರ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಸಮುದಾಯ ಭವನದಲ್ಲಿ ನಡೆಸ ಎಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕೋನೆಹಳ್ಳಿ ವತಿಯಿಂದ ನಡೆದ ವಿಕಸಿತ ಭಾರತ ಕೃಷಿ ಸಂಕಲ್ಪ ಅಭಿಯಾನಕ್ಕೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಹಾಯಕ ಕೃಷಿ ಸಚಿವ ವಿ.ಸೋಮಣ್ಣಚಾಲನೆ ನೀಡಿದರು.


ಕೆರೆಗೋಡಿ ರಂಗಾಪುರ ಭೂಸುಕ್ಷೇತ್ರಾಧ್ಯಕ್ಷರಾದ ಪರಪೂಜ್ಯ ಶ್ರೀಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಹಾಯಕ ಸಚಿವ ವಿ.ಸೋಮಣ್ಣನವರ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಆಹ್ವಾನಿತ ಗಣ್ಯರ ಹೊರತಾಗಿ ಸರ್ಕಾರದ ಶೀಷ್ಠಾಚಾರದ ಪಾಲನೆಯಾಗದೆ. ರೌಡಿ ಶೀಟರ್ ಗಳು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದರು,ಆದರೆ ಶಿಷ್ಠಾಚಾರದಂತೆ ಕಾರ್ಯಕ್ರಮ ನಡೆಯದೆ,ವೇದಿಕೆಯಲ್ಲಿ ಕೆಲ ಮುಖಂಡರು ತಮ್ಮ ಮನಸೋಇಚ್ಚೆಯಂತೆ ವೇದಿಕೆಯಲ್ಲಿ ತಾವೇ ಆಸೀನರಾಗುವ ಮೂಲಕ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ಅಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನ ಶಿಷ್ಠಾಚಾರ ಮರೆತು ಕಾರ್ಯಕ್ರಮ ನಡೆಸಿದರು,
ಕಾರ್ಯಕ್ರಮದಲ್ಲಿ ಆಹ್ವಾನಿತ ಗಣ್ಯರಿಗೆ ಕನಿಷ್ಠ ಗೌರವನ್ನ ನೀಡುವುದನ್ನ ಅಧಿಕಾರಿಗಳು ಮರೆತ್ತಿದ್ದಾರೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸದೆ.ಹಲವಾರು ಗೊಂದಲ್ಲದಲ್ಲಿಯೇ ಮುಕ್ತಾಯಗೊಳಿಸಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಯಿತು.


ತಾಲ್ಲೋಕು ಕೃಷಿಕ ಸಮಾಜದ ಅಧ್ಯಕ್ಷರ ಬೇಸರ:

ವಿಕಸಿತ ಭಾರತ ಕೃಷಿ ಅಭಿಯಾನ ಉದ್ಘಾಟನೆ ವೇಳೆ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಶಿಷ್ಠಾಚಾರದಂತೆ ಕಾರ್ಯಕ್ರಮ ನಡೆಸುವುದು ವಾಡಿಕೆ ಆದರೆ,ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಗನೆ ಮಾಡಿ,ಆಹ್ವಾನಿತ ಗಣ್ಯರಿಗೆ ಸೂಕ್ತ ಗೌರವ ನೀಡದೆ ಅವಮಾನಿಸಿದ್ದಾರೆ. ಇದರೆ ನೇರಹೊಣೆಗಾರಿಕೆಯನ್ನ ಅಧಿಕಾರಿಗಳೆ ಹೊರಬೇಕಿದೆ. ಪರಮಪೂಜ್ಯರು ಹಾಗೂ ಅತಿಗಣ್ಯವ್ಯಕ್ತಿಗಳು ಉಪಸ್ಥಿತಿ ಇರುವ ವೇದಿಕೆಯಲ್ಲಿ ಆಹ್ವಾನವಿಲ್ಲದ ವ್ಯಕ್ತಿಗಳನ್ನ ವೇದಿಕೆಯಲ್ಲಿ ಆಸೀನರಾಗಲು ಅವಕಾಶ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

error: Content is protected !!