ತಿಪಟೂರು:ನಗರದ ಹೃದಯ ಭಾಗವಾದ ನಗರಸಭೆ ಮುಂಭಾಗದ ಸಿಂಗ್ರಿನಂಜಪ್ಪ ವೃತ್ತದಲ್ಲಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಗಡಿಯಾರ ಗೋಪುರ ನಿರ್ಮಾಣ ಮಾಡಲಾಗುತ್ತಿದೆ.79ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಲಾಗಿದೆ ಎನ್ನಲಾಗಿದ್ದು ,ಗಡಿಯಾರ ಗೋಪುರ ನಿರ್ಮಾಣದ ಕಾಮಗಾರಿ ಅರಾತುರಿಯಲ್ಲಿ ನಡೆಯುತ್ತಿದೆ.ಗಡಿಯಾರ ಗೋಪುರ ನಿರ್ಮಾಣಕ್ಕಾಗಿಯೇ ಸಿಂಗ್ರಿನಂಜಪ್ಪ ವೃತ್ತದ ಮಧ್ಯಭಾಗದಲ್ಲಿ ಇದ್ದ ಹೈ ಮಾಸ್ಕ್ ಲೈಟ್ ಕಂಬವನ್ನ ಸ್ಥಳಾಂತರ ಮಾಡಲಾಗಿದೆ.ಕಾಮಗಾರಿಯೇನೋ ಭರದಿಂದ ಸಾಗುತ್ತಿದ್ದರೆ ಹೈ ಮಾಸ್ಕ್ ಲೈಟ್ ಇಲ್ಲದೆ ಮೂರ್ಲಾಕ್ಕು ದಿನಗಳಿಂದ ವೃತ್ತದಲ್ಲಿ ಕತ್ತಲೆ ಆವರಿಸಿದ್ದು,ತುರ್ತಾಗಿ ಹೈ ಮಾಸ್ಕ್ ಅಳವಡಿಸ ಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.ಆದರೆ ಬಿಜೆಪಿ ಸದಸ್ಯರು ಟೆಂಡರ್ ಕರೆಯದೆ ಕಾಮಗಾರಿ ನಡೆಸಲಾಗುತ್ತಿದೆ ಕ್ಲಾಕ್ ಟವರ್ ನಿರ್ಮಾಣಕ್ಕೆ ನಿರ್ದಿಷ್ಟ ಜಾಗ ನಿಗದಿಗೊಳಿಸಿದೆ ಕಾಮಗಾರಿ ಮಾಡಲಾಗುತ್ತಿದೆ.ಎಂದು ನಗರಸಭೆ ನಮಕಾವಸ್ತೆಯ ದೂರು ನೀಡಿ ಕೈ ತೊಳೆದುಕೊಂಡಿದ್ದಾರೆ. ಏನಾದರೂ ಮಾಡಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ






