Spread the love

ಕಲ್ಪತರು ನಗರಿ ತಿಪಟೂರು ವಿಶ್ವವಿಖ್ಯಾತ ಶ್ರೀ ಸತ್ಯಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿಸಲಾಯಿತು.ವಾಸವಿ ಸಮಾಜದ ಕಟ್ಟಡದಲ್ಲಿ ಕೊಪ್ಪ ಕುಂಬಾರ ಸಮಾಜದ ದಿ.ಯೋಗಾನಂದ ರವರ ಪುತ್ರ ಲಕ್ಷ್ಮೀಶ (ಚೇತನ್)ಕೈ ಕುಂಚದಲ್ಲಿ ತಯಾರಾದ ಶ್ರೀ ಸತ್ಯಗಣಪತಿಯನ್ನ ಪುಣ್ಯಪೂಜಾಕಾರ್ಯಗಳನ್ನ ನೆರವೇರಿಸಿ,ಮೆರವಣಿಗೆ ಮೂಲಕ ಆಸ್ಥಾನ ಮಂಟಪಕ್ಕೆ ಕರೆತರಲಾಯಿತು.ಶ್ರೀ ಗಣಪತಿ ಮೆರವಣಿಗೆ ಸಾಗುವ ದೊಡ್ಡಪೇಟೆ ಬಿ.ಹೆಚ್ ರಸ್ತೆ ಮಾರ್ಗದಲ್ಲಿ ಭಕ್ತರು, ಹೂವು ಹಣ್ಣು ಹಾಗೂ ಪುಷ್ಪಾರ್ಚನೆ ಮಾಡಿ ಪೂಜೆಸಲ್ಲಿಸಿದರು.ಈ ಮಾರ್ಗ ವಿಶೇಷವಾಗಿ ಶ್ರೀ ದುರ್ಗಾಂಬ ಇವೆಂಟ್ಸ್ ತಿಪಟೂರು ವತಿಯಿಂದ ಆಸ್ಥಾನ ಮಂಟಪ ಮಾರ್ಗದ ರಸ್ತೆಯಲ್ಲಿ ವಿಶೇಷ ಬಣ್ಣಗಳಿಂದ ರಂಗೋಲಿಯಿಂದ ಅಲಂಕರಿಸಲಾಗಿತ್ತು.

ಶಾಸಕರಾದ ಕೆ.ಷಡಕ್ಷರಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ .ಶ್ರೀ ಸತ್ಯಗಣಪತಿ ಸೇವಾ ಸಮಿತಿ ಅಧ್ಯಕ್ಷ ಶ್ರೀಕಂಠು,ಜೆಡಿಎಸ್ ಮುಖಂಡ ಕೆ.ಟಿ,ಶಾಂತಕುಮಾರ್.ಮುಖಂಡರಾದ ನಿಖಿಲ್ ರಾಜಣ್ಣ,ಪ್ರಸನ್ನ ಕುಮಾರ್ ತರಕಾರಿ ಪ್ರಕಾಶ್.ತರಕಾರಿಗಂಗಾಧರ್.ಸೇರಿದಂತೆ ಸಾವಿರಾರು ಜನ ಭಕ್ತರು ಮೆರವಣಿಗೆಯಲ್ಲಿ ಸಾಗಿ ಗಣಪತಿ ಬಪ್ಪ,ಮೋರಿಯಾ,ಮಂಗಳ ಮೂರ್ತಿ ಮೋರಿಯಾ,ತಿಪಟೂರು ಒಡೆಯ ಶ್ರೀ ಸತ್ಯಗಣಪತಿ ಕಿ ಜೈ ಎನ್ನೋ ಜಯಘೋಷದೊಂದಿಗೆ ಮೆರವಣಿಗೆ ನಡೆಸಿ,ಶ್ರೀಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಿ ಪ್ರಮುಖ ಅರ್ಚಕರಾದ ತಿಮ್ಮಪ್ಪ ಭಟ್ಟರ ನೇತೃತ್ವದಲ್ಲಿ ಶ್ರೀ ಸತ್ಯಗಣಪತಿ ಹಾಗೂ ಶ್ರೀಗೌರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ತಿಪಟೂರಿನ ಶ್ರೀ ಸತ್ಯ ಗಣಪತಿ ವಿಶ್ವವಿಖ್ಯಾತ ಗಣೇಶೋತ್ಸವಗಳಲ್ಲಿ ಒಂದು ಮೈಸೂರು ದಸರಾ, ಬೆಂಗಳೂರು ಕರಗದಷ್ಟೇ ಪ್ರಸಿದ್ದಿ ಪಡೆದ ಗಣೇಶ, ತಿಪಟೂರು ಗಣೇಶೋತ್ಸವ ವಿಶೇಷ ಹಾಗೂ ವಿಶಿಷ್ಟವೂ ಹೌದು,ಸಂಪ್ರದಾಯ ಬದ್ದವಾಗಿ,ಸ್ಥಾಪನೆಗೊಂಡು,ಪೂಜಿಸುವ ತಿಪಟೂರಿನ ಗಣಪತಿ ಉತ್ಸವ ಪ್ರಾರಂಭವಾಗಿದ್ದು ಸ್ವತಂತ್ರ್ಯ ಚಳುವಳಿಯ ಕಾಲದಲ್ಲಿ. 1929-30 ರ ಸಮಯದಲ್ಲಿ ಸ್ವತಂತ್ರ್ಯ ಚಳುವಳಿ ಸಂಘಟನೆಗಾಗಿ ಬೆಂಗಳೂರಿಂದ ವಲಸೆ ಬಂದ ಶ್ರೀ ತಿಮ್ಮಪ್ಪನವರು ದಿವಾನ್ ನರಸಿಂಹಯ್ಯಂಗಾರ್ ಹಾಗೂ ದಾಸಪ್ಪ ನವರು ಪ್ರಥಮಭಾರೀಗೆ ಪೆಂಡಾಲ್ ಹಾಕಿ ಶ್ರೀ ಸತ್ಯ ಗಣಪತಿಯನ್ನುಸ್ಥಾಪಿಸಿ,ಪೂಜಿಸಲಾಯಿತು.ಸ್ವತಂತ್ರ್ಯ ಹೋರಾಟದ ಹಿನ್ನೆಲೆ ಆರಂಭವಾದ, ಗಣೇಶ ಪ್ರತಿಷ್ಠಾಪನೆ ಪ್ರತಿವರ್ಷ ಪೆಂಡಲ್ ನಿರ್ಮಾಣ ಮಾಡಿ ಗಣೇಶ ಹಬ್ಬ ಆಚರಣೆ ಮಾಡುತ್ತಾ ಬಂದಿದ್ದು, ತ್ರಿಕಾಲ ಪೂಜೆ,ಹೋಮ ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. 1976ರಲ್ಲಿ ಸರ್ಕಾರದಿಂದ ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಗೆ 50 ಲಕ್ಷ ಬೆಲೆಬಾಳುವ ದೊಡ್ಡ ಜಾಗ ಮಂಜೂರಾಯಿತು. ಆಗಿನ ಟ್ರಸ್ಟ್ ಅಧ್ಯಕ್ಷರಾಗಿದ್ದ ಮಾಜಿ ಶಾಸಕರಾದ ಶ್ರೀಬಿ.ಎಸ್.ಚಂದ್ರಶೇಖರಯ್ಯನವರು ಆ ಜಾಗದಲ್ಲಿ ಆಸ್ಥಾನ ಮಂಟಪ ಕಟ್ಟಡವನ್ನುಎಲ್ಲಾ ದಾನಿಗಳ ನೆರವಿನಿಂದ ನಿರ್ಮಿಸಲಾಯಿತು.ಬಿ.ಎಸ್ ಚಂದ್ರಶೇಖರಯ್ಯನವರ ನಂತರ ಅವರ ಪುತ್ರ ಬಿ‌.ಸಿ ರವಿಶಂಕರ್.ಹಾಗೂ ಅವರ ನಂತರ ಬಿ.ಆರ್ ಶ್ರೀಕಂಠ,ರವರು ಪೂಜಾಕೈಂಕರ್ಯದ ಪರಂಪರೆ ಮುಂದುವರೆಸಿಕೊಂಡು ಬಂದಿದ್ದು.
ಶ್ರೀಸತ್ಯಗಣಪತಿ ಪ್ರತಿಷ್ಠಾನೆಗೊಂಡ ದಿನದಿಂದ ನಿತ್ಯಪೂಜೆ ಕೈಂಕರ್ಯಗಳ ಜೊತೆ ವಿಶೇಷ ಸಂಸ್ಕೃತಿಕ ಕಾರ್ಯಕ್ರಮಗಳು,ಆರ್ಕೇಸ್ಟ್,ಭಜನೆ.ಹರೀಕಥೆಯಂತೆ ಸಾಲು ಸಾಲು ಕಾರ್ಯಕ್ರಮಗಳು ನಡೆಯುವುದು ವಾಡಿಕೆಯಾಗಿದ್ದು,ತಿಪಟೂರು ಜನರ ಪಾಲಿಗಂತು ಗಣಪತಿ ಹಬ್ಬ ಬಂದರೇ ಸಂಭ್ರಮಹೋ ಸಂಭ್ರಮ….
ತಿಪಟೂರು ಶ್ರೀ ಸತ್ಯಗಣಪತಿ ಸುಮಾರು 6.5ಅಡಿ ಎತ್ತರ ಹಾಗೂ ವಿಶೇಷ ರೂಪ,ಆಕರ್ಷಣೆಯಿಂದ ಕೂಡಿದ್ದು,ಕೊಪ್ಪ ಗ್ರಾಮದ ಕುಂಭರ ಸಮಾಜದ ನಂಜಪ್ಪ ಶೆಟ್ಟರಿಂದ ಗಣೇಶ ಮೂರ್ತಿ ತಯಾರಿಕೆ ಆರಂಭಗೊಂಡು,ಯೋಗಾನಂದ್ ನಂತರ ಅವರ ಪುತ್ರ ಲಕ್ಷ್ಮೀಶ(ಚೇತನ್)15ದಿನಗಳ ಕಾಲ ನಿರಂತರ ವೃತಾಚರಣೆಯೊಂದಿಗೆ ಮೂರ್ತಿ ತಯಾರುಮಾಡುತ್ತಾ ಬಂದಿದ್ದು ಆಕಾರ ರೂಪ ಬದಲಾಗದೆ,ಈ ಕುಟುಂಬ 50ವರ್ಷಗಳಿಂದ ಕೈಂಕರ್ಯ ಮುಂದುವರೆಸಿಕೊಂಡು ಬಂದಿರುವುದು ವಿಶೇಷ.ತಿಪಟೂರು ಜನರ ದೊರೆ ಶ್ರೀಸತ್ಯಗಣಪತಿ ಪ್ರತಿಷ್ಠಾಪನೆ ಹಬ್ಬದ ರಂಗುಹೆಚ್ಚಿಸಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!