ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಈರಲಗೆರೆ ಗ್ರಾಮದ ಬಳಿ ಇರುವ ಶ್ರೀ ಕೃಷ್ಣಪ್ಪ ಜಲ್ಲಿಕ್ರಷರ್ ಬಂಡೆ ಸ್ಪೋಟಕ್ಕೆ ಭಾರೀ ಪ್ರಮಾಣದ ಸ್ಪೋಟಕಗಳನ್ನ ಬಳಸಿ, ಕಲ್ಲುಗಳನ್ನ ಸ್ಪೋಟಿಸುತ್ತಿದ್ದು.ಸ್ಪೋಟದ ರಭಸಕ್ಕೆ ಶಾಂತಿನಿವಾಸ ಎಸ್ಟೆಟ್ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಮನೆಗಳು ಬಿರುಕು ಬಿಟ್ಟಿದ್ದು,ಮನೆಗಳು ಕುಸಿಯು ಭೀತಿಯಿಂದ ಮನೆತೊರೆದು ತಿಪಟೂರು ನಗರಸೇರುತ್ತಿದ್ದಾರೆ.ಹಲವಾರು ತೋಟದ ಮನೆ ರೈತರು ಒಕ್ಕಲೆದು ಬೇರೆಡೆ ವಾಸಕ್ಕೆ ಹೋಗಿದ್ದಾರೆ,

ಅಲ್ಲದೆ ರೈತರು ಜಮೀನುಗಳ ಕೊರೆಸಿದ ಬೋರ್ವೆಲ್ ಬತ್ತಿಹೋಗುತ್ತಿದ್ದು,ರೈತರ ಜೀವನ ಬೀದಿಗೆ ಬೀಳುವ ಸಂಕಷ್ಟ ಎದುರಾಗಿದೆ.ಕ್ರಷರ್ ಮಾಲೀಕರ ಧನದಾಹಕ್ಕೆ ರೈತರ ಬದುಕು ಮೂರಾಬಟ್ಟೆಯಾದರೆ.ಪ್ರತಿದಿನ 20ರಿಂದ 30ಅಡಿ ಆಳಕ್ಕೆ ದೊಡ್ಡ ದೊಡ್ಡ ಬೋರ್ವೆಲ್ ಮಷಿನ್ ಮೂಲಕ ಕೊರೆದು ಬ್ಲಾಸ್ಟ್ ಮಾಡುತ್ತಿದ್ದು.ಸ್ಪೋಟದ ಶಬ್ದ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಕೇಳಿಸುವ ಜೊತೆಗೆ,ಕಿಲೋ ಮೀಟರ್ ಗಟ್ಟಲೆ ಭೂಮಿ ಕಂಪನ ಉಂಟಾಗುತ್ತದೆ.ಸುಮಾರು 80ರಿಂದ 100ಅಡಿ ಆಳಕ್ಕೆ ಕಂದಕ ಉಂಟುಮಾಡಿದ್ದು ಸುತ್ತಮುತ್ತ ಪ್ರದೇಶಗಳಲ್ಲಿ ಅಂತರ್ಜಲ ಬತ್ತುವ ಭೀತಿ ಎದುರಾಗಿದೆ,ಕ್ರಷರ್ ಧೂಳಿನಿಂದ ರೈತರು ಬೆಳೆದ ತೆಂಗು ಹಾಗೂ ರೇಷ್ಮೆ ಸೇರಿದಂತೆ ಫಸಲು ಹಾಳಾಗಿದ್ದು.ಹತ್ತಾರು ಬೋರ್ವೆಲ್ ಗಳು ಬತ್ತಿಹೋಗಿವೆ.ಈ ಹಿಂದೆ ಮಾಜಿ ಶಾಸಕ ವಿ.ಎಲ್ ಶಿವಪ್ಪ ನವರು ಜಿಲ್ಲಾಪರೀಷತ್ ಸದಸ್ಯರಾಗಿದ ವೇಳೆ ರೈತರು ಜನಜಾನುವಾರುಗಳ ಕುಡಿಯುವ ನೀರಿಗಾಗಿ ಕಟ್ಟಿದ ಗೋಕಟ್ಟೆ ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ.ಜಾನುವಾರುಕುಡಿಯುವ ನೀರಿಗೂ ತಾತ್ಪರ ಪಡುವಂತ್ತಾಗಿದೆ.

ಜಿಲ್ಲಾಡಳಿತ ವೈಪಲ್ಯ ಹಾಗೂ ರಾಜಕೀಯ ಪ್ರಭಾವಿಗಳ ಕೈಗೊಂಬೆಗಳಾಗಿ ವರ್ತಿಸುತ್ತಿರುವ ಜಿಲ್ಲಾಡಳಿತದ ಲಕ್ಷಾನುಲಕ್ಷ ವನಮೂಲಿಕೆ. ಸಂಪತ್ತು, ಹಲವಾರು ರೋಗಗಳಿಗೆ ರಾಮಬಾಣವಾಗಿದ ಹಳಲೇ ಕಾಯಿ ಮರಗಳು ನಾಶವಾಗುತ್ತಿದರು .ಗಣಿಮಾಲಿಕರ ಹಿತಕ್ಕಾಗಿ ಜಿಲ್ಲಾಡಳಿತ ಕೈಕಟ್ಟಿಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಶಾಂತಿ ನಿವಾಸ ಎಸ್ಟೇಟ್ ಗ್ರಾಮ ದೊಡ್ಡಮಾರ್ಪನಹಳ್ಳಿ. ಗ್ರಾಮಸ್ಥರನ್ನ ಒಳಗೊಂಡ ಬಿಜಿಪಿ ಮುಖಂಡರು ತಹಸೀಲ್ದಾರ್ ರವರಿಗೆ ಮನವಿ ಪತ್ರಸಲ್ಲಿಸಿದರು
ಬಿಜೆಪಿ ತಾಲ್ಲೋಕು ಅಧ್ಯಕ್ಷ ಸತೀಶ್ ಮಾತನಾಡಿ ಶ್ರೀ ಕೃಷ್ಣ ಕ್ರಷರ್ ಸ್ಪೋಟದಿಂದ ಮನೆಗಳು ಬಿರುಕು ಬಿಟ್ಟಿವೆ.ರೈತರ ಬೋರ್ವೆಲ್ ಬತ್ತಿಹೋಗುತ್ತಿದ್ದು, ಗಣಿಬಾದಿತ ರೈತರಲ್ಲಿ ಕೆಲವರಿಗೆ ಹಣದ ಆಮೀಷ ಒಡ್ಡಿ,ದೂರು ನೀಡದಂತೆ ಮಾಡಿದ್ದಾರೆ.ಅನೇಕ ಭಾರೀ ದೂರು ನೀಡಿದರು, ತಾಲ್ಲೋಕು ಆಡಳಿತವಾಗಲೀ ಜಿಲ್ಲಾಡಳಿತವಾಗಲಿ ಕ್ರಷರ್ ಮಾಲೀಕರ ವಿರುದ್ದ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದು.ಕೂಡಲೇ ಗಣಿ ಗುತ್ತಿಗೆ ರದ್ದುಪಡಿಸಬೇಕು. ಗಣಿಭಾದಿತ ರೈತರಿಗೆ ಸೂಕ್ತಪರಿಹಾರ ನೀಡಬೇಕು.ಕ್ರಷರ್ ಸ್ಪೋಟದಿಂದ ತೊಂದರೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಗೆ ಹಾಗೂ ಗಣಿಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದರು ಯಾವುದೇ ಕ್ರಮಕೈಗೊಳ್ಳದೆ ಗಣಿ ಮಾಲೀಕರ ಪ್ರಭಾವಕ್ಕೆ ಒಳಗಾಗಿ ರೈತರ ಜೀವನ ಹಾಳುಮಾಡುತ್ತಿವೆ ಎಂದು ಒತ್ತಾಯಿಸಿದರು.
ಮುಖಂಡರಾದ ಗಂಗರಾಜು,ಬಿಜೆಪಿ ನಗರಾಧ್ಯಕ್ಷ ಜಗದೀಶ್.ಹರ್ಷ.ನಿಕಟ ಪೂರ್ವ ಬಿಜೆಪಿ ತಾಲ್ಲೋಕು ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್.ಬಿಜೆಪಿ ಯುವ ಮುಖಂಡ ವಿಶ್ವದೀಪ್ . ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







