ತಿಪಟೂರು:ಒಕ್ಕಲಿಗ ಸಂಘ ತಿಪಟೂರು ವತಿಯಿಂದ ಸೆಪ್ಟೆಂಬರ್ 16 ರಂದು ಒಕ್ಕಲಿಗ ಭವನದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ,ಹಾಗೂ ಒಕ್ಕಲಿಗ ಸಂಘದ ವಿದ್ಯಾನಿಧಿ ಯೋಜನೆ ದಾನಿಗಳಿಗೆ ಸನ್ಮಾನ ಸಮಾರಂಭ ಆಯೋಜನೆ ಮಾಡಲಾಗಿದೆ.
ನಗರದ ಒಕ್ಕಲಿಗ ಭವನದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾಪುರಸ್ಕಾರ ಸಮಿತಿ ಅಧ್ಯಕ್ಷರಾದ ದೇವಾನಂದ್ ಮಾತನಾಡಿ ಪ್ರತಿವರ್ಷದಂತೆ ಒಕ್ಕಲಿಗ ಸಂಘದಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ,ಮತ್ತು ಪದವಿ, ಸ್ನಾತಕೋತರ ಪದವಿಧರರಿಗೆ ಪ್ರತಿಭಾಪುರಸ್ಕಾರ ಆಯೋಜಿಸಿದು. ಸೆಪ್ಟೆಂಬರ್ 16ರಂದು ಬೆಳಗ್ಗೆ 11.ಗಂಟೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಶ್ರೀಶ್ರೀಡಾ//ನಿರ್ಮಲಾನಂದನಾಥಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ,ಆದಿಚುಂಚನ ಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನಾನಂದನಾಥ ಮಹಾಸ್ವಾಮೀಜಿಯವರು.ಹಾಸನ ಶಾಖಾಮಠದ ಶ್ರೀ ಶಂಭುನಾಥ ಮಸ್ವಾಮೀಜಿ.ಆದಿಚುಂಚನಗಿರಿ ದಸರೀಘಟ್ಟ ಶಾಖಾಮಠದ ಶ್ರೀಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿಗಳ ಉಪಸ್ಥಿತಿಯಲ್ಲಿ .ಶಾಸಕ ಕೆ.ಷಡಕ್ಷರಿ.ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್,ತಿಪಟೂರು ಉಪವಿಭಾಗಾಧಿಕಾರಿಗಳಾದ ಶ್ರೀಮತಿ ಸಪ್ತಶ್ರೀ .ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ತಾರಾಮಣಿ.ಖ್ಯಾತ ವೈದ್ಯರಾದ ಡಾ// ಬಿ.ಜಿ ವಿವೇಚನ್ ರವರ ಮುಖ್ಯಾತಿಥಿಗಳಾಗಿ ಭಾಗವಹಿಸಲಿದ್ದಾರೆ.ಎಂದು ತಿಳಿಸಿದರು
ಪತ್ರಿಕಾಘೋಷ್ಠಿಯಲ್ಲಿ ಪ್ರತಿಭಾಪುರಸ್ಕಾರ ಸಮಿತಿ ಖಜಾಂಚಿ ಎ.ಬಿ ಚಂದ್ರಶೇಖರ್.ಒಕ್ಕಲಿಗ ಸಂಘದ ಕಾರ್ಯದರ್ಶಿ ಬಸವರಾಜು.ಪ್ರಚಾರಸಮಿತಿ ಸದಸ್ಯರಾದ ಎಸ್.ಆರ್ ಸ್ವಾಮಿ.ಪ್ರಸನ್ನ ಕುಮಾರ್. ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ






