Spread the love

ತಿಪಟೂರು :ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತ (ಪ್ರವಾಸಿ ಮಂದಿರ ವೃತ್ತ)ದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ನಗರಸಭೆ ಅನುದಾನದಲ್ಲಿ ನಗರದ ಡಾ//ಅಂಬೇಡ್ಕರ್ ವೃತ್ತ ಹಾಗೂ ಹಾಲ್ಕುರಿಕೆರಸ್ತೆ ಚರ್ಚ್ ಬಳಿ.ಹಾಸನ ಸರ್ಕಲ್ ರಂಗಾಪುರ ರಸ್ತೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸುಮಾರು 10ಲಕ್ಷ ಅನುದಾನ ನೀಡಿದೆ.ಆದರೆ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದ ಬಿ.ಹೆಚ್ ರಸ್ತೆ ಬೆಸ್ಕಾಂ ಕಚೇರಿ ಮುಂದೆ ನಿರ್ಮಾಣವಾಗುತ್ತಿರುವ ಪ್ರಯಾಣಿಕರ ತಂಗುದಾಣ,ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತದು,ನಗರಸಭೆ ಇಂಜಿನಿಯರ್ ಗಳ ದೂರದೃಷ್ಠಿ ಕೊರತೆಗೆ ಸಾಕ್ಷಿಯಾಗಿದೆ.ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದ್ದರೂ ಸೂಕ್ತ ತಿಳುವಳಿಕೆ ನೀಡಬೇಕಾದ ಪೊಲೀಸ್ ಇಲಾಖೆಯ ಕಣ್ಮುಚ್ಚಿ ಕುಳಿತಿರುವುದು, ಸಾರ್ವಜನಿಕರಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಯಾಣಿಕರ ತಂಗುದಾಣ ಸಾರ್ವಜನಿಕರಿಗೆ ಸುರಕ್ಷಿತೆ ವಹಿಸುವ ಬದಲಾಗಿ,ಅಪತ್ತು ತರುವ ಆತಂಕಕ್ಕೆ ಕಾರಣವಾಗಿದೆ.ಬಿ.ಹೆಚ್ ರಸ್ತೆಯ ಪಕ್ಕದಲ್ಲಿ ಪ್ರಯಾಣಿಕರು ಕೂರಲು.ನಿಲ್ಲಲು ಸ್ಥಳವಕಾಶ ವಾಗುವಂತೆ ನಿಲ್ದಾಣ ನಿರ್ಮಾಣ ಮಾಡಬೇಕು,ಆದರೆ ರಸ್ತೆಗೆ ಹೊಂದಿಕೊಂಡಂತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ.ರಸ್ತೆಯಲ್ಲಿ ನಿಲ್ದಾಣ ನಿರ್ಮಾಣ ಮಾಡಿದರೆ ಪ್ರಯಾಣಿಕರು ಎಲ್ಲಿ ನಿಲ್ಲಬೇಕು.ರಾಷ್ಟ್ರೀಯ ಹೆದ್ದಾರಿಯಾದ ಕಾರಣ ವಾಹನಗಳು ವೇಗವಾಗಿ ಚಲಿಸುತ್ತವೆ,ಆಯತಪ್ಪಿದರು ಪ್ರಯಾಣಿಕರು ಅಪಾಯಕ್ಕೆ ತುತ್ತಾಗುವ ಆತಂಕವನ್ನ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ನಗರಸಭೆ ಕೂಡಲೇ ವೈಜ್ಞಾನಿಕವಾಗಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕು.ಕೇವಲ ಅನುದಾನದ ಹಣ ಖರ್ಚು ಮಾಡಿಲಿಕ್ಕಾಗಿಯೇ ಕಾಮಗಾರಿ ಮಾಡದೇ ದೂರದೃಷ್ಠಿಯಿಂದ ಕಾಮಗಾರಿ ಮಾಡಿ ಪ್ರಯಾಣಿಕರ ಸುರಕ್ಷತೆ ದೃಷ್ಠಿಯಿಂದವೈಜ್ಞಾನಿಕವಾಗಿ ತಂಗುದಾಣ ನಿರ್ಮಾಣ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!