ತಿಪಟೂರು:ದೇವಾಲಯದ ಪೂಜಾರಿಕೆ ವೈಷಮ್ಯದಿಂದ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ,ತಿಪಟೂರು ತಾಲ್ಲೋಕಿನ ನೊಣವಿನಕೆರೆ ಹೋಬಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊನ್ನೇನಹಳ್ಳಿ ಗ್ರಾಮದಲ್ಲಿ ಪೂಜಾರಿಕೆ ವಾರಸತ್ವ ವೈಷಮ್ಯದ ಹಿನ್ನೆಲೆ ಕ್ಷುಲ್ಲಕ ಕಾರಣಕ್ಕೆ ಶಂಕರಯ್ಯ ಹಾಗೂ ಅತನ ಸೋದರ ,ಕುಮಾರಯ್ಯ ನಡುವೆ ಜಗಳ ಆರಂಭವಾಗಿದ್ದು ಹಳೇ ದ್ವೇಷದಿಂದ ಕುಪಿತಗೊಂಡಿದ ದಿನೇಶ್ ಹಾಗೂ ಆತನ ಪತ್ನಿ ಮೀನಾಕ್ಷಿ,ಮತ್ತು ಜಯಮ್ಮ ಗಲಾಟೆ ತೆಗೆದು, ಶಂಕರಯ್ಯನ ಮಗ ಗಣೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆಎನ್ನಲಾಗಿದ್ದು.ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಿಪಟೂರು ತಾಲ್ಲೋಕ್ ನೊಣವಿನಕೆರೆ ಹೋಬಳಿ ,ಹೊನ್ನೇನಹಳ್ಳಿ ತೋಟದ ಮನೆ , ವಾಸಿಯಾದ ಗಣೇಶ್ ದಿನಾಂಕ: 26-09-2025 ರಂದು ಶಂಕರಯ್ಯ ಹಾಗೂ ಆತನ ತಮ್ಮ ಕುಮಾರಯ್ಯ ನಡುವೆ ಗಲಾಟೆ ನಡೆಯುತ್ತಿರುವುದನ್ನ ಕಂಡು ಸ್ಥಳಕ್ಕೆ ಬಂದಿದ್ದಾರೆ.ಆಗ ದಿನೇಶ್ ಮತ್ತು ದಿನೇಶ್ ಹೆಂಡತಿ ಮೀನಾಕ್ಷಿ , ಕುಮಾರಯ್ಯನ ಹೆಂಡತಿ ಜಯಮ್ಮ ರವರು ಅಲ್ಲಿಗೆ ಬಂದಿದ್ದಾರೆ ಶಂಕರಯ್ಯ ಹಾಗೂ ಕುಮಾರಯ್ಯ ನಡುವೆ ಸಾಲ ಮರದ ಕೆಂಪಮ್ಮ ದೇವಸ್ಥಾನದ ಪೂಜೆ ವಿಚಾರದಲ್ಲಿ , ಹಿಂದಿನಿಂದ ದ್ವೇಷವಿದು , ಪೂಜೆ ವಿಚಾರಕ್ಕೆ , ಕೋರ್ಟಿನಲ್ಲಿ ಕೇಸು ನಡೆಯುತ್ತಿರುವುದರಿಂದ ಆ ದ್ವೇಷದಿಂದ ಶಂಕರಯ್ಯ ಮೇಲೆ ಜಗಳ ತೆಗೆದು ಈ ಜಾಗ ನಮಗೆ ಸೇರಬೇಕು ಮಣ್ಣನ್ನು , ಹೊಡೆಯಲು ಈ ರಸ್ತೆಯಲಿ ,, ಬರಬೇಡ ಎಂದು ಹೇಳಿದ್ದಾಗ, ನೀನು ಯಾರು ಎಂದು ಬಾಯಿಗೆ ಬಂದಂತೆ ಬೈದವನೆ ಅಲ್ಲಿಯೆ ಕೆಳಗೆ ಬಿದ್ದಿದ ಕಲ್ಲನ್ನ ತೆಗೆದುಕೊಂಡು ಶಂಕರಯ್ಯನ ತಲೆಗೆ ಹೊಡೆದಿದ್ದಾರೆ.ಆಗ ಗಣೇಶ್ ಯಾಕೆ ನನ್ನ ತಂದೆಗೆ ಹೊಡೆದಿದ್ದೀಯಾ ಎಂದು ಕುಮಾರಯ್ಯನನ್ನು ಕೇಳುತ್ತಿದಂತೆ ಅಲಿಯೇ ನಿಂತಿದ್ದ ಕುಮಾರಯ್ಯ ರವರ ಮಗ ದಿನೇಶ್ ಕೈಯಲ್ಲಿದ್ದ ಮಚ್ಚಿನಿಂದಹಲ್ಲೆಮಾಡಿರುತ್ತಾರೆ. ಗಣೇಶ್ ಕೆಳಗೆ ಬಿದ್ದಾಗ ಮೀನಾಕ್ಷಿ ಮತ್ತು ಜಯಮ್ಮ ಕಾಲಿಗಳಿಂದ ತುಳಿದರು,ಎನ್ನಲಾಗಿದ್ದು,ನೊಣವಿನಕೆರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲ್ಲಾಗಿದ್ದು.ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ













