ತಿಪಟೂರು:ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ಪ್ರತಿವರ್ಷದಂತೆ ಕೊಡಮಾಡುವ ಸಾಹಿತ್ಯ ಕಲ್ಪತರು ಪ್ರಶಸ್ತಿಯನ್ನ ಖ್ಯಾತ ಮಿಮಿಕ್ರಿ ಮೈಸೂರು ಆನಂದ್ ರವರಿಗೆ ಪ್ರಧಾನ ಮಾಡಲಾಯಿತು.
ತಿಪಟೂರು ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ನಡೆದ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ನಡೆದ ಭಾವಗೀತೆ ಗಾಯನ ಹಾಗೂ ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಯುವ ಸಮೂಹ ಸಂಸ್ಕೃತಿ ಹಾಗೂ ಸಂಸ್ಕಾರದಿಂದ ವಿಮುಖರಾಗಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ಉಳಿವಿಗಾಗಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ನಮ್ಮ ಕಲೆ ಸಾಹಿತ್ಯ ಸಂಸ್ಕೃತಿ ಸಂಸ್ಕಾರಗಳ ಉಳಿವಿಗಾಗಿ ಕಾರ್ಯಕ್ರಮಗಳನ್ನ ರೂಪಿಸುತ್ತಿರುವುದು ಶ್ಲಾಘನೀಯ.ನಮ್ಮ ಕನ್ನಡ ಭಾಷೆ ಹಾಗೂ ಸಾಹಿತ್ಯ ಹೃದಯವಂತಿಕೆ ಹೊಂದಿದ್ದು, ಮನುಷ್ಯನ ಭಾವನೆಗಳನ್ನ ಸೆಳೆಯುವ ಗುಣಹೊಂದಿದೆ.ಪ್ರತಿ ಪ್ರಾಂತ್ಯ ಹಾಗೂ ಪ್ರದೇಶಕ್ಕೂ ತನ್ನದೇ ಆದ ಭಾಷೆಯ ಗುಣಹಾಗೂ ನೆಲೆಗಟ್ಟು ಹೊಂದಿದ್ದು.ಸಾಂಸ್ಕೃತಿಕ ಸಿರಿವಂತೆಯನ್ನ ಹೊಂದಿರುವ ನಮ್ಮ ಕನ್ನಡದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಖ್ಯಾತ ಪತ್ರಕರ್ತರ ಚೆನ್ನೇಗೌಡ ಮಾತನಾಡಿ ತಿಪಟೂರು ಆರ್ಥಿಕ ಕೇಂದ್ರದ ಜೊತೆ ಸಾಂಸ್ಕೃತಿಕ ಶ್ರೀಮಂತಿಕೆಉಳಿಸಿಕೊಂಡಿದ್ದು ತುಮಕೂರು ಜಿಲ್ಲೆ ರಾಜ್ಯದ ಆರ್ಥಿಕತೆಯ ಬೆನ್ನೆಲುಬು ತುಮಕೂರಿನ ಆರ್ಥಿಕ ಶಕ್ತಿಯೇ ಕಲ್ಪತರುನಗರಿ ತಿಪಟೂರು, ಆರ್ಥಿಕವಾಗಿ ವ್ಯವಹಾರಿಕ ಕೇಂದ್ರವಾಗಿರುವ ಜೊತೆಗೆ ಕಲೆ ಸಾಹಿತ್ಯ ಸೇರಿದಂತೆ ಸಂಸ್ಕೃತಿಕ ಜೀವಂತಿಕೆ ಉಳಿಸಿಕೊಂಡಿದೆ.ದೇಶದಲ್ಲಿ ಯುದ್ದದ ಕಾರ್ಮೋಡ ಕವಿದಿದೆ,ನಾವೂ ನೆಮ್ಮದಿಯಿಂದ ಇರಲು ನಮ್ಮ ಹೆಮ್ಮೆಯ ಸೈನಿಕರ ಪರಿಶ್ರಮಕಾರಣವಾಗಿದ್ದು.ನಮ್ಮ ವೀರ ಸೈನಿಕರಿಗೆ ಗೌರವ ಕೊಡುವ ಮಹತ್ಕಾರ್ಯ ಪ್ರತಿಯೊಬ್ಬ ನಾಗರೀಕ ಮಾಡಬೇಕು.ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಪ್ರತಿವರ್ಷ ಕೊಡಮಾಡುವ ಸಾಹಿತ್ಯ ಕಲ್ಪತರು ಪ್ರಶಸ್ತಿಯನ್ನ ಕನ್ನಡ ಕಲ್ಪತರು ಎಂದು ಮಾಡಿ ಕನ್ನಡದ ಉಳಿವಿಗೆ ಸ್ಪೂರ್ತಿಯಾಗಬಹುದು ಎಂದು ತಿಳಿಸಿದರು.
ಕನ್ನಡಪ್ರಭಾ ಹಾಗೂ ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ವೆಂಕಟನಾರಾಯಣ್ ಮಾತನಾಡಿ ನಮ್ಮ ನಾಡು ನುಡಿ ಕಲೆ ಸಂಸ್ಕೃತಿ ಉಳಿವಿಗೆ ನಾವು ಹಿಂದಿಗಿಂತಲು ಈಗ ಹೆಚ್ಚು ಕೆಲಸ ಮಾಡಬೇಕು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಉಳಿಸಿ ಬೆಳೆಸ ಬೇಕು.ಕಲ್ಪತರು ನಾಡಿ ಕಲೆ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ತನ್ನದೇ ಅದಕೊಡುಗೆ ನೀಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್,ಖ್ಯಾತಪತ್ರಕರ್ತ ಅಶ್ವಿನ್ ಗೌತಮ್.ಪಠ್ಯಪುಸ್ತಕ ಪರಿಸ್ಕರಣಾ ಸಮಿತಿ ಅಧ್ಯಕ್ಷ ರವೀಂದ್ರ,ಭರತ ನಾಟ್ಯಾ ವಿದ್ವಾನ್ ಎಲ್.ಜಿ ಮೀರ.ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಎನ್.ಬಿ ಲೋಕೇಶ್ .ತಾಲ್ಲೋಕು ಪಂಚಾಯ್ತಿ ಇಒ ಸುದರ್ಶನ್ .ತಹಸೀಲ್ದಾರ್ ಜಗನ್ನಾಥ್ .ಸಂಘದ ಸಂಸ್ಥಾಪಕ ಎನ್ ಭಾನುಪ್ರಶಾಂತ್ .ಅಧ್ಯಕ್ಷ ಹೆಚ್.ಸಿ ನಾಗರಾಜು.ಖಜಾಂಚಿ ಆರ್.ಎಂ ಕುಮಾರಸ್ವಾಮಿ.ಮುಂತ್ತಾದವರು ಕಾರ್ಯಕ್ರಮದಲ್ಲಿ ತುಮಕೂರಿನ ಪ್ರಸಿದ್ದ ಗಾಯಕಿ ರೂಪನಾಗೇದ್ರ ಹಾಗೂ ಸಂಜನ್ ರವರಿಂದ ಭಾವಗೀತೆಗಾಯನ ಕಾರ್ಯಕ್ರಮ ನಡೆಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ




