:ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿ ಖಂಡಿಸಿ ಮದೀನ ಮಸೀದಿಯಿಂದ ಪ್ರತಿಭಟನೆ ನಡೆಸಿ,ಉಗ್ರಕೃತ್ಯ ಖಂಡಿಸಲಾಯಿತು.ಮದೀನ ಮಸೀದಿಯಲ್ಲಿ ನಮಾಜ್ ಮುಗಿಸಿದ ಮುಸಲ್ಮಾನರು ಮಸೀದಿ ಮುಂಭಾಗ ಸೇರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು,

ಪ್ರತಿಭಟನಾನಿರತರನ್ನ ಉದೇಶಿಸಿ ಮಾತನಾಡಿದ ಮದೀನ ಮಸೀದಿ ಮುಖಂಡ ಮಹಮದ್ ದಸ್ತಗಿರ್ ,ಕಾಶ್ಮೀರದಲ್ಲಿ ಭಯೋತ್ಪಾದಕರ ಕೃತ್ಯವನ್ನ ಭಾರತದ ಸಮಸ್ತ ಮುಸ್ಲಿಂ ಭಾಂದವರು ಖಂಡಿಸುತ್ತೇವೆ,ನಮ್ಮ ತಾಯ್ನಾಡಿಗೆ, ಕೇಡುಮಾಡುವ ಉಗ್ರಗಾಮಿ ಕೃತ್ಯ ಸಹಿಸುವುದಿಲ್ಲ, ಹಿಂದು ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರೂ ಒಗ್ಗಟಿನಿಂದ ಇರಬೇಕು,ನಮ್ಮ ಮುಸ್ಲಿಂ ಸಮಾಜ ಭಯೋತ್ಪಾನೆಗೆ ಹಾಗೂ ಧರ್ಮವಿರೋದೆ ಮನುಷ್ಯತ್ವ ವಿರೋಧಿಗಳ ವಿರುದ್ದ ನರೇಂದ್ರ ಮೋದಿಯವರು ಕಠಿಣ ಕ್ರಮಕೈಗೊಳ್ಳಬೇಕು,ಎಂದು ಒತ್ತಾಯಿಸಿದರು

ಮದೀನ ಮಸೀದಿ ಉಪಾಧ್ಯಕ್ಷ ಸೈಫುಲ್ಲ ಎಂ ಮಾತನಾಡಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆಸಿರುವ ಕೃತ್ಯವನ್ನ ಮನುಷ್ಯತ್ವಕ್ಕೆ ಮಾರಕವಾದ ಕೃತ್ಯವಾಗಿದೆ,ಭಾರತೀಯ ಮುಸ್ಲೀಮರು ನಮ್ಮ ದೇಶಕ್ಕೆ ಕೇಡುಕು ಮಾಡುವ ಯಾವುದೇ ಶಕ್ತಿಯನ್ನ ಸಹಿಸುವುದಿಲ್ಲ, ಹಿಂದೂ ಮುಸ್ಲೀಂ,ಕ್ರೈಸ್ತರೆಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ,ಆದರೇ ದುಷ್ಟಶಕ್ತಿಗಳ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿನಡೆದಿ ಹತ್ಯೆಮಾಡಿರುವುದು ತೀವ್ರಖಂಡನೀಯವಾಗಿದೆ,ಸರ್ಕಾರ ಉಗ್ರಗಾಮಿ ಕೃತ್ಯದ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು,ಎಂದು ಒತ್ತಾಯಿಸಿದರು.
ಮಹಮದ್ ದಸ್ತಗಿರ್,ಸೈಫುಲ್ಲ ಎಂ.ನವೀದ್ ಆಲಂ,ಮುನ್ನಾವರ್ ಪಾಷಾ,ಖಲೀಂ ಸಾಬ್,ಹೆಚ್.ಬಿ ಖಲೀಂ ಖಾನ್,ಅಜ್ಗರ್,ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




