*ತಿಪಟೂರು ನಗರ ಬಿ ಹೆಚ್ ರಸ್ತೆ ಯ ಎಸ್ ಎನ್ ರಾಮಪ್ಪ ಕಾಂಪೌಂಡ್ ವಾಸಿ
ದಿ.ಸಿದ್ವಾಟಂ ಅಪ್ಪಯ್ಯನವರ ಪುತ್ರ ಮಾಜಿ ಪುರಸಭಾಧ್ಯಕ್ಷರೂ, ಮಾಜಿ ಟೂಡಾ ಸದಸ್ಯರೂ, ಕಾಂಗ್ರೆಸ್ ಮುಖಂಡರಾದ
ಎಸ್ ಎ ಅಣ್ಣಯ್ಯ
(70 ವರ್ಷ) ಅವರು ಇಂದು ದೈವಾಧೀನರಾದರು.
ಮೃತರು ಇಬ್ಬರು ಸಹೋದರಿಯರು, ಓರ್ವ ಸಹೋದರರನ್ನಗಲಿದ್ದಾರೆ.
ಕಾಂಗ್ರೇಸ್ ಪಕ್ಷದ ಕಟ್ಟಾಳು ಎಸ್.ಎ.ಅಣ್ಣಯ್ಯ.ನಿಧನಕ್ಕೆ ಶಾಸಕ ಕೆ.ಷಡಕ್ಷರಿ.ಕಾಂಗ್ರೇಸ್ ಜಿಲ್ಲಾ ಯುವ ಅಧ್ಯಕ್ಷ ನಿಖಿಲ್ ರಾಜಣ್ಣ.ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್.ಉಪಾಧ್ಯಕ್ಷರಾದ ಶ್ರೀಮತಿ ಮೇಘನಾ ಭೂಷಣ್.ಮುಖಂಡರಾದ ತರಕಾರಿ ಪ್ರಕಾಶ್.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎನ್ ಕಾಂತರಾಜು.ನಗರಸಭಾ ಸದಸ್ಯರಾದ ವಿ.ಯೋಗೇಶ್ .ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು.
ಮೃತರ ಅಂತಿಮ ಯಾತ್ರೆ ಇಂದು ಸಂಜೆ 5 ಗಂಟೆಗೆ ಹೊರಡಲಿದ್ದು ನಂತರ “ಮುಕ್ತಧಾಮ” ದಲ್ಲಿ ಅಂತಿಮ ವಿಧಿ- ವಿಧಾನ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.




