Spread the love

ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ಮಾದಿಗ ಸಮುದಾಯದ ಎಚ್ಚರಿಕೆ.

ತಿಪಟೂರು: ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲವೆಂದು ಘೋಷಿಸಿದ ಮಾದಿಗ ಸಮುದಾಯದ ಮುಖಂಡರು, ಡಾ. ಬಾಬು ಜಗಜೀವನ್ ರಾಮ್ ಜಯಂತಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆ ಬಹಿಷ್ಕಾರ ಮಾಡಿ ಹೊರಬಂದ ಹೋರಾಟಗಾರರು, ನಂತರ ತಾಲೂಕು ಆಡಳಿತ ಕಚೇರಿ ಮುಂಭಾಗ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಸರ್ಕಾರದ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷ ಕೊಪ್ಪ ಶಾಂತಪ್ಪ ಮಾತನಾಡಿ, ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ//ಬಾಬು ಜಗಜೀವನ್ ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಮಾದಿಗ ಸಮಾಜದ ಎರಡು ಕಣ್ಣುಗಳು ನಮ್ಮ ಪೂಜನೀಯ ದೇವರುಗಳು.ಮಹನೀಯರ ಬಗ್ಗೆ ಅಪಾರ ಗೌರವ ಹೊಂದಿದ್ದು. ಸರ್ಕಾರದ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸುವ ದೃಷ್ಠಿಯಿಂದ ಸರ್ಕಾರ ನಡೆಸುವ ಜಯಂತಿಗಳನ್ನ ಬಹಿಷ್ಕಾರ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ರಾಜ್ಯ ಸರ್ಕಾರ ಸಂಪೂರ್ಣ ಒಳಮೀಸಲಾತಿ ಜಾರಿಮಾಡಲು ವಿಳಂಬ ಮಾಡುತ್ತಿದ್ದು,ನಾಟಕವಾಡುತ್ತಿದೆ. ಒಳಮೀಸಲಾತಿ ಜಾರಿಯಾಗುವವರೆಗೆ ಮಾದಿದ ಸಮುದಾಯ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್ಎಸ್ ಜಿಲ್ಲಾಧ್ಯಕ್ಷ ನಾಗ್ತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಒಳಮೀಸಲಾತಿಗಾಗಿ ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರ ವಿವಿಧ ಆಯೋಗಗಳನ್ನು ರಚಿಸಿ ಮಾಹಿತಿ ಸಂಗ್ರಹಿಸಿದ್ದರೂ ಜಾರಿಗೆ ಮುಂದಾಗದಿರುವುದು ಖಂಡನೀಯ ಎಂದು ಹೇಳಿದರು. ಒಳಮೀಸಲಾತಿ ಜಾರಿಯಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.


ಪೆದ್ದಿಹಳ್ಳಿ ನರಸಿಂಹಯ್ಯ,ಮಾತನಾಡಿ ಸರ್ಕಾರ ಮಾದಿಗದ ತಾಳ್ಮೆ ಪರೀಕ್ಷೆ ಮಾಡುತ್ತಿದೆ.ಎ.ಜೆ ಸದಾಶಿವ ಆಯೋಗ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ .ಜೆಸಿ ಮಾಧುಸ್ವಾಮಿ ಆಯೋಗ ವಸ್ತು ನಿಷ್ಠವಾಗಿ ಪರಿಶಿಷ್ಟ ಜಾತಿಯಲ್ಲಿ ಮಾದಿಗರ ಸ್ಥಿತಿಗತಿಯ ಬಗ್ಗೆ ವರದಿ ನೀಡಿದರೂ, ಸರ್ಕಾರ ಮಾದಿಗರಿಗೆ ನ್ಯಾಯದೊರಕಿಸಿಕೊಡಲು‌ ಮೀನಾಮೇಷ ಎಣಿಸುತ್ತಿದೆ.ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರದ ಯಾವುದೇ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಯಗಚೀಕಟ್ಟೆ ರಾಘವೇಂದ್ರ, ಮತ್ತಿಘಟ್ಟ ಶಿವಕುಮಾರ್, ಗ್ಯಾರಘಟ್ಟ ಹೊನ್ನಪ್ಪ, ಗಾಂಧಿನಗರ ಬಸವರಾಜು, ಶಿವಪುರ ರಾಮೇಶ್, ಈಚನೂರು ಸೋಮಶೇಖರ್, ಹಟ್ಟನ ದಯಾನಂದ್, ಶೆಟ್ಟಿಹಳ್ಳಿ ಮಹೇಶ್, ಕೆಇಬಿ ಸೋಮಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!