Spread the love

ತಿಪಟೂರು, ಫೆ.13: ತಾಲ್ಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಜಾತ್ರಾಮಹೋತ್ಸವ, 233ನೇ ವಾರ್ಷಿಕೋತ್ಸವ, ಶ್ರೀಕರಿಬಸವ ದೇಶಿಕೇಂದ್ರ ಮಹಾಸ್ವಾಮೀಜಿಗಳ 18ನೇ ಸ್ಮರಣೋತ್ಸವ ಹಾಗೂ ರಥೋತ್ಸವ ಹಾಗೂ ಪರಮಪೂಜ್ಯ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಧರ್ಮಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ ಅವರು


“ನಾವೆಲ್ಲರೂ ಅಜ್ಜಯ್ಯನ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ. ಅಜ್ಜಯ್ಯನ ಆಶೀರ್ವಾದದಿಂದ ಸರ್ಕಾರ ಬಲಿಷ್ಠವಾಗಿ ಮತ್ತು ಸುಭದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಜೀವನದಲ್ಲಿ ಬುದ್ಧಿವಂತಿಕೆಗೆ ಜೊತೆಯಾಗಿ ಮಾನವೀಯತೆ ಇರಬೇಕು,ಬೆಂಗಳೂರಿನಲ್ಲಿ ಇಂಟರ್‌ನ್ಯಾಷನಲ್ ಡ್ಯಾಂ ಸೇಫ್ಟಿ ಸಭೆ ತಮ್ಮ ನೇತೃತ್ವದಲ್ಲಿ ನಡೆದಿದ್ದು, ಮುಖ್ಯಮಂತ್ರಿಗಳು ನಾನು ಭಾಗವಹಿಸಿದ ಕಾರಣ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಬೇಕಾಯಿತು ಎಂದು ನಾನು. “ಡಿಸಿಎಂ ಆಗಿ ಇಂದಿಗೆ ಸಾವಿರ ದಿನಗಳನ್ನು ಪೂರೈಸಿದ್ದೇನೆ. ಆದರೆ ಈ ಕಾರ್ಯಕ್ರಮಕ್ಕೆ ನಾನು ಡಿಸಿಎಂ ಆಗಿ ಬಂದಿಲ್ಲ, ಶ್ರೀಗಳ ಶಿಷ್ಯನಾಗಿ ಬಂದಿದ್ದೇನೆ,
ಬೆಂಗಳೂರಿನಲ್ಲಿ ಶ್ರೀಮಠದ ಗುರುಭವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಭಕ್ತರು ತಮ್ಮ ಶಕ್ತಿಗೆ ತಕ್ಕಂತೆ ಕಾಣಿಕೆ ನೀಡಿ ಮಠವನ್ನು ಬೆಳೆಸಬೇಕು. “ಮನೆ ಕಾಪಾಡುವಂತೆ ಮಠವನ್ನೂ ಕಾಪಾಡಬೇಕು. ಮಠ ಬೆಳೆದರೆ ಭಕ್ತರಿಗೆ ಮಾರ್ಗದರ್ಶನ ದೊರೆಯುತ್ತದೆ,” ಎಂದು ಮನವಿ ಮಾಡಿದರು.


ಜಾತಿ-ಧರ್ಮದ ಆಧಾರದ ಮೇಲೆ ಭಕ್ತಿ ಸಂಬಂಧವನ್ನು ಅಳೆಯಲು ಸಾಧ್ಯವಿಲ್ಲ. “ಕೆಲವರು ‘ನೀವು ಒಕ್ಕಲಿಗ ಜಾತಿಯವರು, ಈ ಮಠಕ್ಕೆ ಏಕೆ ಬರುತ್ತೀರಿ?’ ಎಂದು ಪ್ರಶ್ನಿಸುತ್ತಾರೆ. ಭಕ್ತಿ ಮತ್ತು ಭಗವಂತನ ಸಂಬಂಧ ವೈಯಕ್ತಿಕ ನಂಬಿಕೆಯ ವಿಷಯ. ದೇವರು ಶಾಪ-ವರಗಳನ್ನು ನೀಡುವುದಿಲ್ಲ; ಅವಕಾಶ ನೀಡುತ್ತಾನೆ. ಆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಾಗ ಉತ್ತಮ ಸ್ಥಾನಮಾನ ದೊರೆಯುತ್ತದೆ,” ಎಂದು ತಿಳಿಸಿದರು.
ಶಾಸಕ ಕೆ. ಷಡಕ್ಷರಿ ಮಾತನಾಡಿ, “ಡಿ.ಕೆ. ಶಿವಕುಮಾರ್ ಅವರೊಂದಿಗೆ ನಾಲ್ವತ್ತು ವರ್ಷಗಳಿಂದ ಆತ್ಮೀಯ ಸ್ನೇಹವಿದೆ. ಅವರು ಅಜ್ಜಯ್ಯನ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಅಜ್ಜಯ್ಯ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ,” ಎಂದು ತಿಳಿಸಿದರು.


ಕಿರಿಯ ಶ್ರೀ ಅಭಿನವ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, “ಸಭ್ಯತೆ, ಸಂಸ್ಕಾರ ಮತ್ತು ಆಚಾರವಿರುವ ಮನುಷ್ಯನಿಗೆ ಗುರುವಿನ ಕೃಪೆ ದೊರೆಯುತ್ತದೆ. ಗುರು ತೋರಿದ ಮಾರ್ಗದಲ್ಲಿ ನಡೆದರೆ ಗುರಿ ಸಾಧಿಸಬಹುದು. ಮಕ್ಕಳಿಗೆ ಧಾರ್ಮಿಕ ಹಾಗೂ ನೈತಿಕ ಸಂಸ್ಕಾರ ಕಲಿಸಬೇಕು,ಶ್ರೀಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳ 75ನೇ ಸುವರ್ಣ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಖ್ಯಾತ ನಟ ಸಾಧು ಕೋಕಿಲ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಮೊಬೈಲ್ ವ್ಯಸನ ಹೆಚ್ಚಾಗಿ ಕುಟುಂಬಗಳಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಜನರು ಚಿತ್ರಮಂದಿರಗಳಿಗೆ ಹೋಗುವ ಬದಲು ರೀಲ್ಸ್‌ಗಳಲ್ಲಿ ತಮ್ಮದೇ ಪ್ರಪಂಚ ನಿರ್ಮಿಸಿಕೊಂಡಿದ್ದಾರೆ. ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್‌ನಿಂದ ದೂರವಿಟ್ಟು ಸಂಸ್ಕಾರ ಕಲಿಸಬೇಕು,” ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಖರ್ಜಗಿ ವೀರಶೈವ ವಿರಕ್ತ ಮಠದ ಶಿವಾನಂದ ಮಹಾಸ್ವಾಮೀಜಿ. ಕನಕಪುರ ದೇಗುಲಮಠದ ಚನ್ನಬಸವ ಮಹಾಸ್ವಾಮೀಜಿ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೆಲಗೂರು ಹಿರೇಮಠ ಮಹಾಸಂಸ್ಥಾನದ ಗುರು ಶಾಂತೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ. ಶ್ರೀ ಷಡ್ಬವಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ. ಅಂಜನಾದ್ರಿ ಬೆಟ್ಟ ಕಿಸ್ಕಿಂದ ಪೀಠಾಧ್ಯಕ್ಷರಾದ ಶ್ರೀ ಮಹಾಂತ ವಿದ್ಯಾದಾಸ್ ಬಾಬಾ.ಕೃಷಿ ಸಚಿವ ಚಲುವರಾಯಸ್ವಾಮಿ.
ಶಾಸಕರಾದ ನರೇಂದ್ರ ಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಮುರುಳಿಧರ್ ಹಾಲಪ್ಪ .ಕೆಪಿಸಿಸಿ ಸದಸ್ಯ ವಿ.ಯೋಗೇಶ್.ಕೆಪೆಕ್ಸ್ ನಿರ್ದೇಶಕ ಶಿವಪ್ರಕಾಶ್ . ಜಯಣ್ಣ.ಯುವ ಮುಖಂಡ ನಿಖಿಲ್ ರಾಜಣ್ಣ.ಸೇರಿದಂತೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!