ತಿಪಟೂರು;ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದ ಬಳಿ ನೂತನವಾಗಿ ನಿರ್ಮಿಸಿರುವ ಸುಮಾರು 3ಕೋಟಿ ವೆಚ್ಚದ ಸುಸಜ್ಜಿತ ಈಜುಕೊಳ ಹಾಗೂ ನವೀಕೃತ ಅತ್ಯಾಧುನಿಕ ಜೀಮ್ ಲೋಕಾರ್ಪಣೆಗೊಳಿಸಿದ ಶಾಸಕರು 3ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಈಜುಕೊಳಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ತಿಪಟೂರು ಅಭಿವೃದ್ದಿಗೆ ಅಗತ್ಯವಾದ ಮೂಲಸೌಕರ್ಯಗಳಿಗೆ ಆಧ್ಯತೆ ನೀಡುತ್ತಿದ್ದು.ತಿಪಟೂರು ನಗರದ ಜನರ ಬಹುದಿನಗಳ ಬೇಡಿಕೆಯಂತೆ ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ ಜೀಮ್ ನವೀಕರಣಗೊಳಿಸಲಾಗಿದ್ದು,ಸುಮಾರು3ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ.ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಿ ನಿಗದಿತ ಕಾಲಮಿತಿಯೊಳಗೆ ಒಳಾಂಗಣ ಕ್ರೀಡಾಂಗಣವನ್ನ ಜನಬಳಕೆಗೆ ನೀಡಲಾಗುವುದು.ನಗರದಲ್ಲಿ ಸುಸಜ್ಜಿಕ ಈಜುಕೊಳ ನಿರ್ಮಾಣ ಮಾಡಲಾಗಿದೆ.ಸಾರ್ವಜನಿಕ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಯುವಜನ ಮತ್ತು ಕ್ರೀಡಾ ಇಲಾಖೆ ಕಮಿಷನರ್ ಚೇತನ್ ಕುಮಾರ್.ಮಾತನಾಡಿ ತಿಪಟೂರು ನಗರಕ್ಕೆ ಒಳಾಂಗಣ ಕ್ರೀಡಾಂಗಣ ಮಂಜೂರಾಗಿದ್ದು ಶೀಘ್ರದಲ್ಲೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್.ಉಪಾಧ್ಯಕ್ಷೆ ಶ್ರೀಮತಿ ಮೇಘನಾ ಸುಜೀತ್ ಭೂಷಣ್.ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್ ಗಂಗಾಧರ್.ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ,ಕ್ರೀಡಾಧಿಕಾರಿ ಶಿವಪ್ರಸಾದ್.ಕೃಷಿಕ ಸಮಾಜದ ಅಧ್ಯಕ್ಷರಾದ ಯೋಗೀಶ್.ಮುಂತ್ತಾದವರು ಉಪಸ್ಥಿತರಿದರು




