ತಿಪಟೂರಿನ ‘ : ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ಕೊಡಮಾಡುವ ಸಾಹಿತ್ಯ ಕಲ್ಪತರು ” ರಾಜ್ಯಮಟ್ಟದ ಪ್ರಶಸ್ತಿಗೆ ನಾಡಿನ ಪ್ರಸಿದ್ಧ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ರವರು ಭಾಜನರಾಗಿದ್ದಾರೆ . ಈ ಪ್ರಶಸ್ತಿಯು ಹತ್ತು ಸಾವಿರ ನಗದು , ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆಯೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎನ್ , ಬಾನುಪ್ರಶಾಂತ್ ಅವರು ತಿಳಿಸಿದ್ದಾರೆ . ರಿಚಿ ಎಂದೇ ಪ್ರಸಿದ್ದರಾಗಿರುವ ಹರಟೆ ಕಾರ್ಯಕ್ರಮದ ಖ್ಯಾತಿಯೂ ಆಗಿರುವ ರಿಚರ್ಡ್ ಲೂಯಿಸ್ ಹಾಸ್ಯ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ . ಅವರ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ .

ಇದು ಸಂಘವು ಕೊಡಮಾಡುತ್ತಿರುವ ಆರನೆಯ ಪ್ರಶಸ್ತಿಯಾಗಿದ್ದು ಇದುವರೆಗೂ ” ಕನ್ನಡ ಸಾಹಿತ್ಯ ಕಲ್ಪತರು ” ಪ್ರಶಸ್ತಿಗೆ ಹಿರಿಯ ಕವಿಗಳಾದ ಶ್ರೀ ಡುಂಡಿರಾಜ್ , ಶ್ರೀ ಬಿ.ಆರ್ . ಲಕ್ಷ್ಮಣರಾವ್ , ಕನ್ನಡ ಶಾಯರಿ ಕವಿ ಅಸಾದುಲ್ಲಾ ಬೇಗ್ , ಥಟ್ ಅಂತ ಹೇಳಿ ಡಾ . ನಾ . ಸೋಮೇಶ್ವರ ಕವಿಯತ್ರಿ ಪ್ರೊ . ಎಂ.ಆರ್ . ಕಮಲ ಹಾಗೂ ಮಿಮಿಕ್ರಿ ಕಲಾವಿದ ಮೈಸೂರ್ ಆನಂದ್ ಅವರುಗಳನ್ನು ಆಯ್ಕೆಮಾಡಲಾಗಿದೆ . ಸಾಹಿತಿ ಹೆಚ್.ಎಸ್ , ಸತ್ಯನಾರಾಯಣ ಮತ್ತು ಸಾಹಿತಿ ತುರುವೇಕೆರೆ ಪ್ರಸಾದ್ ನೇತೃತ್ವ ಸಮಿತಿಯ ಹಿರಿಯ ಚಿಂತಕ ಉಜ್ಜಜ್ಜಿ ರಾಜಣ್ಣ ಪ್ರಾಚಾರ್ಯ ಕೆ.ಎನ್ , ರೇಣುಕಯ್ಯ ಉಪನ್ಯಾಸಕ ಎಲ್.ಎಂ. ವೆಂಕಟೇಶ್ , ಶಿಕ್ಷಕರಾದ ಪಟ್ಟಾಭಿರಾಮು ನಿವೃತ ಬ್ಯಾಂಕ್ ಮ್ಯಾನೇಜರ್ ಆರ್.ಎಂ. ಕುಮಾರಸ್ವಾಮಿ , ಹಿರಿಯ ಪತ್ರಕರ್ತರಾದ ಸಂಜೆವಾಣಿ ರಮೇಶ್ , ಸಂಯುಕ್ತ ಕರ್ನಾಟಕದ ಸತೀಶ್ ಯಲದಬಾಗಿರವರನ್ನೊಳಗೊಂಡ ಆಯ್ಕೆಸಮಿತಿಯು,ಶ್ರೀ ರಿಚರ್ಡ್ ಲೂಯಿಸ್ ರವರನ್ನು ಆಯ್ಕೆ ಮಾಡಿದ್ದು ಅವರಿಗೆ ಸಂಘವು ಪ್ರೀತಿ ಪೂರ್ವಕವಾದ ಅಭಿನಂದನೆ ಸಲ್ಲಿಸುತ್ತದೆ .
ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 25 ರ ಶನಿವಾರ ಸಂಜೆ 6.00 ಗಂಟೆಗೆ , ತಿಪಟೂರು ನಗರದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಜರುಗಲಿದೆ , ಸಮಾರಂಭದಲ್ಲಿ ಶಾಸಕರಾದ ಕೆ . ಷಡಕ್ಷರಿ ಮಾಜಿ ಶಿಕ್ಷಣ ಸಚಿವರಾದ ಬಿ.ಸಿ , ನಾಗೆಶ್ , ಹಿರಿಯ ಪತ್ರರ್ತರುಗಳಾದ ರಾಜು ಮಳವಳ್ಳಿ , ವೆಂಕಟನಾರಾಯಣ , ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಟಿ.ಎಸ್ . ನಾಗರಾಜಶೆಟ್ಟಿ , ನಿವೃತ್ತ ಎಸಿಪಿ , ಲೋಕೇಶ್ವರ , ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ . ತುಮಕೂರಿನ ಪ್ರಸಿದ್ದ ಸುಗಮ ಸಂಗೀತ ಗಾಯಕಿ ರೂಪ ನಾಗೇಂದ್ರ ಮತ್ತು ಶಿಭಿರಾರ್ಥಿ ವಿದ್ಯಾರ್ಥಿಗಳಿಂದ ಭಾವಗೀತಗಾಯನ ಏರ್ಪಡಿಸಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ











