ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಹುಚ್ಚನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಬೆಂಗಳೂರಿನ ಮಾರ್ಕ್ ಗ್ರೂಪ್ ಡಿಡಿಐಟಿ.ಆರ್ &ಡಿ ಕಂಪನಿ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಉದ್ಯೋಗಿಗಳು ಉಚಿತವಾಗಿ ನೋಟ್ ಬುಕ್ಸ್ ವಿತರಣೆ ಮಾಡಲಾಯಿತು.

ಹುಚ್ಚನಹಟ್ಟಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆದ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಆರ್ಕ್ ಗ್ರೂಪ್ ಡಿಡಿಐಟಿ.ಆರ್ &ಡಿ ಕಂಪನಿಯ ಅಸೋಸಿಯೇಟ್ ಡೈರೆಕ್ಟರ್ ಕೆ.ಆರ್ ಸ್ವಾಮಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸದಲ್ಲಿ ನೆರವಾಗ ಬೇಕು.ಗ್ರಾಮೀಣ ಭಾಗದ ಬಡಮಕ್ಕಳು ಶಿಕ್ಷಣ ಕಲಿಕೆಯಲ್ಲಿ ಯಾವುದೇ ಕೊರತೆಯಾಗಬಾರದು ಎನ್ನುವ ದೃಷ್ಠಿಯಿಂದ ಬೆಂಗಳೂರಿನ ಮಾರ್ಕ್ ಗ್ರೂಪ್ ಡಿಡಿಐಟಿ.ಆರ್&ಡಿ ಕಂಪನಿ ಸಹೋದ್ಯೋಗಿಗಳು ಸೇರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಸೇರಿ ಚರ್ಚೆನಡೆಸಿ,ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ನೀಡಬೇಕು ಆ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಣಿಕೆ ನೀಡಬೇಕು ಎನ್ನಯವ ಆಸೆಯೊಂದಿಗೆ ಸರಿ ಸುಮಾರು ಮೂರುವರೆ ಲಕ್ಷ ಬೆಲೆಯ ನೋಟ್ ಬುಕ್ ಗಳಿಗೆ ವಿತರಣೆ ಮಾಡುತ್ತಿದ್ದೇವೆ.ನಮ್ಮ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಗುಣಮಟ್ಟದ ಶಿಕ್ಷಣ ಪಡೆದು ನಮ್ಮ ತಾಲ್ಲೋಕು ಹಾಗೂ ದೇಶದ ಕೀರ್ತಿಯನ್ನ ಹೆಚ್ಚಿಸಬೇಕು.ನಾವು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಸರ್ಕಾರಿಶಾಲೆಗಳಿಗೆ ಅನುಕೂಲವಾಗುವಂತೆ ಅಗತ್ಯವಿರುವ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಅಸೋಸಿಯೇಟ್ ಡೈರೆಕ್ಟರ್ ರಾಜೇಶ್ ಮಾತನಾಡಿ ನಮ್ಮ ಕಂಪನಿಯ ಸದಸ್ಯರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ನಾವು ಅಳಿಲು ಸೇವೆ ನೀಡಬೇಕು ಎನ್ನುವುದು ನಮ್ಮ ಸಹೋದ್ಯೋಗಿಗಳ ಆಸೆಯಂತೆ ನೋಟ್ ಬುಕ್ಸ್ ವಿತರಣೆ ಮಾಡಿದ್ದೇನೆ,ಸರ್ಕಾರಿ ಶಾಲೆಯ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸುವ ಜೊತೆಗೆ.ಸಮಾಜದ ಆಸ್ತಿಯಾಗಿ ರೂಪಗೊಳ್ಳ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾರ್ಕ್ ಗ್ರೂಪ್ ಡಿಡಿಐಟಿ .ಆರ್&ಡಿ ಕಂಪನಿ ಡೈರೆಕ್ಟರ್ ಗಿರೀಶ್.ಆಶೀಶ್.ಲೋಕೇಶ್.ಶ್ರೀಧರ್.ಪ್ರತಿಮಾ.ಸತೀಶ್. ಹುಚ್ಚನಹಟ್ಟಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮುಖ್ಯೋಪಾಧ್ಯಾಯರಾದ ಮಂಜುಳ.ಸಹ ಶಿಕ್ಷಕರಾದ ಮಹಲಿಂಗಯ್ಯವನಜಾಕ್ಷಿ,.ಎಸ್.ಡಿ.ಎಂ.ಸಿ ಅಧ್ಯಕ್ಷ ಶಾಂತಪ್ಪ.ಮುಖಂಡರಾದ ಬಿಸ್ಲೇಹಳ್ಳಿ ಜಗದೀಶ್.ಬಾಲರಾಜು.ಅಯ್ಯಣ್ಣ.ತಿಮ್ಮೆಗೌಡ.ಲೋಕೇಶ್.ಪ್ರವೀಣ್ ಕರಡಾಳು.ಪ್ರಸನ್ನಕುಮಾರ್ ದೊಡ್ಡಯ್ಯನಪಾಳ್ಯ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




