Spread the love

ತಿಪಟೂರು:ಜಗಜ್ಯೋತಿ ಬಸವಣ್ಣ ನವರು ಜಗತ್ತಿನ ಶ್ರೇಷ್ಠ ದಾರ್ಶನಿಕ.ಕರ್ನಾಟಕದಲ್ಲಿ ನಡೆದ ಕಲ್ಯಾಣ ಕ್ರಾಂತಿ ಜಗತ್ತಿನ ಸಮಗ್ರ ಕ್ರಾಂತಿ ಎಂದರೆ ತಪ್ಪಾಗಲಾರದು, ಸಮಾಜದಲ್ಲಿ ಶ್ರೇಷ್ಠನೂ ಒಂದೆ ಕನಿಷ್ಟನೂ ಒಂದೇ ಎನ್ನುವ ಸಮಾನತೆ ಸಮಾಜವಾದದ ತತ್ವ ಸಾರಿ,ಅಕ್ಷರ, ಅನ್ನ, ಸ್ತ್ರೀ ಸಮಾನತೆ,ರಾಜಕೀಯ ಬದಲಾವಣೆ ಸೇರಿದಂತೆ ಜಗತ್ತಿನ ಮೊದಲ ಸಮಗ್ರ ಕ್ರಾಂತಿಪುರುಷ ಬಸವಣ್ಣ ಎಂದು ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ತರಳಬಾಳು ಜಗದ್ಗುರು ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು

ತಾಲ್ಲೋಕಿನ ಹಾಲ್ಕುರಿಕೆ ತರಳಬಾಳು ಸಂಸ್ಥಾನ ಮಠದ ಆವರಣದಲ್ಲಿ ಆಯೋಜಿಸಿದ ಅದ್ದೂರಿ ಬಸವ ಜಯಂತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಶ್ರೀಗಳು ಮಾತನಾಡಿ ಬಸವಣ್ಣ ಹೊಸಯುಗಧರ್ಮದ ಸ್ಥಾಪಕ ಜಡತ್ವದಿಂದ ಕೂಡಿದ ಸಮಾಜದಲ್ಲಿ ಶರಣಾದಿ ಪ್ರಮಥರು ಅನುಭವ ಮಂಟಪ ಸ್ಥಾಪನೆ ಮಾಡಿ ಸರ್ವ ಸಮಾಜಗಳನ್ನೂ ಸಮಾನವಾಗಿ ಕಾಣುವ ಮೂಲಕ ಸಮಾಜಕ್ಕೆ ಹೊಸ ಬೆಳಕು ನೀಡಿದರು,ಶ್ರೀಸಾಮಾನ್ಯನಿಗೆ ಅರ್ಥವಾಗುವ ಸಾಮಾನ್ಯ ಭಾಷೆಯಲ್ಲಿ ವಚನಗಳನ್ನ ರಚಿಸಿ ಆ ಮೂಲಕ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಜಾತಿಯತೆ, ಅಸಮಾನತೆ ಯನ್ನ ಹೋಗಲಾಡಿಸಲು ಶ್ರಮಿಸಿದ್ದಾರೆ, ದೇಶದಲ್ಲಿ ನಡೆಯುತ್ತಿರು ಜಾತಿ ಧರ್ಮಗಳ ಮೇಲಾಟ ಹಾಗೂ ರಾಜಕೀಯ ಬೆಳವಣಿಗೆಗಳಿಗೆ ಬಸವಣ್ಣನವರ ಚಿಂತನೆಗಳು ಔಷದಿಯಾಗ ಬಲ್ಲವು, ವಚನ ಚಳುವಳಿ ನಡೆದು, ಸಾವಿರಾರು ವರ್ಷಗಳ ಕಳೆದರೂ ಪ್ರಸ್ತುತ ಸನ್ನಿವೇಷಕ್ಕೂ ಶರಣರ ಚಿಂತನೆಗಳ ಸಮಾಜದ ಹೇಳಿಗೆಗೆ ಬೆಳಕಾಗಿ ಕಾಣುತ್ತಿವೆ, ವಚನ ಕ್ರಾಂತಿಯ ತರುವಾಯ ನಡೆದ,ಸಾಮಾಜಿಕ ವಿಪ್ಲವಗಳ ನಡುವೆ ಮುಚ್ಚಿಹೋಗಿದ,ಶರಣರ ಚಿಂತನೆಗಳ ವಚನಗಳನ್ನ ಹಳ್ಳಿಹಳ್ಳಿ ತಿರುಗಿ ಸಂಗ್ರಹಿಸಿ, ಫ.ಗು ಹಳಕಟ್ಟಿ ಯವರು ಚಿರಸ್ಮರಣೀಯರು,ಬಸವಣ್ಣನವರ ಆದರ್ಶದ ದಾರಿಯಲ್ಲಿಯೇ ನಡೆಯುತ್ತಿರುವ ತರಳಬಾಳು ಮಠ ವಚನಗಳನ್ನ ಸಂಗ್ರಹಿಸಿ,ಅವುಗಳನ್ನ ಮುದ್ರಣ,ಮಾಡಿ ವ್ಯಾಪಕ ಪ್ರಚಾರ ಮಾಡುವ ಕೆಲಸ ಮಾಡುತ್ತಿದೆ,ಶ್ರೀಮಠದ ಹಿರಿಯ ಪೂಜ್ಯರು ವಚನಗಳನ್ನ ವಿವಿಧ ಭಾಷೆಗೆ ತರ್ಜಿಮೆ ಮಾಡಿ,ಪ್ರಚಾರ ಮಾಡಿಸಿದರು ಇಂದಿನ ದಿನಮಾನಗಳಲ್ಲಿ ಬಸವಣ್ಣ ನವರ ವಚನಗಳು,ಜನರಿಗೆ ತಲುಪಲು ಶ್ರೀಮಠ ಶ್ರಮಿಸುತ್ತಿದೆ, ನಾವೂ ಸಹ ಶರಣರ ಸುಮಾರು 25 ವಚನಸಾವಿರ ವಚನಗಳನ್ನ ಜಗತ್ತಿನ ವಿವಿಧ ಭಾಷೆಗಳಿಗೆ,ತರ್ಜಿಮೆ ಮಾಡಿ,ಸಾಮಾನ್ಯ ಜನರಿಗೆ ತಲುಪುವಂತೆ ಮಾಡಿದ್ದೇವೆ,ತಂತ್ರಜ್ಞಾನದ ಸ್ಪರ್ಶ ನೀಡಿ.ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ತಮ್ಮ ಮೊಬೈಲ್ ಗಳಲ್ಲೇನೋಡುವಂತೆ ಮಾಡಿದ್ದೇವೆ,ಬಸವಣ್ಣ ನವರ ವಚನಗಳನ್ನ ಹೆಚ್ಚು ಹೆಚ್ಚು ಓದಿ ಅರ್ಥ ಮಾಡಿಕೊಳ್ಳ ಬೇಕು, ಅವರ ತತ್ವಗಳ ಕಾಯಕ ನಿಷ್ಟೆ,ಪ್ರಾಮಾಣಿಕತೆ,ಹಾಗೂ ಸಮಾನತೆ ಹಾಗೂ ಸಮ ಸಮಾಜದ ಚಿಂತನೆಗಳನ್ನ ಅಳವಡಿಸಿಕೊಂಡು,ಪಾಲನೆ ಮಾಡಿದಾಗ,ನಮ್ಮ ಜೀವನ ಉತ್ತಮದಾರಿಯಲ್ಲಿ ಸಾಗುತ್ತದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದಕೆರೆಗೋಡಿ ರಂಗಾಪುರ ಮಠದ ಪರಮಪೂಜ್ಯ ಶ್ರೀಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು ಮಾತನಾಡಿ ಶರಣರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ, ಬಸವಣ್ಣನವರ ಅನುಯಾಯಿಗಳು,ಅವರ ಆದರ್ಶಗಳನ್ನ ಪಾಲನೆ ಮಾಡಬೇಕು, ಸಮಾಜದಲ್ಲಿ ಕಾಯಕ ನಿಷ್ಟೆಎನ್ನುವುದು ಬದಲಾಗುತ್ತಿದೆ, ದುಡಿದು ತಿನ್ನುವ ಸಂಸ್ಕೃತಿಯ ಬದಲಾಗಿ ಹೊಡೆದು ತಿನ್ನುವ ಸಂಸ್ಕೃತಿಯಾಗುತ್ತಿದೆ ಬೇರೆವರರಿಂದ ಮೋಸದಿಂದಗಳಿಸಿದ ಸಂಪತ್ತನೇ ತಮ್ಮ ಹೆಗ್ಗಳಿಯೆಂಬತೆ ತೋರಿಕೆ ಮಾಡಲಾಗುತ್ತಿರುವುದು ವಿಷಾದನೀಯ, ರಾಜಕಾರಣಿಗಳು ತಮ್ಮ ತಲತಲಾಂತರಕೆ ಸಾಕಾಗುವಷ್ಟು ಹಣ ಸಂಪಾದಿಸತ್ತಿದ್ದಾರೆ, ನಿಜವಾದ ಪ್ರಾಮಾಣಿಕತೆ ಹಾಗೂ ಕಾಯಕ ನಿಷ್ಟೆಗೆ ಬೆಲೆಇಲ್ಲವೇನೋ ಎನ್ನುವಂತ್ತಾಗಿದೆ,ನಾನು ಕಾಯಕ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಸಂಪಾದನೆ ಮಾಡಬೇಕು ಪ್ರಾಮಾಣಿಕ ಜೀವನದಿಂದ ಸುಖ ಸಂಮೃದ್ದಿ ನೆಮ್ಮದಿ ದೊರೆಯುತ್ತದೆ,ಪ್ರತಿಯೊಬ್ಬರು ಬಸವಣ್ಣನವರ ವಚನಗಳನ್ನ ಮೈಗೂಡಿಸಿಕೊಂಡು ನಿಜಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಸಮಾನತೆ ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ.ಬಸವ ತತ್ವದ ಆಚರಣೆ ಹಾಗೂ ಶರಣರ ವಚನಗಳು ಹೆಚ್ಚು ಪ್ರಭುದ್ದ ಮಾನಕ್ಕೆ ಬರಲು ತರಳಬಾಳು ಮಠದ ಕಾರ್ಯಹಾಗೂ ಹಿರಿಯ ಶ್ರೀಗಳು ಹಾಗೂ ಡಾ//ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಖ್ಯಾತ ಕವಯತ್ರಿ ಬಸವಣ್ಣ ಸರ್ವಕಾಲಕ್ಕು ಶ್ರೇಷ್ಟ ಸಂತ,ಸಮಾಜದಲ್ಲಿ ಜಡತ್ವ ಹೆಚ್ಚಾಗಿ, ಸಾಮಾಜಿಕ ವಿಪ್ಲವಗಳು ಉಂಟಾದಾಗ ಒಬ್ಬ ಯುಗಪುರುಷನ ಉದಯವಾಗುತ್ತದೆ,ಬಸವಣ್ಣ ಯುಗಧರ್ಮಸ್ಥಾಪನೆ ಮಾಡಿ ಜಡತ್ವವನ್ನ ನಿವಾರಣೆ ಮಾಡುವ ಮೂಲಕ ನವ ಸಮಾಜ ನಿರ್ಮಾಣ ಮಾಡಿದರು,ಅವರ ತತ್ವಗಳು ಚಿಂತನೆಗಳು ಸರ್ವಕಾಲಕ್ಕು ಸರ್ವಕ್ಷೇತ್ರಕ್ಕೂ ಪ್ರಸ್ತುತವಾಗುತ್ತವೆ,ಅನುಭವ ಮಂಟಪದ ಪ್ರಜಾಪ್ರಭುತ್ವ ಅಡಿಗಲ್ಲು,ಸಮಸಮಾಜದ ನಿರ್ಮಾಣ ಮಾಡುವ ಕೆಲಸ ಮಾಡಿದರು ಅವರ ಆದರ್ಶಗಳನ್ನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ 12ನೇ ಶತಮಾನದ ಸಮಕಾಲೀನ ಶರಣ ವಿಶ್ವಬಂಧು ಮರುಳಸಿದ್ದರು ನಮ್ಮ ಮಠದ ಮೂಲಪುರುಷ ಬಸವಾದಿ ಶರಣರ ಚಿಂತನೆಗಳನ್ನ ಮೈಗೂಡಿಸಿ ಕೊಂಡಿರುವ ಶ್ರೀಮಠ ತ್ರಿವಿದ ದಾಸೋಹ ಕ್ಷೇತ್ರವಾಗಿ,ಹಳ್ಳಿಗಾಡಿನಲ್ಲಿ ಶಾಲಾ ಕಾಲೇಜು ಹಾಸ್ಟೆಲ್ ಸ್ಥಾಪನೆ ಮಾಡಿ ನಾಡಿನಾದ್ಯಂತ ಸಾವಿರಾರು ಜನರ ಬದುಕಿನಲ್ಲಿ ಬೆಳಕಾಗಿದ್ದಾರೆ, ಹಿರಿಯ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ಡಾ//ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಠದಪರಂಪರೆ ಮುಂದುವರೆಸುವ ಜೊತೆಗೆ,ಸಮಾಜಪರಿವರ್ತನೆಯ ಧಣಿವರಿಯದ ಕಾಯಕದಲ್ಲಿ ತೊಡಗಿದ್ದಾರೆ,ಕೋರ್ಟ್ ಕಚೇರಿ ಅಲೆದು ಸಾಕಾದ ಜನರಿಗೆ ಸದ್ಧರ್ಮ ನ್ಯಾಯಪೀಠದ ಮೂಲಕ ನ್ಯಾಯ ಒದಗಿಸಿದ್ದಾರೆ,ಶರಣರ ದಾರಿಯಲ್ಲಿ ನಡೆಯುವ ಶ್ರೀಗಳ ಆದೇಶವನ್ನ ಸಮಾಜ ಪಾಲಿಸುವ ಮೂಲಕ ಸಮಾಜದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್ .ಖ್ಯಾತ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ,ಸಾಧು ವೀರಶೈವ ಸಮಾಜದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ.ಹಾಲ್ಕುರಿಕೆ ಗ್ರಾಮಪಂಚಾಯ್ತಿ ಅಧ್ಯಕ್ಷ ಸೋಮಶೇಖರ್,ತಿಪಟೂರು ತಾಲ್ಲೋಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ನಂಜುಂಡಪ್ಪ.ಚಿಕ್ಕನಾಯ್ಕನಹಳ್ಳಿ ತಾಲ್ಲೋಕು ಅಧ್ಯಕ್ಷ ಮರುಳಪ್ಪ.ತುರುವೇಕೆರೆ ತಾಲ್ಲೋಕು ಅಧ್ಯಕ್ಷ ಷಡಕ್ಷರಿ ಮುಂತ್ತಾದವರು ಉಪಸ್ಥಿತರಿದರು
ಕಾರ್ಯಕ್ರಮದಲ್ಲಿ ಬಸವ ಜಯಂತಿ ಅಂಗವಾಗಿ ಹಾಲ್ಕುರಿಕೆ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಜ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.ತರಳು ಬಾಳು ಹಾಲ್ಕುರಿಕೆ ಸಂಸ್ಥಾನ ಮಠದ ಆವರಣದಲ್ಲಿ ಶ್ರೀಗಳಿಂದ ಶಿವಧ್ವಜಾರೋಹಣ ನೆರವೇರಿಸಲಾಯಿತು. ತರಳಬಾಳು ಕಲಾ ಸಂಘದ ವಿದ್ಯಾರ್ಥಿಗಳಿಂದ ವಚನಗಾಯನ ಹಾಗೂ ವಚನನೃತ್ಯ ಪ್ರದರ್ಶನ ಮತ್ತು ಗೋವಿನಹಾಡು ನೃತ್ಯರೂಪಕ ನೆರವೇರಿಸಲಾಯಿತು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!