Spread the love

ತಿಪಟೂರು:ರೇಷ್ಮೆ ರೈತರಿಗೆ ವರದಾನ ರೇಷ್ಮೆಬೆಳೆಯುವುದರಿಂದ ರೈತರು ಅಧಿಕ ಆದಾಯಗಳಿಸುವ ಜೊತೆಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬಹುದು ಗುಣಮಟ್ಟದ ಕಚ್ಚಾ ರೇಷ್ಮೆ ಇದ್ದರೆ ಮಾತ್ರ ಉತ್ತಮ ಅವಕಾಶವಿರುತ್ತದೆ. ಎಂದು ಹಿರಿಯ ವಿಜ್ಞಾನಿ ದಯಾನಂದ್ ತಿಳಿಸಿದರು.


ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ, ಶಿವರಾಮೇನಹಳ್ಳಿ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ, ಭಾರತ ಸರ್ಕಾರ, ಹಾಗೂ ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ ಸಹಯೋಗದಲ್ಲಿ ರೇಷ್ಮೆ ಕೃಷಿ ಕಾರ್ಯಕ್ರಮ ಮತ್ತು ವಿಚಾರ ಸಂಕೀರ್ಣ ನನ್ನ ರೇಷ್ಮೆ ನನ್ನ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ರೇಷ್ಮೆ ಕೃಷಿ ವಿಜ್ಞಾನಿ ದಯಾನಂದ್ ಮಾತನಾಡಿದ ಅವರು ಕೇಂದ್ರ ರೇಷ್ಮೆ ಮಂಡಳಿಯ ವತಿಯಿಂದ ದೇಶಾದ್ಯಂತ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಕರ್ನಾಟಕ ರಾಜ್ಯದ 10 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಅದರಲ್ಲಿ ತುಮಕೂರು ಒಂದು. ತಿಪಟೂರು ತಾಲೂಕಿನ ಶಿವರಾಮೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದು ಇದರ ಉದ್ದೇಶ ಈ ರೇಷ್ಮೆ ವಿಜ್ಞಾನಿಗಳೆ ರೈತರನ್ನು ಸಂಪರ್ಕ ಮಾಡುವ ವೇದಿಕೆಯಾಗಿದೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾ ರೈತರೊಂದಿಗೆ ಮಾತನಾಡಿ ರೈತರ ಸಮಸ್ಯೆಗಳನ್ನು ತಿಳಿದು ಅದನ್ನು ಸಂಶೋಧನೆ ನಡೆಸಿ ಹೊಸ ಹೊಸ ತಂತ್ರಜ್ಞಾನ ರೈತರು ಅಳವಡಿಕೆ ಮಾಡಿಕೊಳ್ಳಬೇಕು ಆಗ ಮಾತ್ರ ಉತ್ತಮ ರೇಷ್ಮೆ ಕೃಷಿ ಮಾಡಲು ಸಾಧ್ಯ ಎರಡು ಯೋಜನೆಗಳ ಸೇತುವೆಯಾಗಿ ರಾಜ್ಯ ಸರ್ಕಾರವಿದ್ದು ರೇಷ್ಮೆ ಕೃಷಿ ಉತ್ತಮಗೊಳಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ, ರೇಷ್ಮೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಗುಣಮಟ್ಟದಕುಡಿಯನ್ನ ಬೆಳೆಯುವುದೇ ಇದರ ಪ್ರಮುಖ ಉದ್ದೇಶ ಎಂದರು. ಇಂದು ಇಡೀ ವಿಶ್ವದಲ್ಲೇ ಚೀನಾ ರೇಷ್ಮೆ ಕೃಷಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ಎರಡನೇ ಸ್ಥಾನದಲ್ಲಿ ಭಾರತವಿದ್ದು ನಮಗೆ ಬೇಕಾದ ರೇಷ್ಮೆಯನ್ನು ನಾವೇ ತಯಾರಿಸಿಕೊಳ್ಳುವ ಮತ್ತು ಉತ್ಪಾದಿಸಿಕೊಳ್ಳಬೇಕು ಎಂದರು. ಯಾವ ರೀತಿ ರೇಷ್ಮೆ ಸಾಕಾಣಿಕೆ ಮಾಡ ಬೇಕು ಉತ್ತಮ ಬೆಳೆ ಬೆಳೆಯಬೇಕು ಒಂದು ರೇಷ್ಮೆ ಗೂಡು 1.7 ಗ್ರಾಂ ಗೂಡಿನ ತೂಕ ಬರಬೇಕು ಒಟ್ಟು 54,000 ಗೂಡು ಕಟ್ಟಬೇಕು ಆಗ 100 ಕೆಜಿ ಉತ್ಪಾದನೆ ಮಾಡಲು ಅದಕ್ಕೆ ತಕ್ಕಂತೆ ರೇಷ್ಮೆ ಕೃಷಿ ಅಳವಡಿಸಿಕೊಳ್ಳಬೇಕು
ಚೈನಾ ದೇಶದವರು ಸುಮಾರು ದೇಶಗಳಿಗೆ ರಫ್ತು ಮಾಡುತ್ತಾರೆ, ಭಾರತವು ಸಹ ಹೊರದೇಶಗಳಿಗೆ ಹೆಚ್ಚು ರಫ್ತು ಮಾಡುವಂತೆ ಆಗಲು ಉತ್ಪಾದನೆ ಜಾಸ್ತಿಯಾಗಬೇಕು ಗುಣಮಟ್ಟ ಜಾಸ್ತಿ ಆದರೆ ಹೊರದೇಶಗಳಿಗೆ ರಫ್ತು ಮಾಡುವ ಪ್ರಮಾಣವು ಹೆಚ್ಚಳವಾಗುವುದು ಎಂದರು.

ಇದೇ ವೇಳೆ ಮಾತನಾಡಿದ ರೇಷ್ಮೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್ ತುಮಕೂರು ಲಕ್ಷ್ಮಿನರಸಯ್ಯನವರು
ರೇಷ್ಮೆ ಕೃಷಿಯಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ಸುಧಾರಿತ ತಂತ್ರಜ್ಞಾನ ಹಾಗೂ ಉತ್ತಮ ವಿಧಾನಗಳನ್ನು ಅಳವಡಿಸುವುದು.
ರೇಷ್ಮೆ ಕೃಷಿಯನ್ನು ಲಾಭದಾಯಕ ಹಾಗೂ ಶಾಶ್ವತವಾಗಿಸಲು, ರೈತರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು.
ರೇಷ್ಮೆ ಕೃಷಿಕರ ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಎ.ಸಿ. ನಾಗೇಂದ್ರ, ರೇಷ್ಮೆ ಸಹಾಯಕ ನಿರ್ದೇಶಕರು ತಿಪಟೂರು.
ಶ್ರೀ ಟಿ. ಕೃಷ್ಣಮೂರ್ತಿ ರೇಷ್ಮೆ ವಿಸ್ತರಣಾಧಿಕಾರಿಗಳು, ತಾಂತ್ರಿಕ ಸೇವಾ ಕೇಂದ್ರ ತಿಪಟೂರು ಮತ್ತು ಹಿರಿಯ ರೇಷ್ಮೆ ಬೆಳೆಗಾರರಾದ ಗಂಗಣ್ಣ ಮತ್ತು ಚನ್ನಬಸವಯ್ಯ ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!