Spread the love

ತಿಪಟೂರು: ಡಿಸೆಂಬರ್ 18ರಿಂದ 21ರ ವರೆಗೆ 4ದಿನಗಳ ಕಾಲ 39 ನೇ ಕರ್ನಾಟಕ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷ ಹಾಗೂ ಮಹಿಳೆಯರ ಚಾಂಪಿಯನ್ ಶಿಪ್ ಕ್ರೀಡಾಹಬ್ಬವಾಗಿ ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್ ಡಿಸೆಂಬರ್ 18ರಿಂದ 21 ವರೆಗೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಹಾಗೂ ತುಮಕೂರು ಖೋ ಖೋ ಸಂಸ್ಥೆ . ತಿಪಟೂರು ಸ್ಪೋರ್ಟ್ ಕ್ಲಬ್ ಸಹಯೋಗದಲ್ಲಿ 4ದಿನಗಳ ಕಾಲ, ಕ್ರೀಡಾಹಬ್ಬವಾಗಿ ಆಚರಿಸಲಾಗುತ್ತಿದ್ದು ,ಕಲ್ಪತರು ಕ್ರೀಡಾಂಗಣ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ,ದಿನಾಂಕ 18ರಂದು ಪರಮಪೂಜ್ಯ ಶ್ರೀಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು ದಿವ್ಯಸಾನಿಧ್ಯವಹಿಸಲಿದ್ದು,.ಮಾಜಿ ಸಚಿವ ಬಿ.ಸಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು.ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ .ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಪಕಾರ್ ಸಿಂಗ್ ವರ್ಕ್ .ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಡಿಸೆಂಬರ್ 19ರಂದು ಖೋ ಖೋ ಸಂಸ್ಥೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನ ಗುರುಕುಲ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದು, ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮೀಜಿಗಳು ದಿವ್ಯಸಾನಿಧ್ಯವಹಿಸಲಿದ್ದಾರೆ,ಅಧ್ಯಕ್ಷತೆಯನ್ನ ಕರ್ನಾಟಕ ಖೋ ಖೋ ಸಂಸ್ಥೆ ಉಪಾಧ್ಯಕ್ಷ ಶ್ರೀನಿವಾಸ ಮೂರ್ತಿ ವಹಿಸಲಿದ್ದು,ಇಂಡಿಯಾ ಖೋ ಖೋ ಫೆಡರೇಷನ್ ಪ್ರಧಾನಕಾರ್ಯದರ್ಶಿ ಉಪಕಾರ್ ಸಿಂಗ್ ವರ್ಕ್ .ಗೌರವಾಧ್ಯಕ್ಷ ಮಲ್ಲಿಕಾರ್ಜುನಯ್ಯ‌.ಗೋಪಾಲ್ ಮುಂತ್ತಾದವರು ಭಾಗವಹಿಸಲಿದ್ದಾರೆ.


ಸಂಜೆ 6.30ಕ್ಕೆ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ.ಷಡಕ್ಷರ ಮಠದ ಶ್ರೀ ರುದ್ರಮುನಿಸ್ವಾಮೀಜಿ,ಭಾಗವಹಿಸಲಿದ್ದಾರೆ. 20ರಂದು ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮಕ್ಕೆ ಗೃಹಸಚಿವ ಜಿ.ಪರಮೇಶ್ವರ್. ಭಾಗವಹಿಸಲಿದ್ದಾರೆ,ಕರ್ನಾಟಕ ರಾಜ್ಯ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜ್.ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು. 21ರಂದು ಚಾಂಪಿಯನ್ ಷಿಪ್ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದ್ದು ನೊಣವಿನಕೆರೆ ಶ್ರೀಕಾಡಸಿದ್ದೇಶ್ವರಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಕರಿವೃಷಬ ದೇಶಿಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ದಿವ್ಯಸಾನಿಧ್ಯವಹಿಸಲ್ಲಿದ್ದಾರೆ. ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ .ಕೆ.ಎಸ್.ಕೆಕೆ ಅಧ್ಯಕ್ಷ ಲೋಕೇಶ್ವರ್.ಕಾರ್ಯದರ್ಶಿ ರಾಮಲಿಂಗ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು.ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ ಇತಿಹಾಸದಲ್ಲಿಯೇ ಐತಿಹಾಸಿಕ ಕಾರ್ಯಕ್ರಮವಾಗಿ ನಡೆಯಲಿದ್ದು .ಕ್ರೀಡಾಕೂಟದಲ್ಲಿ ಒಟ್ಟು 6ಕೋರ್ಟ್ ಗಳಲ್ಲಿ 2 ಮ್ಯಾಟ್ ಹಾಗೂ ಪ್ಲೆಡ್ ಲೈಟ್ ಕೋರ್ಡ್ ಗಳಾಗಿದ್ದು.ಉಳಿದ 4ಕೋರ್ಟ್ ಗಳು ಮಣ್ಣಿನ ಕೋರ್ಟ್ ಗಳಾಗಿರುತ್ತವೆ.ಒಟ್ಟು 116 ಮ್ಯಾಚ್ ಗಳು ನಡೆಯಲ್ಲಿದ್ದು.ಲೀಗ್ ಕಂ ನಾಕೌಟ್ ಮಾದರಿ ಪಂದ್ಯವಳಿ ನಡೆಯಲಿದ್ದು.ಕ್ರೀಡಾಪಟುಗಳಿಗೆ ಸೂಕ್ತ ಊಟ.ವಸತಿ ಹಾಗೂ ವಾಹನ ಸೌಕರ್ಯ ಕಲ್ಪಿಸಲಾಗಿದೆ.ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಹಬ್ಬದಲ್ಲಿ ಪಾಲ್ಗೊಳ ಬೇಕಾಗಿ ತಿಳಿಸಿದರು
ಪತ್ರಿಕಾ ಘೋಷ್ಟೀಯಲ್ಲಿ ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಶಿವಪ್ರಸಾದ್.ತಿಪಟೂರು ಸ್ಪೋರ್ಟ್ಸ್ ಕ್ಲಬ್ ಖಜಾಂಚಿ ಬಸವರಾಜು.ನಗರಸಭೆ ಮಾಜಿ ಸದಸ್ಯೆ ಭಾರತಿ ಮಂಜುನಾಥ್.ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!