ತಿಪಟೂರು:ತಾಲ್ಲೋಕಿನಲ್ಲಿ ಜೆಡಿಎಸ್ ಸಂಘಟನೆ ಗಟ್ಟಿಯಾಗಿದೆ,ಜೆಡಿಎಸ್ ವರಿಷ್ಠರು ಕೈಗೊಂಡಿರುವ ಜನರಜೊತೆ ಜೆಡಿಎಸ್ ಆನ್ ಲೈನ್ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಶೀಘ್ರವಾಗಿ ಚಾಲನೆ ನೀಡಲಾಗುವುದು.ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿರವರ ದಿನಾಂಕ ನಿಗದಿನಂತರ ಕಾರ್ಯಕ್ರಮವನ್ನ ನಿಗದಿ ಮಾಡಲಾಗುವುದು. ತಾಲ್ಲೋಕಿನಲ್ಲಿ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದು.ಪಕ್ಷ ಇನ್ನೊಷ್ಟು ಬಲಗೊಳಿಸಿ ಮುಂದಿನ ಜಿಲ್ಲಾಪಂಚಾಯ್ತಿ ತಾಲ್ಲೋಕು ಪಂಚಾಯ್ತಿ ಹಾಗೂ ಗ್ರಾಮಪಂಚಾಯ್ತಿಗಳಿಗೆ ಅಣಿಗೊಳಿಸಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ತಿಳಿಸಿದರು

ನಗರದ ತಮ್ಮ ಗೃಗಕಚೇರಿಯಲ್ಲಿ ಸುದ್ದಿಘೋಷ್ಠಿ ಉದೇಶಿಸಿ ಮಾತನಾಡಿದ ಅವರು ತಿಪಟೂರು ತಾಲ್ಲೋಕಿನಲ್ಲಿ ಜೆಡಿಎಸ್ ಸಂಘಟನೆ ಭದ್ರವಾಗಿದೆ.ತಾಲ್ಲೋಕಿನಾದ್ಯಂತ ಪಕ್ಷಬಲಪಡೆಸಲಾಗುವುದು,ಜನರಜೊತೆ ಜೆಡಿಎಸ್ ಆನ್ಲೈನ್ ಸದಸ್ಯತ್ವ ಅಭಿಯಾನಕ್ಕೆ ಪ್ರಾರಂಭಮಾಡಲಾಗುವುದು ಈಗಾಗಲೇ ನಮ್ಮ ಮುಖಂಡರು ಕಾರ್ಯಕರ್ತರುಗಳಿಗೆ ಮಾಹಿತಿ ನೀಡುತ್ತಿದ್ದಾರೆ.ಶೀಘ್ರವಾಗಿ ಸದಸ್ಯತ್ವ ಅಭಿಯಾನ ನಡೆಸಲಾಗುದು.ತಿಪಟೂರು ತಾಲ್ಲೋಕು ಜೆಡಿಎಸ್ ಅಧ್ಯಕ್ಷರ ಆಯ್ಕೆಗೆ ಮಾನದಂಡಗಳನ್ನ ರೂಪಿಸಲು ಕಾರ್ಯಕರ್ತರು ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ,ತಾಲ್ಲೋಕು ಅಧ್ಯಕ್ಷರ ಆಯ್ಕೆ ಮಾನದಂಡಗಳನ್ನ ರೂಪಿಸಲು ಸಭೆಯಲ್ಲಿ ಚರ್ಚೆಮಾಡಲಾಗಿದ್ದು ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ,ಇನ್ನೂ ಎರಡು ಭಾರಿ ಸಭೆ ನಡೆಸಿ ಒಮ್ಮತದ ಮಾನದಂಡ ರೂಪಿಸಲಾಗುವುದು ಎಂದ ಅವರು. ಐತಿಹಾಸಿಕ ಪರಂಪರೆಹೊಂದಿರುವ ತುಮಕೂರು ಜಿಲ್ಲೆಯನ್ನ ಬೆಂಗಳೂರು ಉತ್ತರ ಜಿಲ್ಲೆ ಮಾಡಲು ಹೊರಟಿರುವ ಗೃಹಸಚಿವರ ನಡೆಗೆ ನಮ್ಮ ಸಂಪೂರ್ಣ ವಿರೋಧವಿದೆ.ತಕ್ಷಣಕ್ಕೆ ಸರ್ಕಾರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ಥಾವನೆ ಕೈಬಿಡಬೇಕು. ಸರ್ಕಾರ ಹೆಸರು ಬದಲಾವಣೆಗೆ ಮುಂದಾದರೆ ಉಗ್ರಹೋರಾಟ ನಡೆಸಲಾಗುವುದು.ತಿಪಟೂರು ತಾಲ್ಲೋಕಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯಿಂದ,ರೋಗಿಗಳು ಹಾಗೂ ಸಾರ್ವಜನಿಕರಿಗೆ ತೀವ್ರತೊಂದರೆಗೊಳಗಾಗಿದ್ದಾರೆ.ತಾಲ್ಲೋಕು ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ವೈದ್ಯರು ಸಿಗುತ್ತಿಲ್ಲ,ಜನ ಆರೋಗ್ಯ ಸೇವೆಗಾಗಿ ಪರದಾಡುವಂತ್ತಾಗಿದೆ,ಹಾಲ್ಕುರಿಕೆ ಬಳುನೇರಲು ಸೇರಿದಂತೆ ಗ್ರಾಮೀಣಭಾಗಕ್ಕೆ ವೈದ್ಯರನ್ನ ನೇಮಕ ಮಾಡಬೇಕು. ಕಲ್ಪತರು ನಾಡಿನ ಜೀವನಾಡಿಯಾದ ಕೊಬ್ಬರಿಗೆ ಉತ್ತಮವಾದ ಬೆಲೆದೊರೆಯುತ್ತಿದೆ,ಇನ್ನೂ 30ಸಾವಿರ ರೂಪಾಯಿ ಗಡಿದಾಡುವ ಸಂಭವವಿದೆ.ಆದರೆ ತೆಂಗಿನಗೆ ಇಳುವರಿ ಕುಂಟಿತವಾಗಿದ್ದು ಸರ್ಕಾರ.ಕೆವಿಕೆ ತೋಟಗಾರಿಕೆ ಇಲಾಖೆಯ ತಂತ್ರಜ್ಞಾರ ಕಮಿಟಿ ನೇಮಿಸಿ.ಇಳುವರಿ ಹೆಚ್ಚಳಕ್ಕೆ ಕ್ರಮಕೈಗೊಳ್ಳಬೇಕು.ಜುಲೈ 20ರಂದು ನನ್ನ ಹುಟ್ಟುಹಬ್ಬದ ಅಂಗವಾಗಿ ಪ್ರತಿವರ್ಷದಂತೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಂಕಷ್ಟದಲ್ಲಿ ಇರುವ ಮಕ್ಕಳಿಗೆ ನೆರವು ನೀಡುವ ಕಾರ್ಯಕ್ರಮ ಆಯೋಜನೆ ಮಾಡಿದ್ದು ಜುಲೈ 20ರ ಒಳಗೆ ಹೆಸರುನೊಂದಣಿ ಮಾಡಿಸಬೇಕು ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಮತ್ತಿಘಟ್ಟ ಶಿವಸ್ವಾಮಿ.ತಾಲ್ಲೊಕು ಯುವ ಜೆಡಿಎಸ್ ಅಧ್ಯಕ್ಷ ಸುದರ್ಶನ್ ಗೊರಗೊಂಡನಹಳ್ಳಿ,ಮುಖಂಡರಾದ ರಾಜಶೇಖರ್ ಷಡಕ್ಷರಿ.ಕುಮಾರಸ್ವಾಮಿ ಜಕ್ಕನಹಳ್ಳಿ,ಮತ್ತಿಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಚಿನ್ನಸ್ವಾಮಿ.ಜೆಡಿಎಸ್ ಎಸ್.ಸಿ ಘಟಕದ ಅಧ್ಯಕ್ಷ ಧನಂಜಯ್ ಪೆದ್ದಿಹಳ್ಳಿ.ಬಸವರಾಜು.ಮಠದ ಮನೆ.ರಮೇಶ್ ಹಾಲ್ಕುರಿಕೆ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




