ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ದೇಶಾದ್ಯಂತ ಇಂದಿನಿಂದ ಆರಂಭವಾಗಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇಂದು ತಿಪಟೂರು ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೈಕ್ ರಾಲಿ ನಡೆಸಲಾಯಿತು.

ತಿಪಟೂರು ಗ್ರಾಮ ದೇವತೆಯಾದ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದಿಂದ ಹೊರಟ ಬೈಕ್ ರ್ಯಾಲಿ ಕೋಡಿ ಸರ್ಕಲ್ .ದೊಡ್ಡಪೇಟೆ ಬಿ.ಹೆಚ್ ರಸ್ತೆ ಮೂಲಕ ಸಾಗಿ ನಗರಸಭಾ ವೃತ್ತದಲ್ಲಿ ಕೊನೆಗೊಳ್ಳಲಾಯಿತು.
ಇಂದಿನಿಂದ ಆಗಸ್ಟ್ 15 ರ ವರೆಗೆ ಪ್ರತಿ ಮನೆಯಲ್ಲೂ ಎಲ್ಲರೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವದ ಅಭಿಯಾನವನ್ನು ಯಶಸ್ವಿಗೊಳಿಸಿ ಭವ್ಯ ಭಾರತದ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಬಿ .ಸಿ ನಾಗೇಶ್ ರವರು, ಜಿಲ್ಲಾ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸುಮತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸಂಧ್ಯಾ ಕಿರಣ್ ,ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಹಾಲಕ್ಷ್ಮಿ , ನಗರಸಭೆ ಸದಸ್ಯರುಗಳಾದ ಶ್ರೀಮತಿ ಜಯಲಕ್ಷ್ಮಿ , ಶ್ರೀಮತಿ ಪದ್ಮಾ ತಿಮ್ಮೇಗೌಡ ಶ್ರೀಮತಿ ಲತಾ ಹಾಗೂ ತಿಪಟೂರು ನಗರ ಅಧ್ಯಕ್ಷರಾದ ಹಳೆಪಾಳ್ಯ ಜಗದೀಶ್ ಗ್ರಾಮಾಂತರ ಅಧ್ಯಕ್ಷರಾದ ಶ್ರೀ ಸತೀಶ್ ಮುಖಂಡರಾದ ಮಂಜುಳಾ ತಿಮ್ಮೇಗೌಡ . ತನುಜ ಉಮೇಶ್ , ಶೈಲಜಾ ಪುಷ್ಪಾಲತಾ ಪ್ರಾರ್ಥನ .ಹರ್ಷ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ






