ತಿಪಟೂರು: ತಿಪಟೂರು ವಿಧಾನಸಭಾ ಕ್ಷೇತ್ರ ಮುಂದಿನ 2029ರ ವಿಧಾನ ಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲು,ಕ್ಷೇತ್ರವಾಗಲಿದೆ.
ಕೇಂದ್ರಸರ್ಕಾರದಲ್ಲಿ ಮಹಿಳಾ ಮೀಸಲು ವಿದೇಯದ ಪಾಸ್ ಆಗಿರುವ ಕಾರಣ 2026ಕ್ಕೆ ಮೀಸಲು ವಿದೇಯಕ ಜಾರಿಯಾಗುತ್ತದೆ,2029ಕ್ಕೆ ಒನ್ ನೇಷನ್ ಒನ್ ಎಲೆಕ್ಷನ್ ಬರುವ ಕಾರಣ ರಾಜಕೀಯ ಕ್ಷೇತ್ರದಲ್ಲಿ ಶೇಕಡ 50%ಮಹಿಳೆಯರಿಗೆ ಮೀಸಲಾತಿದೊರೆಯುತ್ತದೆ ಆದರಿಂದ 2029ರ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಮಹಿಳಾ ಮೀಸಲು ಕ್ಷೇತ್ರವಾಗುತ್ತದೆ ಎಂದು ತಿಳಿಸಿದರು
ನಗರದ ವಕ್ಕಲಿಗ ಭವನದಲ್ಲಿ ಆಯೋಜಿಸಿದ ಡಾ//ಸರ್ವಪಲ್ಲಿ ರಾಧಾಕೃಷ್ಣನ್ ರವರ138ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ,ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂದಿನ ವಿಧಾನ ಸಭಾ ಚುನಾವಣೆಗೆ ತಿಪಟೂರು ಮಹಿಳಾ ಮೀಸಲು ಕ್ಷೇತ್ರವಾಗುತ್ತದೆ.ಬಸವಣ್ಣ ನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿದರು ಅದರಂತೆ ಮಹಿಳೆಯರಿಗೆ ರಾಜಕೀಯವಾಗಿ ಸಮಾನ ಅವಕಾಶದೊರೆಯಲಿದೆ ಎಂದು ತಿಳಿಸಿದರು
ವರದಿ:ಮಂಜುನಾಥ್ ಹಾಲ್ಕುರಿಕೆ








