Spread the love

ತಿಪಟೂರು:ತಹಸೀಲ್ದಾರ್ ಪವನ್ ಕುಮಾರ್ ರವರಿಗೆ ಸರಿಯಾಗಿ ಕಂದಾಯ ಇಲಾಖೆಯ ಕಾನೂನುಗಳೆ ಇಲ್ಲದೆ,ಕಚೇರಿಯಲ್ಲಿ ಕುಳಿತು ಭರ್ಗಗುಡಿಯ ಮೂರ್ತಿಯಾಗಿದ್ದಾರೆ.ತಾಲ್ಲೋಕಿನಲ್ಲಿ ಸಮಸ್ಯೆಗಳ ಮಹಾಪೂರವೆ ಇದೆ,ಸಾರ್ವಜನಿಕರ ಸಮಸ್ಯೆ ಪರಿಹಾರ ಮಾಡಬೇಕಾದ ದಂಡಾಧಿಕಾರಿಗಳು,ಸಾರ್ವಜನಿಕರನ್ನ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ,ಇದು ಕಂದಾಯ ಇಲಾಖೆಯ ಕಥೆಯಾದರೆ,ಇನ್ನೂ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕೀಯವಾಗಿದೆ,ತಿಪಟೂರು ಡಿವೈಎಸ್ಪಿ ಮಡಿಮೈಲಿಗೆಯ ಗರ್ಭಗುಡಿಯ ಮೂರ್ತಿ,ಕಚೇರಿಯಿಂದ ಹೊರಬರುವುದು ಕಷ್ಟವಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು


ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಘೋಷ್ಠಿ ಮಾತನಾಡಿದ ದಲಿತ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ ರವರಿಗೆ ಕಂದಾಯ ಇಲಾಖೆಯ ಕಾನೂನಿನ ಅರಿವು ಕಡಿವೆ,ರೈತರ ಜಮೀನುಗಳ ಸಮಸ್ಯೆ ಉಂಟಾದಾಗ ಪರಿಹಾರ ಮಾಡಬೇಕಾದ ತಹಸೀಲ್ದಾರ್,ಕಚೇರಿಯಿಂದ ಕಚೇರಿಗೆ ಅಲೆದಾಡುವಂತ್ತೆ ಮಾಡುತ್ತಿದ್ದಾರೆ.ಹೊನ್ನವಳ್ಳಿ ಹೋಬಳಿ ಕಲ್ಕೆರೆ ಸರ್ವೆನಂಬರ್ 70/4ಮತ್ತು 70/5ರಲ್ಲಿ ತಿಪಟೂರು ನಿವಾಸಿ ವಿಶ್ವನಾಥ್ ಎಂಬುವವರು 8ಎಕರೆ ಜಮೀನಿ ಖರೀದಿ ಮಾಡಿ,ಸ್ವಾಧೀನ ಅನುಭದಲ್ಲಿ ಇರುತ್ತಾರೆ, ಫೆಡರಲ್ ಬ್ಯಾಂಕ್ ನಿಂದ 10ಲಕ್ಷ ಸಾಲಸೌಲಭ್ಯ ಪಡೆದಿದ್ದಾರೆ ಆದರೆ ಕಲ್ಕೆರೆ ಗ್ರಾಮದ ಗಜೇಂದ್ರ ಸಿಂಗ್.ಕುಬೇಂದ್ರ ಸಿಂಗ್.ಗೋವಿಂದ ರಾಜ್ ಸಿಂಗ್,ರಾಜಣ್ಣ ಎಂಬುವವರು ಜಮೀನಿಗೆ ಸಂಬಂದಿಸಿದ ಯಾವುದೇ ದಾಖಲೆಗಳು ಇಲ್ಲದೆ ಇದರು,ಅನಾಗತ್ಯ ತೊಂದರೆ ನೀಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ.ನ್ಯಾಯಬದ್ದವಾಗಿ ಭೂಮಿಯ ಮಾಲೀಕರಾದ ವಿಶ್ವನಾಥ್ ಗೆ ನ್ಯಾಯಕೊಡಿಸುವ ಬದಲಾಗಿ,ಕಾನೂನು ಅರಿವಿಲ್ಲದವರಂತೆ, ಕಚೇರಿಯಿಂದ ಕಚೇರಿಗೆ ಅಲೆಸುತ್ತಿದ್ದಾರೆ, ತಾಲ್ಲೋಕು ಆಡಳಿತ ವಿಶ್ವನಾಥ್ ಗೆ ನ್ಯಾಯದೊರೆಕಿಸಿಕೊಡಬೇಕು,ಇನ್ನೂ ತಾಲ್ಲೋಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಗೆ ತಿಪಟೂರು ಡಿವೈಎಸ್ಪಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಮಡಿಮೈಲಿಗೆಯ ಗರ್ಭಗುಡಿ ಮೂರ್ತಿಯಾಗಿದ್ದಾರೆ, ತಮ್ಮ ಕಚೇರಿಯಿಂದ ಆಚೆ ಬರುವುದೆ ಇಲ್ಲ, ಪರಿಶಿಷ್ಟ ಜಾತಿ ವರ್ಗಗಳ ಕುಂದುಕೊರತೆ ಸಭೆಯನ್ನ ಕರೆದಿಲ್ಲ,ಸಭೆ ಕರೆಯಿರಿ ತಾಲ್ಲೋಕಿನ ಕಾನೂನು ಸುವ್ಯವಸ್ಥೆ ಹಾಗೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಮನಹರಿಸಿ ಅನೇಕ ಭಾರಿ ಮನವಿ ಮಾಡಿದರು ಯಾವುದೇ ಕ್ರಮಕೈಗೊಂಡಿಲ್ಲ,ಪರಿಶಿಷ್ಟ ಜಾತಿಗಳ ಮೇಲೆ ದೌರ್ಜನ್ಯವಾದಾಗ ಆರೋಪಿತರಿಂದ ಪೊಲೀಸರೇ ಕುಮ್ಮಕು ನೀಡಿ ಪ್ರತಿದೂರು ಪಡೆದು,ದೂರುದಾಖಲಿಸುವ ಕಾನೂನು ವಿರೋದಿ ಕೃತ್ಯದಲ್ಲಿ ಪೊಲೀಸ್ ಇಲಾಖೆ ತೊಡಗಿದೆ, ಪೊಲೀಸ್ ಇಲಾಖೆ ದಲಿತರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿದರೆ ಡಿವೈಎಸ್ಪಿ ಕಚೇರಿ ಮುಂದೆ ತಮಟೆ ಚಳುವಳಿ ನಡೆಸಲಾಗುವುದು ಎಂದು ತಿಳಿಸಿದರು.


ಕಿಬ್ಬನಹಳ್ಳಿ ಹಟ್ನ ಗ್ರಾಮದ ಸರ್ವೆ ನಂಬರ್ ರಲ್ಲಿ 91ರಲ್ಲಿ ಪರಿಶಿಷ್ಟ ಸಮುದಾಯದ 4ಜನರಿಗೆ ಬಗರ್ ಹುಕ್ಕುಂ ಭೂಮಿ ಮುಂಜೂರಾಗಿದ್ದು,ಖಾತೆ ಮಾಡಿಕೊಡುವಂತೆ ತಹಸಿಲ್ದಾರ್ ರವರಿಗೆ ಅರ್ಜಿ ಹಾಕಿದರು ಖಾತೆ ಮಾಡಿಕೊಟ್ಟಿಲ್ಲ.ಬಡವರು ಉಳಿಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಭೂಮಿ ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನವಾಗಿದ್ದು, ಪರಿಹಾರದ ಹಣಪಡೆಯಲು ಸಾಧ್ಯವಾಗುತ್ತಿಲ್ಲ,ಎಸ್.ಎಲ್.ಓ ಕಚೇರಿಯಲ್ಲಿ ಪಹಣಿ ತಂದರೆ ಮಾತ್ರ ಪರಿಹಾರದ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾರೆ,ಕಾನೂನು ಪ್ರಕಾರವೇ ಮುಂಜೂರು ದಾಖಲೆಗಳಿದರು ಅಧಿಕಾರಿಗಳ ಬೇಜವಾಬ್ದಾರಿ ಕಾರಣದಿಂದ ಬಡಕುಟುಂಬ ತೊಂದರೆ ಅನುಭವಿಸುವಂತ್ತಾಗಿದೆ , ಕಂದಾಯ ಇಲಾಖೆಯಲ್ಲಿ ಬರುವಂತಹ ಸಮಸ್ಯೆ ಪರಿಹಾರ ಮಾಡಲು ತಹಸೀಲ್ದಾರ್ ವಿಫಲವಾಗಿದ್ದಾರೆ ಎಂದು ಡಿ.ಎಸ್.ಎಸ್ ಮುಖಂಡ ಯಗಚೀಕಟ್ಟೆ ರಾಘವೇಂದ್ರ ಆಕ್ರೋ ಶ ವ್ಯಕ್ತಪಡಿಸಿದರು.
ಡಿ.ಎಸ್ .ಎಸ್. ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ ಕುಪ್ಪಾಳು ಗ್ರಾಮಪಂಚಾಯ್ತಿಯಲ್ಲಿ ಪರಿಶಿಷ್ಟ ಜಾತಿ ಕೊಂಡ್ಲಿಘಟ್ಟ ಗ್ರಾಮದ ಹೊನ್ನಮ್ಮ ನವರ ಸಹಿಯನ್ನ ಪೋರ್ಜರಿ ಮಾಡಿರುವ ಸದಸ್ಯರಾದ ಮಹೇಶ್.ಯೋಗಾನಂದ್. ಷಡಕ್ಷರಿ ಇವರು ಪಿಡಿಓ ವಿರುದ್ದ ಸುಳ್ಳು ದೂರು ನೀಡಿದ್ದಾರೆ.ದಲಿತ ಮಹಿಳೆ ಎನ್ನುವ ಕಾರಣಕ್ಕೆ ಅವಮಾನ ಮಾಡಿದ್ದು, ನಾವು ನಿಮ್ಮ ಸಹಿ ಪೋರ್ಜರಿ ಮಾಡಿದ್ದೇನೆ ಏನು ಮಾಡುತ್ತೀಯ ಎಂದು ನಿಂದಿಸಿದ್ದು.ಇವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳ ಬೇಕು.ಸೂಕ್ತ ತನಿಖೆ ನಡೆಸಿ, ಜಾತಿ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮತ್ತಿಘಟ್ಟ ಶಿವಕುಮಾರ್ ಮಾತನಾಡಿ ಗಂಗಾಕಲ್ಯಾಣ ಇಲಾಖೆಯ ಬೋರ್ ವೆಲ್ ಗಳಿಗೆ ಹೊಸದಾಗಿ ವಿದ್ಯುತ್ ಪರಿವರ್ತಕ ಅಳವಡಿಸಲು ಸರ್ಕಾರ ಅನುದಾನ ನೀಡಿದೆ,ಆದರೆ ಬೆಸ್ಕಂ ಇಲಾಖೆ ಹಳೆಯ ವಿದ್ಯುತ್‌ ಪರಿವರ್ತಕ ನೀಡಿದ್ದು. ಪರಿವರ್ತಕ ಅಳವಡಿಸಿದ 6ತಿಂಗಳಿಗೆ ಕೆಟ್ಟು ನಿಂತಿವೆ ಇದರಿಂದ ಬಡರೈತರು ಬೆಸ್ಕಂ ಇಲಾಖೆ ಗೆ ಅಲೆಯುವಂತ್ತಾಗಿದ್ದು,ಸೂಕ್ತಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೊಪ್ಪ ಶಾಂತಪ್ಪ ಮಾತನಾಡಿ ತಾಲ್ಲೋಕು ಆಡಳಿತ ನಿಷ್ಕ್ರಿಯವಾಗಿದೆ.ತಹಸೀಲ್ದಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.ಶ್ರೀಸಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲರಾಗಿದ್ದಾರೆ. ಅವರು ಕೂಡಲೇ ತಾಲ್ಲೋಕಿನಿಂದ ವರ್ಗಾವಣೆಯಾಗಬೇಕು.ಪೊಲೀಸ್ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದು.ಡಿವೈಎಸ್ಪಿ ಪರಿಶಿಷ್ಟ ಜಾತಿ ಕುಂದೂಕೊರತೆ ಸಭೆ ಕರೆದು.ದಲಿತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಗಾಂಧಿ ನಗರ ಬಸವರಾಜು.ಟಿ.ಕೆ ಕುಮಾರ್. ಹೊನ್ನಪ್ಪ ಗ್ಯಾರಘಟ್ಟ.ವಿಶ್ವನಾಥ್. ನಾಗರಾಜು.ಮಧು.ರಮೇಶ್ ಮಾರನಗೆರೆ.ಯಗಚೀಕಟ್ಟೆ ರಾಘವೇಂದ್ರ,ಲಕ್ಕಿಹಳ್ಳಿ ತಿಮ್ಮಯ್ಯ.ಮಂಜುನಾಥ್. ಅಂಬರೀಶ್.ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!