ತಿಪಟೂರು:ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಅಣ್ಣೇಮಲ್ಲೇನಹಳ್ಳಿ ಹಾಗೂ ಕಸಬಾ ಹೋಬಳಿ ಚಿಕ್ಕಮಾರ್ಪನಹಳ್ಳಿ ಗ್ರಾಮಗಳಲ್ಲಿ ಜಲ್ಲಿ ಕಲ್ಲು ಕ್ರಷರ್ ಗಳ ಸ್ಪೋಟಕದ ರಭಸಕ್ಕೆ ಮನೆಗಳು ಬಿರುಕು ಬಿಟ್ಟಿದ್ದು,ಸುತ್ತಹತ್ತಾರು ಹಳ್ಳಿಗಳ ಜೀವನಾಡಿಯಾಗಿದ್ದ ಕೆರೆಕಟ್ಟೆಗಳು ಬಿರುಕುಬಿಟ್ಟು,ನೀರು ನಿಲ್ಲದೆ ಸೋರಿಕೆಯಾಗುತ್ತಿದೆ,ಸ್ಪೋಟದ ಧೂಳಿನಿಂದ ಸಂಪೂರ್ಣ ಹಳ್ಳಕೊಳ್ಳ ಜನಜಾನುವಾರಗಳು ಉಪಯೋಗಕ್ಕೆ ಯೋಗ್ಯವಿಲ್ಲದಂತ್ತಾಗಿವೆ,ಕೊಳವೇ ಬಾವಿಗಳು ಬತ್ತಿಹೋಗುತ್ತಿವೆ ಎಂದು ಆರೋಪಿಸಿ ಚಿಕ್ಕ ಮಾರ್ಪನಹಳ್ಳಿ,ಅಣ್ಣೇಮಲ್ಲೇನಹಳ್ಳಿ,ಗೊಲ್ಲರಹಟ್ಟಿ,ದಾಸೇಗೌಡನಹಟ್ಟಿ,ಗ್ರಾಮಸ್ಥರು ತಹಸೀಲ್ದಾರ್ ಗೆ ಮನವಿ ಪತ್ರಸಲ್ಲಿಸಿ ಕ್ರಷರ್ ಮುಚ್ಚಲು ಒತ್ತಾಯಿಸಿದರು

.
ತಹಸೀಲ್ದಾರ್ ರವರಿಗೆ ಮನವಿ ಪತ್ರಸಲ್ಲಿಸಿ ಮಾತನಾಡಿದ ಮುಖಂಡರು ಅಣ್ಣೇಮಲ್ಲೇನಹಳ್ಳಿ ,ದಾಸೇಗೌಡನಹಟ್ಟಿ,ದೇವರಹಟ್ಟಿ,ಚಿಕ್ಕಮಾರ್ಪನಹಳ್ಳಿ ಈರಲಗೆರೆ ಗ್ರಾಮಗಳಲ್ಲಿ ನಾಲ್ಕೈದು ಕಲ್ಲುಗಣಿಗಳು ಕೆಲಸ ನಿರ್ವಹಿಸುತ್ತಿದ್ದು,ಸರ್ಕಾರದ ನಿಯಮಮೀರಿ ದೊಡ್ಡಪ್ರಮಾಣದಲ್ಲಿ ಸ್ಪೋಟಕ ಬಳಸಿ ಸ್ಪೋಟಿಸುವುದರಿಂದ ಅಣ್ಣೆಮಲ್ಲೇನಹಳ್ಳಿ,ದಾಸೇಗೌಡನಹಟ್ಟಿ.ದೇವರಹಟ್ಟಿ.ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಗಳು ಬಿರುಕು ಬಿಟ್ಟಿದ್ದು,ಕೆರೆಕಟ್ಟೆಗಳು ಬಿರುಕು ಬಿಟ್ಟು ನೀರುಸೋರಿಕೆಯಾಗುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಗಣಿಸ್ಪೋಟ.ಜೀವವೈವಿದ್ಯತೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದ್ದು .ರೈತರ ಕೃಷಿ ಬದುಕನ್ನ ಮೂರಾಬಟ್ಟೆ ಮಾಡಿವೆ.ಶ್ರೀ ಕೃಷ್ಣ ಸ್ಟೋನ್ ಕ್ರಷರ್ ಸ್ಪೋಟದಿಂದ ಸುಮಾರು 4ಎಕರೆ ರೇಷ್ಮೆಬೆಳೆಹಾಳಾಗಿದ್ದು . ವಾಸದಮನೆಗಳ ಹಾಳಾಗಿವೆ,ಬೋರ್ ವೆಲ್ ಗಳಲ್ಲಿ ಅಂತರ್ ಜಲ ಪಾತಾಳ ಸೇರುತ್ತಿದೆ,ಸರ್ಕಾರ ಜಲ್ಲಿ ಕ್ರಷರ್ ಮುಚ್ಚಬೇಕು ಎಂದು ಒತ್ತಾಯಿಸಿದರು.

ತಾಲ್ಲೋಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬಾಲರಾಜು ಮಾತನಾಡಿ ಗಣಿಸ್ಪೋಟಕಕ್ಕೆ ಗೊಲ್ಲರಹಟ್ಟಿಗಳಲ್ಲಿ ಮನೆಗಳು ಬಿರುಕು ಬಿಟ್ಟಿದು ಗ್ರಾಮಸ್ಥರಲ್ಲಿ ಆತಂತ ಉಂಟುಮಾಡಿದೆ,ಕೊಳವೆ ಬಾವಿಗಳಲ್ಲಿ ನೀರುಬತ್ತುತ್ತಿದ್ದು ಅಂತರ್ ಜಲ ಪಾತಾಳ ಸೇರುತ್ತದೆ,ಕ್ರಷರ್ ಲಾರಿಗಳ ಧೂಳಿಗೆ ರೈತರ ಬೆಳೆಗಳು ಹಾಳಾಗುತ್ತಿದು,ಶ್ರೀ ಕೃಷ್ಷ ಸ್ಟೋನ್ ಕ್ರಷರ್ ಮದ್ಯಾಹ್ನ 5ಗಂಟೆ ವೇಳೆಯಲ್ಲಿ ಕಲ್ಲು ಸ್ಪೋಟಿಸುವ ಕಾರಣ ಕಲ್ಲು ಬಿದ್ದು ನಾಲ್ಕೈದು ಕುರಿಗಳು ಸಾವನ್ನಪ್ಪಿವೆ,ಗಣಿ ಧೂಳಿನಿಂದ ನೀರು ಕಲೂಷಿತವಾಗಿದ್ದು ಕುರಿ,ಮೇಕೆ ದನಕರುಗಳು ಸಾವನ್ನಪ್ಪುತ್ತಿವೆ,ಸರಕಾರ ಕೂಡಲೇ ಜಲ್ಲಿ ಹಾಗೂ ಕಲ್ಲು ಕ್ರಷರ್ ಗಳನ್ನ ಮುಚ್ಚಬೇಕು,ಜನಜೀವನಕ್ಕೆ ಕಂಟಕವಾಗಿರುವ ಕ್ರಷರ್ ಗಳ ಮೇಲೆ ಕ್ರಮಕೈಗೊಳ್ಳದಿದರೆ,ಉಗ್ರಹೋರಾಟಮಾಡುವುದ್ದಾಗಿ ತಿಳಿಸಿದರು
ಪ್ರತಿಭಟನೆಯಲ್ಲಿ ಮುಖಂಡರಾದ ಪಾಪಣ್ಣ.ಕಾಂಗ್ರೇಸ್ ಮುಖಂಡ ಜಯಣ್ಣ,ಬಸವರಾಜು.ನಾಗರಾಜು.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




