ತಿಪಟೂರು:ತಾಲ್ಲೋಕಿನ ಕೆ.ಬಿ ಕ್ರಾಸ್ ನ ಗೋಡೇಕೆರೆ ಶ್ರೀಮದ್ ರಂಬಾಪುರಿ ವಿದ್ಯಾಸಂಸ್ಥೆ ಆವರಣದಲ್ಲಿ ನೊಳಂಬ ಸ್ವಯಂ ಸೇವಾ ಸಂಘದ ವತಿಯಿಂದ ನೊಳಂಬ ಸಂಗಮ ತುಮಕೂರು ಜಾತ್ರೆ ಮತ್ತು ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಶ್ರೀ ಮದ್ ರಂಬಾಪುರಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಬೆಟ್ಟದಹಳ್ಳಿ ಗವೀಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ ನೊಳಂಬ ಸಮಾಜದ ಬಂಧುಗಳಲ್ಲಿ ಸಮಾಜದ ಬಗ್ಗೆ ಜಾಗೃತಿ ಮೂಡಿಸ ಬೇಕು,ಹಾಗೂ ನೊಳಂಬ ರಾಜಪರಂಪರೆ ನಡೆದು ದಾರಿ ಹಾಗೂ ಸಂಸ್ಕೃತಿಗಳ ಸಮಾಜ ಮತ್ತು ಯುವಪೀಳಿಗೆ ತಿಳಿದುಕೊಳ್ಳಬೇಕು ಸಮಾಜದ ಬಂಧುಗಳು ಒಂದೇಡೆ ಸೇರಬೇಕು ಎನ್ನುವ ದೃಷ್ಠಿದ ನೊಳಂಬ ಸಂಗಮ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿದ್ದು,ಈ ಭಾರಿ ಸಮಾಜದ ಸದ್ಬಕ್ತರ ಆಶಯದಂತೆ ತಿಪಟೂರು ತಾಲ್ಲೋಕಿನ ಕೆ.ಬಿ ಕ್ರಾಸ್ ನ ಗೋಡೆಕೆರೆ ಶ್ರೀಮದ್ ರಂಬಾಪುರಿ ವಿದ್ಯಾಸಂಸ್ಥೆ ಆವರಣದಲ್ಲಿ ನೊಳಂಬ ಸಂಗಮ ತುಮಕೂರು ಜಾತ್ರೆ ಆಯೋಜನೆ ಮಾಡಲಾಗಿದೆ, ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನ ಪ್ರೋತ್ಸಾಹಿಸ ಬೇಕು ಎನ್ನುವ ದೃಷ್ಠಿಯಿಂದ ಸಮಾಜದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜನೆ ಮಾಡಲಾಗಿದೆ.ಸಮಾಜದ ಉದ್ಯಮಿಗಳು,ಹಾಗೂ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ವಿವಿದ ಕ್ಷೇತ್ರದ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ.ಇನ್ನೂ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜನೆ ಮಾಡಲಾಗಿದ್ದು ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ತಿಳಿಸಿದರು

ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ ನೊಳಂಬ ಪಂಪರೆಯಲ್ಲಿ ಶ್ರೀ ಸಿದ್ದರಾಮೇಶ್ವರರನ್ನ ಗುರುವಾಗಿ ಸ್ವೀಕರಿಸಿ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿರುವ ಸಮಾಜ ಕರ್ನಾಟಕ ಮಹಾರಾಷ್ಟ್ರ,ಆಂದ್ರಪ್ರದೇಶ,ತೆಲಂಗಾಣ ಸೇರಿದಂತೆ ದೇಶದ ಹಲವಾರು ಕಡೆ ವಿಸ್ತಾರಗೊಂಡಿದೆ,ಸಮಾಜದ ಬಂಧುಗಳಲ್ಲಿ ಜಾಗೃತಿ ಮೂಡಿಸಬೇಕು,ಎನ್ನುವ ದೃಷ್ಠಿಯಿಂದ ನೊಳಂಬ ಸಂಗಮ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿದ್ದು ಈ ಭಾರಿ ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕೆ.ಬಿ.ಕ್ರಾಸ್ ಶ್ರೀರಂಬಾಪುರಿ ವಿದ್ಯಾಸಂಸ್ಥೆ ಆವರಣದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ,ಸಮಾಜದ ಸಾಧಕರಿಗೆ ಸನ್ಮಾನ,ವಸ್ತುಪ್ರದರ್ಶನ ಹಾಗೂ ಮಾರಾಟ, ಆಯೋಜನೆ ಮಾಡಲಾಗಿದೆ,ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಹಾಸನ ಜಿಲ್ಲೆ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ನವಿಲೇ ಪರಮೇಶ್ ಮಾತನಾಡಿ ಸಮಾಜದ ಬಂಧುಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ವಿವಿದೆಡೆ ನೊಳಂಬ ಸಂಗಮ ಕಾರ್ಯಕ್ರಮ ನಡೆಸುತ್ತಾ ಬಂದಿದು,ಸಮಾಜದ ಬಂಧುಗಳ ಒತ್ತಾಸೆಯಂತೆ ಆಗಸ್ಟ್ 24ರಂದು ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಸುಮಾರು 13ಜನ ಮಠಾಧೀಶರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದ್ದು,ಕೆ.ಬಿ ಕ್ರಾಸ್ ಮಾತಾ ರೆಸಿಡೆನ್ಸಿ ಶ್ರೀ ಗಣೇಶ ದೇವಾಲಯದ ಆವರಣದಿಂದ ಪೂರ್ಣಕುಂಬಸ್ವಾಗತದೊಂದಿಗೆ ಭವ್ಯ ಮೆರವಣಿಗೆ ನಡೆಯಲ್ಲಿದ್ದು,ನಂದಿಧ್ವಜಕುಣಿತ,ಲಿಂಗದವೀರರ ಕುಣಿತ,ಬಸವನ ಉತ್ಸವನಡೆಯಲ್ಲಿದೆ.ನಂತರ ವಸ್ತು ಪ್ರದರ್ಶನ.ಮಾರಾಟ ಮೇಳ.ಆರೋಗ್ಯ ತಪಾಸಣಾ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲ್ಲಿದೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದರು.
ಪತ್ರಿಕಾ ಘೋಷ್ಠಿಯಲ್ಲಿ ಶ್ರೀಮದ್ ರಂಬಾಪುರಿ ವಿದ್ಯಾಸಂಸ್ಥೆ ಅಧ್ಯಕ್ಷ ಸದಾಶಿವಯ್ಯ,ಸಮಾಜದ ಮುಖಂಡರಾದ ದೇವರಾಜು.ನಗರಸಭಾ ಸದಸ್ಯ ಶಶಿಕಿರಣ್.ಮಾಜಿ ತಾ.ಪಂ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್.ಕೆರೆಗೋಡಿ ದೇವರಾಜು.ಹುಚ್ಚಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷ ಬಿ.ಬಿ ಬಸವರಾಜು.ಬಿಜೆಪಿ ವಕ್ತಾರ ಚಂದ್ರಶೇಖರ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ






