ತಿಪಟೂರು:ಬಿಜೆಪಿ ಮುಖಂಡಹಾಗೂ ನಿವೃತ್ತ ಎಸಿಪಿ ಲೋಕೇಶ್ವರ್ 67ನೇ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಯಿತು.

ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ,ಪೌರಕಾರ್ಮಿಕರಿಗೆ ಸಮವಸ್ತ್ರವಿತರಣೆ,ನಿವೃತ್ತ ಸೈನಿಕರಿಗೆ ಸನ್ಮಾನ ನೆರವೇರಿಸಲಾಯಿತು.
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಆತ್ಮೀಯ ಗೆಳಯ ಲೋಕೇಶ್ವರ್ ರವರಿಗೆ ಹುಟ್ಟುಹಬ್ಬದ ಶುಭಹಾರೈಸಿ,ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಿದರು,ನೂರಾರು ಅಭಿಮಾನಿಗಳು,ಮುಖಂಡರು,ಕಾರ್ಯಕರ್ತರು ಕೇಕ್ ಕತ್ತರಿಸಿ ಶುಭಹಾರೈಸಿದರು.

ನಗರದ ಅರಳಿಕಟ್ಟೆ ಬಳಿ ಲೋಕೇಶ್ವರ್ ಅಭಿಮಾನಿಗಳು ಸುಮಾರು 20ಅಡಿ ಎತ್ತರದ ಹೂವಿನ ಹಾರವನ್ನ ಕ್ರೇನ್ ಮೂಲಕ ಹಾಕಿ,ಪಟಾಕಿಸಿಡಿಸಿ ಸಂಭ್ರಮಿಸಿದರು.

ತಮ್ಮ ಮನೆ ಮುಂಭಾಗ ಸಾವಿರಾರು ಅಭಿಮಾನಿಗಳು ಹೂಗುಚ್ಚನೀಡಿ ಹುಟ್ಟು ಹಬ್ಬ ಆಚರಿಸಿದರೆ,ವಿವಿಧ ಶಾಲೆಗಳಿಗೆ ತೆರಳಿ ಸಾವಿರಾರು ಮಕ್ಕಳಿಗೆ ನೋಟ್ ಬುಕ್, ನೀಡಿಲಾಯಿತು.ಅಭಿಮಾನಿಗಳಿಗಾಗಿ ,ಪೊಂಗಲ್. ಮೊಸರನ್ನ,ವಾಂಗೀಬಾತ್,ಜಿಲೇಬಿ,ಕೊಬ್ಬರಿ ಮಿಟಾಯಿ ವಿಶೇಷ ಖಾದ್ಯಗಳ ಅನ್ನಸಂತರ್ಪಣೆ ನೆರವೇರಿಸಲಾಯಿತು.
ವರದಿ;ಮಂಜುನಾಥ್ ಹಾಲ್ಕುರಿಕೆ




