ತಿಪಟೂರು:ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಸಾರ್ಥವಳ್ಳಿ ಗ್ರಾಮದಲ್ಲಿ ಗೋಕಟ್ಟೆಯೊಂದು ರಕ್ಷಣಾ ಗೋಡೆ ಇಲ್ಲದೆ ಅಪಾಯಕ್ಕೆ ಅಹ್ವಾನ ನೀಡುವಂತೆ ಬಾಯ್ತೆರೆದು ನಿಂತಿದೆ.
ಸಾರ್ಥವಳ್ಳಿ ಗ್ರಾಮದಿಂದ ಆಲೂರು ಗ್ರಾಮದ ಕಡೆಹೋಗುವ ತಿರುವಿನಲ್ಲಿ ಇರುವಂತಹ ಕಟ್ಟೆಯೆ ಯಮಸ್ಪವಾರೂಪಿಯಾಗಿದ್ದು,ಸ್ವಲ್ಪ ಎಚ್ಚರತಪ್ಪಿದರೂ ಜೀವಹಾನಿಯಾಗುವ ಅಪಾಯವಿದೆ.ಆಲೂರು ಕಡೆಯಿಂದ ಬರುವ ವಾಹನಗಳು ಇಳಿಜಾರಿನಲ್ಲಿ ವೇಗವಾಗಿ ಬಂದರೆ ಸ್ವಲ್ಪ ಎಚ್ಚರ ತಪ್ಪಿದರು ಪ್ರಾಣಾಪಾಯ ಸಂಭವಿಸುತ್ತದೆ.ಇನ್ನೂ ಸಾರ್ಥವಳ್ಳಿ ಹಾಗೂ ತಿಪಟೂರು ಹಾಲ್ಕುರಿಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಗೋಕಟ್ಟೆ. ಪಕ್ಕದಲ್ಲಿಯೇ ಪ್ರತಿದಿನ ನೂರಾರು ಬೈಕ್ , ಕಾರು, ಬಸ್ಸು.ಲಾರಿ ಸೇರಿದಂತೆ ವಾಹನಗಳು ಸಂಚರಿಸುತ್ತವೆ.ಸ್ವಲ್ಪ ಎಚ್ಚರ ತಪ್ಪಿದರು ಅಪಾಯ ಕಟ್ಟಿಟ್ಟ ಬತ್ತಿ ಅನೋದು ಕಣ್ಣಿಗೆ ಕಾಣುತ್ತಿದರೂ.ಯಾವುದೇ ಅಧಿಕಾರಿಗಳು.ಹಾಗೂ ಜನನಾಯಕರು ಗೋ ಕಟ್ಟೆಗೆ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ.

ಕಟ್ಟೆಗೆ ಗ್ರಾಮದ ಕೊಳಚೆ ನೀರು ಶೇಖರಣೆಗೊಂಡು ಮಲೀನವಾಗಿದ್ದು,ಬಳಕೆಗೆ ಯೋಗ್ಯವಲ್ಲದಂತಾಗಿದೆ.ತಾಲ್ಲೋಕು ಆಡಳಿತ ತಕ್ಷಣ ಸಾರ್ಥವಳ್ಳಿ ಗ್ರಾಮದ ಬಳಿಇರುವ ಗೋಕಟ್ಟೆಗೆ ಸೂಕ್ತ ತಡೆಗೋಡೆ ನಿರ್ಮಾಣ ಮಾಡಿ ಸಂಭವನೀಯ ಅಪಘಾತ ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ









