ತಿಪಟೂರು: ತಾಲ್ಲೋಕು ಶೈಕ್ಷಣಿಕವಾಗಿ ಮುಂದುವರೆದ ತಾಲ್ಲೋಕು ಇನ್ನೂ ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಲು ಶಿಕ್ಷಕ ಪರಿಶ್ರಮ ಬದ್ದತೆ ಮುಖ್ಯವಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೋಕು ಅಗ್ರಸ್ಥಾನ ಪಡೆಯಲು ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿದರು

ನಗರದ ವಕ್ಕಲಿಗ ಭವನದಲ್ಲಿ ಆಯೋಜಿಸಿದ ಡಾ//ಸರ್ವಪಲ್ಲಿ ರಾಧಾಕೃಷ್ಣನ್ ರವರ 138ನೇ ಜಯಂತಿ ಹಾಗೂ ಶಿಕ್ಷಕರ ದಿನಾಚಾರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ಅವರು ತಾಲ್ಲೋಕು ಶೈಕ್ಷಣಿಕವಾಗಿ ಮುಂದುವರೆದ ತಾಲ್ಲೋಕು ಜಿಲ್ಲೆಯಲ್ಲಿ ತುಮಕೂರು ಹೊರತುಪಡಿಸಿದರೆ ತಿಪಟೂರಿನಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ,ನಮ್ಮ ತಾಲ್ಲೋಕು ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಿ ಉನ್ನತಫಲಿತಾಂಶ ನೀಡಲು ಶಿಕ್ಷಕರು ಪರಿಶ್ರಮಪಡಬೇಕು,ಸರ್ಕಾರದಿಂದ ಅಗತ್ಯವಾಗ ನೆರವು ನೀಡುತ್ತಿದ್ದು ಇನ್ನೂ ಹೆಚ್ಚಿನ ನೆರವು ನೀಡಲಾಗುವುದು,ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಂದ ಅವರು ನಾವು ಸಿದ್ದರಾಮಯ್ಯನವರ ಹಿಂದಿನ ಅವಧಿ ಸರ್ಕಾರದಲ್ಲಿ ಸಹಕಾರ ಮಂತ್ರಿಸ್ಥಾನ ಕಾರಣಾಂತರಗಳಿಂದ ಕೊನೆಕ್ಷಣದಲ್ಲಿ ಕೈತಪ್ಪುವಂತ್ತಾಯಿತು,ಆದರೆ ಈಗಿನ ಸಿದ್ದರಾಮಯ್ಯನವರ ನೇತೃತ್ವದಸರ್ಕಾರದಲ್ಲಿ ಸಂಪುಟ ಪುನಃರಚನೆ ವೇಳೆ ಮಂತ್ರಿಯಾಗುತ್ತೇನೆ ಅನೋ ಭರವಸೆ ಇದೆ,ನಮ್ಮ ಪಕ್ಷದಲ್ಲಿ ಹೋರಾಟ ಮಾಡುತ್ತೇನೆ 40ವರ್ಷಗಳಿಂದ ಪಕ್ಷಕ್ಕಾಗಿ ದುಡಿದ್ದಿದ್ದೇನೆ ಶ್ರಮಕ್ಕೆ ತಕ್ಕಫಲದೊರೆಯುತ್ತದೆ.ಮುಂದಿನ 2029 ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರ ಮಹಿಳಾ ಮೀಸಲು ಕ್ಷೇತ್ರವಾಗಲಿದೆ,ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ
ಕ್ಷೇತ್ರಶಿಕ್ಷಣಾಧಿಕಾರಿ ಶ್ರೀ ಟಿ.ಎಸ್ ತಾರಾಮಣಿ ಮಾತನಾಡಿ ಶಿಕ್ಷಕ ವೃತ್ತಿ ಶ್ರೇಷ್ಠವೃತ್ತಿಯಾಗಿದೆ, ಶಿಕ್ಷಕರು ದೇಶಕಟ್ಟುವ,ಸಮಾಜವನ್ನ ಕಟ್ಟುವ ಮಾನವ ಸಂಪನ್ಮೂಲಗಳ ತಯಾರುಮಾಡುವ ಶ್ರೇಷ್ಠಕೆಲಸವಾಗಿದೆ,ಶಿಕ್ಷಕರು ಬೇಧನೆ ಮಾಡುವುದು ಮುಖ್ಯವಲ್ಲ,ಮಕ್ಕಳ ಕಲಿಕೆಗೆ ಹೆಚ್ಚು ಆಧ್ಯತೆ ನೀಡಬೇಕು,ಸರ್ಕಾರ ಶಿಕ್ಷಕರಿಗೆ ಕರೆದು ಕೆಲಸ ಕೊಟ್ಟಿಲ್ಲ,ನಮ್ಮ ಸಾಮರ್ಧ್ಯದಿಂದ ಮೆರೀಟ್ ಆಧಾರದ ಮೇಲೆ ಕೆಲಸ ಪಡೆದಿದ್ದೇವೆ.ನಾವು ನಮ್ಮ ಸಾಮರ್ಥ್ಯ ಅರಿತು ಬಾಲ್ಯದಿಂದಲೇಮಕ್ಕಳ ಕಲಿಕೆಗೆ ಆದ್ಯತೆ ನೀಡಬೇಕು,ಆಗ ಮಾತ್ರ ಎಸ್ ಎಲ್ಎಲ್ಸಿ ಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.ಖಾಸಗೀ ಶಾಲೆಗಳು ಬಾಯಿಪಾಠ ಮುಕ್ತಗೊಳಿಸಿ ಮಕ್ಕಳ ಕಲಿಕೆಗೆ ಆಧ್ಯತೆ ನೀಡಬೇಕು ಎಂದು ತಿಳಿಸಿದರು.

ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು,ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಜೊತೆಗೆ ಶಿಕ್ಷಕರೂ ಸಹ ಸಂಸ್ಕಾರ ಸಂಸ್ಕೃತಿ ರೂಢಿಸಿಕೊಳ್ಳಬೇಕು.ಸಮಾಜದಲ್ಲಿ ನಾವು ಗೌರವ ಸಂಪಾದನೆ ಮಾಡಬೇಕಾದರೆ,ನಮ್ಮ ವೃತ್ತಿಗೌರವ ಕಾಪಾಡಿಕೊಳ್ಳಬೇಕು.ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರಲ್ಲಿ ವಿವಾಹ ವಿಶ್ಚೇದನ ಪ್ರಕರಣಗಳು ಹೆಚ್ಚುತ್ತಿರುವುದು ಜೀವನ,ಮೌಲ್ಯಕುಸಿತವಾಗುತ್ತಿರುವುದಕ್ಕೆ ಸಾಕ್ಷಿಯಾಗಿದ್ದು,ನಾವು ನಮ್ಮಜೀವನ ಮೌಲ್ಯಕಾಪಾಡಿಕೊಂಡು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ ಶಿಕ್ಷಕರ ವೃತ್ತಿ ಶ್ರೇಷ್ಠ ಎಲ್ಲಾ ವೃತ್ತಿಗೂ ಮೂಲ ಗುರುವಿನ ಸ್ಥಾನ, ಶಿಕ್ಷಕರು ತಮ್ಮ ವೃತ್ತಿಗೌರವ ಹೆಚ್ಚಿಸಿಕೊಳ್ಳುವ ಕೆಲಸ ಮಾಡಬೇಕು ಸಮಾಜಕ್ಕೆ ಆಸ್ತಿಯಾಗುವಂತ್ತಾ ಮಕ್ಕಳನ್ನ ತಯಾರುಮಾಡಬೇಕು ಎಂದು ತಿಳಿಸಿದರು
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಉಪಾಧ್ಯಕ್ಷೆ ಮೇಘಶ್ರೀ ಭೂಷಣ್.ತಾ.ಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್. ಗ್ಯಾರಂಟಿ ಸಮಿತಿ ಅಧ್ಯಕ್ಷ ಮಡೇನೂರು ಕಾಂತರಾಜು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಪರೀಷತ್ ಸದಸ್ಯ ಮಂಜಪ್ಪ ಶಿಕ್ಷಕರ ಸಂಘದ ಮುಖ್ಯಸ್ಥ ಜಯರಾಮ್.ಆರ್.ಜಿ .ಖಾಸಗೀ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆದಿತ್ಯ.ಡಯಟ್ ಪ್ರಾಚಾರ್ಯ ಮಂಜುನಾಥ್.ಬಿ.ಆರ್.ಸಿ ದಕ್ಷಿಣ ಮೂರ್ತಿ.ಮುಂತ್ತಾದವರು ಉಪಸ್ಥಿತರಿದರು
ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ//ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರವನ್ನ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು ಅವರಣದಿಂದ.ಲಿಂಗದ ವೀರರ ಕುಣಿತ,ಚಿಟ್ಟಿಮೇಳ, ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ









