ತಿಪಟೂರು: ಸೆಪ್ಟೆಂಬರ್ 26ರಂದು ನಗರದ ಕಲ್ಪತರು ಕಾಲೇಜು ಆಡಿಟೋರಿಂ ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಅಳವಡಿಸಿದ ಬ್ಯಾನರ್ ನಲ್ಲಿ ಹಾಗೂ ಆಹ್ವಾನ ಪತ್ರಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಕೈ ಬಿಟ್ಟ ಘಟನೆ ಆಕಸ್ಮಿಕವಾಗಿ ಕಣ್ಮ್ತಪ್ಪಿನಿಂದ ಆಗಿರುವ ಘಟನೆಯಾಗಿದ್ದು.ನಾವು ಯಾವುದೇ ಉದೇಶ ಪೂರಕವಾಗಿ ಮಾಡಿಲ್ಲ,ನಾವು ಸಹ ಬುದ್ದ ಬಸವಣ್ಣ.ಡಾ//ಬಿ.ಆರ್ ಅಂಬೇಡ್ಕರ್ ಅನುಯಾಯಿಗಳಾಗಿದ್ದೇವೆ.ಆದರೇ ಆಕಸ್ಮಿಕವಾಗಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು,ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ರವರಲ್ಲಿ ಕ್ಷಮೆಯಾಚಿಸುವುದ್ದಾಗಿ ಎನ್.ಎಸ್.ಯೂ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ತಿಳಿಸಿದರು
ನಗರದ ಖಾಸಗೀ ಹೋಟೆಲ್ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೇಮಂತ್ ಕುಮಾರ್ ನಾನು ಸೇರಿದಂತೆ ಸಂಘ ಸಂಘಟನೆ ಬುದ್ದ ಬಸವಣ್ಣ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಅನುಯಾಯಿಗಳಾಗಿದ್ದು ಸಂವಿಧಾನದ ಬಗ್ಗೆ ಅಪಾಯ ಹೊಂದಿದ್ದೇವೆ, ಆದರೆ ಆಕಸ್ಮಿಕವಾಗಿ ಕಣ್ಮ್ತಪ್ಪಿನಿಂದ ಬ್ಯಾನರ್ ನಲ್ಲಿ ಅಂಬೇಡ್ಕರ್ ಭಾವಚಿತ್ರ ಕೈ ಬಿಟ್ಟಿರುವುದು ತೀವ್ರನೋವಾಗಿದ್ದು, ಘಟನೆಗೆ ಬಗ್ಗೆ ಕ್ಷಮೆಯಾಗಿಸುವುದ್ದಾಗಿ ತಿಳಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ










