ತಿಪಟೂರು:ತಿಪಟೂರು ತಹಸೀಲ್ದಾರ್ ಆಗಿ 3 ರ್ಷಗಳ ಕಾಲ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ತಹಸೀಲ್ದಾರ್ ಪವನ್ ಕುಮಾರ್ ರವರಿಗೆ ತಿಪಟೂರು ಬಯಲು ಸೀಮೆ ಸಾಮಾಜಿಕ ಹಾಗೂ ಸಂಸ್ಕೃತಿಕ ಸಂಘದಿಂದ ಆತ್ಮೀಕವಾಗಿ ಭೀಳ್ಕೊಡುಗೆ ನೀಡಲಾಯಿತು.

ತಿಪಟೂರು ಕೌಸ್ತುಭ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಭೀಳ್ಕೊಡುಗೆ ನೀಡಲಾಯಿತು.ಸಮಾರಂಭದಲ್ಲಿ ಮಾತನಾಡಿದ ಸಂಘದ ಸಂಸ್ಥಾಪಕರಾದ ಎನ್ ಬಾನುಪ್ರಶಾಂತ್ ತಹಸೀಲ್ದಾರ್ ಪವನ್ ಕುಮಾರ್ ,ಸರಳ ಹಾಗೂ ಮೃದು ಸ್ವಾಭಾವದ ವ್ಯಕ್ತಿತ್ವ ಉಳ್ಳ ಪ್ರಾಮಾಣಿಕ ಅಧಿಕಾರಿ,ಸರ್ಕಾರಿ ಉದ್ಯೋಗದಲ್ಲಿ ಇರುವವರು ದೂರದೃಷ್ಠಿಯಿಂದ ಕೆಲಸ ಮಾಡಿದರೆ,ನೊಂದವರಿಗೆ ನೆರವಾಗುವ ಜೊತೆಗೆ, ಏಳಿಗೆಯಲ್ಲಿ ತೊಡಗಬಹುದು,ಪವನ್ ಕುಮಾರ್ ಸರಳ ವ್ಯಕ್ತಿತ್ವದ ಮೂಲಕವೇ ಜನರ ಮನಸಿಸ್ಸಿನಲ್ಲಿ ಉಳಿದಿದ್ದಾರೆ. ಕೆರೆಒತ್ತವರಿಯಂತ ಕ್ಲಿಷ್ಟಕರವಾದ ಕೆಲಸವನ್ನ ಯಾವುದೇ ಆರೋಪ ವಿವಾದಗಳು ಇಲ್ಲದ ರೀತಿಯಲ್ಲಿ ನಿಭಾಯಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಹಲವಾರು ದೇವಾಲಯಗಳ ವಿವಾದಗಳನ್ನ ಸೂಕ್ಷ್ಮವಾಗಿ ಬಗೆಹರಿಸುವ ಜನಮನ್ನಣೆಗೆ ಪಾತ್ರರಾಗಿದ್ದಾರೆ. ತಾಲ್ಲೋಕಿನಲ್ಲಿ ಉತ್ತಮ ಸೇವೆಸಲ್ಲಿಸಿ ವರ್ಗಾವಣೆಗೊಂಡಿದ್ದು,ಅವರ ಮುಂದಿನ ಸೇವಾವಧಿ ಉತ್ತಮವಾಗಿರಲಿ ಎಂದು ತಿಳಿಸಿದರು.

ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ನಾಗರೀಕ ಸನ್ಮಾನ ಸ್ವೀಕರಿಸಿದ ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ ತಿಪಟೂರಿನಲ್ಲಿ ನಮ್ಮ ಸಿಬ್ಬಂದಿ ಹಾಗೂ ಜನನಾಯಕರು ಹಾಗೂ ಸಾರ್ವಜನಿಕರು ಉತ್ತಮವಾಗಿ ಸ್ವಂದಿಸಿ ಸಹಕಾರ ನೀಡಿದ್ದಾರೆ.ನಾನು ವಿದೇಶದಲ್ಲಿ ವಿದ್ಯಾಭ್ಯಾಸ ಹಾಗೂ ವೃತ್ತಿಯಲ್ಲಿ ತೊಡಗಿದ ನಂತರಕಂದಾಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದೆ,ಸಾರ್ವಜನಿಕರೊಂದಿಗೆ ಉತ್ತಮ ಅನುಭವ ದೊರೆಯುತ್ತಿದೆ ತಾಲ್ಲೋಕಿನ ಜನಸ್ಪಂದನೆಗೆ ಸದಾಋಣಿಯಾಗಿದ್ದೇನೆ ಎಂದು ತಿಳಿಸಿದರು..
ಸಂಘದ ಗೌರವಾಧ್ಯಕ್ಷ ಕೆ.ಎಂ.ರಾಜಣ್ಣ ಮಾತನಾಡಿ ನಮ್ಮ ವ್ಯವಸ್ಥೆಯಲ್ಲಿ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಚಾರ ತಾಂಡವವಾಡುತ್ತಿರುವ ಸಮಯದಲ್ಲಿ ಹಲವಾರು ಜನ ಸಮಾಜಮುಖಿಯಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಾ,ಜನಮನ್ನಣೆಗೆ ಪಾತ್ರರಾಗಿದ್ದಾರೆ, ಅಂತಹ ವ್ಯಕ್ತಿಗಳಲ್ಲಿ ಪವನ್ ಕುಮಾರ್ ಸಹ ಒಬ್ಬರು,ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ವಿವಾದಗಳಿಲ್ಲದೆ ಕೆಲಸ ನಿರ್ವಹಿಸಿದ್ದಾರೆ, ಅವರ ಮುಂದಿನ ವೃತ್ತಿಜೀವನ ಸಮಾಜಮುಖಿಯಾಗಿ ಇರಲಿಎಂದು ತಿಳಿಸಿದರು.
ಸವಿತಾ ಸಮಾಜದ ಹಿರಿಯ ಮುಖಂಡ ಟಿ.ಸಿ ಗೋವಿಂದರಾಜು ಮಾತನಾಡಿ ಸಮಾಜಮುಖಿ ವ್ಯಕ್ತಿತ್ವದ ಸರಳ ಅಧಿಕಾರಿ ಪವನ್ ಕುಮಾರ್ ವರ್ಗಾವಣೆ ತೀವ್ರನೋವುಂಟು ಮಾಡಿದೆ, ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ನೊಂದವರಿಗೆ ಯಾವರೀತಿ ಸ್ಪಂದಿಸಲು ಸಾಧ್ಯವು ಅಷ್ಟು ತುರ್ತಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು
ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಸಿ.ನಾಗರಾಜು.ಬ್ಯಾಂಕ್ ಕುಮಾರಸ್ವಾಮಿ.ಹಳೇಪಾಳ್ಯ ಸದಣ್ಣ.ಚಿನ್ನಬೆಳ್ಳಿ ಸ್ವಾಮಿ.ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ.ಸಂಘದ ಪದಾಧಿಕಾರಿಗಳಾದ ತಾಂಡವಮೂರ್ತಿ.ಟಿ.ಆರ್ ರಘು.ಸರ್ವೇಶಾಚಾರ್.ಮಧು.ಸಮರ್ಥ್ (ಡಿಂಪು)ಬ್ಯಾಗ್ ಅಬ್ಜಾಲ್ .ಕೀರ್ತಿ.ಇತರರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




