ತಿಪಟೂರು ನಗರದ ಕಲ್ಪತರು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಕೊಬ್ಬರಿ ವರ್ತಕರಾದ ಬಿ.ಎಸ್. ಉಮೇಶ್ ಮತ್ತು ವಿದ್ಯಾ ಉಮೇಶ್ ದಂಪತಿಗಳ ಪುತ್ರ ಪ್ರಣವ್ ಬೆಳ್ಳೂರು, ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ತೋರಿದ ಸಾಹಸಕ್ಕಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿಯಾದ Mention in Despatches ಎಂಬ ವಿಶಿಷ್ಟ ಗೌರವಕ್ಕೆ ಅವರು ಭಾಜನರಾಗಿದ್ದಾರೆ.

ತಿಪಟೂರಿನ ಯುವಕನ ಈ ಸಾಧನೆ ರಾಷ್ಟ್ರದ ಮಟ್ಟದಲ್ಲಿ ಹೆಮ್ಮೆ ಹೆಚ್ಚಿಸಿದ್ದು, ಜಿಲ್ಲೆಯ ಯುವಕರಿಗೆ ಶೌರ್ಯ ಮತ್ತು ದೇಶಭಕ್ತಿಯ ಸ್ಫೂರ್ತಿಯಾಗಿಯೂ ಪರಿಣಮಿಸಿದೆ.
ಯುವ ಪೀಳಿಗೆಯ ಕನಸುಗಳು ಕೇವಲ ವೃತ್ತಿ ಅಥವಾ ಉದ್ಯೋಗದ ಮಟ್ಟದಲ್ಲೇ ಸೀಮಿತವಾಗಿಲ್ಲ. ತಿಪಟೂರಿನ ಪ್ರಣವ್ ಬೆಳ್ಳೂರು, ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿಗೆ ಭಾಜನರಾಗಿರುವುದು, ಇಂದಿನ ಯುವಕರಿಗೆ ಸ್ಪೂರ್ಥಿಯಾಗಿದೆ
Mention in Despatches ಎಂಬ ವಿಶೇಷ ಗೌರವ ಸಾಮಾನ್ಯರ ಕೈ ಸೇರುವುದಿಲ್ಲ; ಅದನ್ನು ಸಾಧಿಸಲು ಬೇಕಾಗಿರುವುದು ಅಪರೂಪದ ಸಾಹಸ, ತ್ಯಾಗ ಮತ್ತು ದೇಶಸೇವೆಯ ಬದ್ಧತೆ. ಈ ಸಾಧನೆ ತಿಪಟೂರಿನ ನೆಲವೂ ಶೌರ್ಯವನ್ನು ಹೊತ್ತೊಯ್ಯಬಲ್ಲದು ಎಂಬುದನ್ನು ಮತ್ತೊಮ್ಮೆ ಸಾರಿದೆ.ಕಲ್ಪತರು ನಾಡಿಗೆ ಹೆಮ್ಮತಂದ ಪ್ರಣವ್ ಬೆಳ್ಳೂರು ರವರ ಸಾಧನೆಗೆ ಶಾಸಕ ಕೆ.ಷಡಕ್ಷರಿ.ಮಾಜಿ ಸಚಿವ ಬಿ.ಸಿ.ನಾಗೇಶ್.ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್.ಖ್ಯಾತ ವೈದ್ಯರಾದ ಡಾ//ಶ್ರೀಧರ್.ಡಾ//ಬಿ.ವಿ ವಿವೇಚನ್ .ಸೇರಿದಂತೆ ಅನೇಕ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ






