ಪಹಲ್ಗಾಮ್ ನಲ್ಲಿ ಅಮಾಯಕ ನಾಗರೀಕರ ಮೇಲೆ ಪಾಕಿಸ್ಥಾನ ಪ್ರಚೋದಿತ ಭಯೋತ್ವಾದಕರು ನಡೆಸಿರುವ ದಾಳಿಗೆ ಪ್ರತಿಕಾರವಾಗಿ ನಮ್ಮ ದೇಶದ ವೀರಸೈನಿಕರು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಚರಣೆ ಮೂಲಕ ಉಗ್ರಗಾಮಿ ಪಾಕಿಸ್ಥಾನದ ಹೆಡೆಮುರಿಕಟ್ಟಿದ್ದಾರೆ, ಸೈನಿಕರು ರಾಷ್ಟ್ರ ರಕ್ಷಣೆಗಾಗಿ ತೋರಿದ ಧೈರ್ಯ. ಶೌರ್ಯ ಬೆಂಬಲಿಸಿ ತಿಪಟೂರು ನಾಗರಿಕರಿಂದ ಮೇ 28ರಂದು ಬುಧವಾರ ತಿಪಟೂರು ನಗರದಲ್ಲಿ ಬೃಹತ್ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು.ನಾಗರೀಕ ಸಂಘಟನೆಗಳ ಮುಖಂಡರು ತಿರಂಗಯಾತ್ರೆ ರೂಪರೇಷಗಳ ಬಗ್ಗೆ ಚರ್ಚೆ ನಡೆಸಿದರು. ಭಯೋತ್ಪಾದ ರಾಷ್ಟ್ರ ಪಾಕಿಸ್ಥಾನಕ್ಕೆ ನುಗ್ಗಿ ಹೊಡೆದು, ಉಗ್ರರ ಹಡಗುತಾಣಗಳನ್ನ ನಾಶಮಾಡಿರುವ,ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆಂಬಲಿಸಿ ತಿಪಟೂರಿನಲ್ಲಿ ಬೃಹತ್ ತಿರಂಗ ಯಾತ್ರೆನಡೆಸಲಾಗುವುದು.ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.ಸಭೆಯಲ್ಲಿ ನಿವೃತ್ತ ಎಸಿಪಿ ಬಿಜೆಪಿ ಮುಖಂಡರಾದ ಲೋಕೇಶ್ವರ್ ತಾಲ್ಲೋಕು ಬಿಜೆಪಿ ಅಧ್ಯಕ್ಷರಾದ ಸತೀಶ್ ,ನಗರಾಧ್ಯಕ್ಷ ಜಗದೀಶ್ ಹಿಂದೂಪರ ಸಂಘಟನೆಗಳ ಮುಖಂಡರಾದ ಹಳ್ಳಿಕಾರ್ ವಿನಯ್, ಮಡೇನೂರು ಬಾಳೆಕಾಯಿ ನಟರಾಜ್ .ಗಾಡಿ ಮಂಜುನಾಥ್ ರಂಗಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ಹೊಸಳ್ಳಿ ವಿಶ್ವನಾಥ್ .ಕುಮಾರ್ ಆಸ್ಪತ್ರೆ ಖ್ಯಾತ ವೈದ್ಯರಾದ ಡಾ // ಶ್ರೀಧರ್ .
ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ .ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ನಗರಸಭಾ ಮಾಜಿ ಅಧ್ಯಕ್ಷ ರಾಮ್ ಮೋಹನ್ ಸದಸ್ಯರಾದ ಶಶಿಕಿರಣ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




