ತಿಪಟೂರು:ಕಲ್ಪತರು ನಗರಿ ತಿಪಟೂರಿನಲ್ಲಿ ನಮ್ಮ ದೇಶದ ಹೆಮ್ಮೆಯ ಸೈನಿಕರು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಚರಣೆ ಬೆಂಬಲಿಸಿ ತಿರಂಗಯಾತ್ರೆ ಅದ್ದೂರಿಯಾಗಿ ನಡೆಯಿತು.ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದಿಂದ ಹೊರಟ ತಿರಂಗಯಾತ್ರೆ .ಬಿ.ಹೆಚ್ ರಸ್ತೆ ಮೂಲಕ ಸಾಗಿತು.ದಾರಿಯುದ್ದಕ್ಕೂ ಸಾವಿರಾರುಜನ ವಿದ್ಯಾರ್ಥಿಗಳು. ನಾಗರೀಕರು ಸಂಘಸಂಸ್ಥೆಗಳ ಮುಖಂಡರು. ಭಾರತ್ ಮಾತಾ ಕಿ ಜೈ .ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ. ನಮ್ಮ ಹೆಮ್ಮೆಯ ಸೈನಿಕರಿಗೆ ಜಯವಾಗಲಿ.ಎನ್ನುವ ಜಯಘೋಷ ಮುಗಿಲು ಮುಟ್ಟಿತು.

ಸುಮಾರು 2.5 ಕಿಲೋ ಮೀಟರ್ ಉದ್ದದ ತಿರಂಗ ಹಿಡಿದ ವಿದ್ಯಾರ್ಥಿಗಳು ಯಾತ್ರೆಯುದ್ದಕ್ಕೂ ಹೆಜ್ಜೆಯಾಕಿದರು.ಎನ್.ಸಿ.ಸಿ ಸ್ಕೌಟ್ಸ್ &ಗೈಡ್ಸ್ ಸೇರಿದಂತೆ.ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು. ತಿರಂಗಯಾತ್ರೆಯಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಶ್ರೀಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮೀಜಿ.ಕಂಚಾಘಟ್ಟ ಶ್ರೀಷಡಕ್ಷರ ಮಠದ ಪರಮಪೂಜ್ಯ ಶ್ರೀ ಶ್ರೀ ರುದ್ರಮುನಿಮಹಾಸ್ವಾಮೀಜಿ. ಯಾತ್ರೆಗೆ ಮೆರುಗು ನೀಡಿದರು.

ಯಾತ್ರೆಯಲ್ಲಿ ವೀರಗಾಸೆ ನೃತ್ಯ ಸಾರ್ವಜನಿಕರ ಗಮನಸೆಳೆಯಿತು.
ಕಲ್ಪತರು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇಶಕ್ಕಾಗಿ ಸೇವೆಸಲ್ಲಿಸಿದ ವೀರಯೋಧರನ್ನ ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ನಿವೃತ್ತ ಎಸಿಪಿ ಹಾಗೂ ಬಿಜೆಪಿ ಮುಖಂಡ ಲೋಕೇಶ್ವರ್.ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ .ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್.ಉಪಾಧ್ಯಕ್ಷೆ ಮೇಘನಾ ಭೂಷಣ್.ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಖಿಲ್ ರಾಜಣ್ಣ.ಮುಖಂಡರಾದ ಪ್ರಸನ್ನ ಕುಮಾರ್. ಷಫಿಉಲ್ಲಾ ಷರೀಪ್. ಸಮಿಉಲ್ಲಾ.ನಗರಸಭಾ ಸದಸ್ಯ ರಾಮ್ ಮೋಹನ್ .ಶಶಿಕಿರಣ್. ಖ್ಯಾತ ವೈದ್ಯರಾದ ಡಾ//ಶ್ರೀಧರ್.ಡಾ//ವಿವೇಚನ್.ಮುಖಂಡರಾದ ಮಡೇನೂರು ಕಾಂತರಾಜು ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




