ತಿಪಟೂರು :ತಾಲೂಕಿನ ಹೊನ್ನವಳ್ಳಿಯಲ್ಲಿ ಶ್ರೀ ಕೃಷ್ಣ ಕನಕ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನ ಆಯ್ಕೆಮಾಡಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ್ ಯಾದವ್, ಉಪಾಧ್ಯಕ್ಷರಾಗಿ ಚಂದ್ರಮೋಹನ್ ಹೊನ್ನವಳ್ಳಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಸಂಘದ ಅಧ್ಯಕ್ಷರಾದ ಪ್ರಕಾಶ್ ಯಾದವ್ ಮಾತನಾಡಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನ ಅವಿರೋಧವಾಗಿ ಆಯ್ಕೆ ಮಾಡಿರುವುದು ಅಭಿನಂದನೀಯ,ನಮ್ಮ ಸಂಘವು ಹೊನ್ನವಳ್ಳಿ ಹೋಬಳಿ ಕಾರ್ಯವ್ಯಾಪ್ತಿ ಹೊಂದಿದ್ದು,ನಮ್ಮ ಸಂಘದ ವ್ಯಾಪ್ತಿಯಲ್ಲಿ ಬರುವ ಕುರಿಗಾರರ ಸಹಕಾರಕ್ಕೆ ಸದಾ ಬದ್ದವಾಗಿರುತ್ತೇನೆ, ಅವರ ಕುಂದು ಕೊರತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡಲಾಗುವುದು, ಸರ್ಕಾರ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮಗಳಲ್ಲಿ ದೊರೆಯುವ ಸೌಲಭ್ಯವನ್ನ ನಿಯಮಾನುಸಾರ ಅರ್ಹಫಲಾನುಭವಿಗಳಿಗೆ ದೊರೆಯುವಂತೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇವೆ, ನಾನು ಕೂಡ ಒಂದು ಬಡ ಕುರಿಗಾರರ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ನನ್ನ ತಂದೆ ತಾಯಿ ನನ್ನ ಸಂಬಂಧಿಕರು ಹಾಗೂ ನನ್ನ ಸುತ್ತಮುತ್ತಲ ಸೋದರ ಸಮಾಜದವರು ಈ ಕುರಿ ಸಾಕಾಣಿಕೆಯನ್ನು ಜೀವನೋಪಾಯವಾಗಿ ಮಾಡುತ್ತಿದ್ದಾರೆ.ಆದರೆ ನಮ್ಮ ಭಾಗದಲ್ಲಿ ಕುರಿಗಾಯಿಗಳಿಗೆ ಸರಿಯಾದ ಪ್ರಮಾಣದಲ್ಲಿ ಸವಲತ್ತು ದೊರೆಯುತ್ತಿಲ್ಲ,ಕುರಿಗಾಯಿಗಳ ಹೊಂದಾಣಿಕೆ ಕೊರತೆಯಿಂದ ಸವಲತ್ತುಗಳು ಪಡೆಯಲು ಸಾಧ್ಯವಾಗುತ್ತಿಲ್ಲ ಆದರಿಂದ ಕುರಿಗಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಸಂಘಟಿತರಾಗ ಬೇಕು ಎಂದು ತಿಳಿಸಿದರು ಸಭೆಯಲ್ಲಿ ಮುಖಂಡರಾದ ಕಿಟ್ಟಪ್ಪ,ಬಸವರಾಜು.ಶಿವಮ್ಮ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




