:ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿದ್ಯಾಧರ್ ರವರು ಮೈಸೂರಿಗೆ ವರ್ಗಾವಣೆಗೊಂಡ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಹಾಗೂ ನಾಗರೀಕರಿಂದ ಆತ್ಮೀಕವಾಗಿ ಸನ್ಮಾನಿಸಿ ಭೀಳ್ಕೊಡುಗೆ ನೀಡಲಾಯಿತು.

ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆವರಣದಲ್ಲಿ ನಡೆದ ಭೀಳ್ಕೊಡುಗೆ ಸಮಾರಂಭದಲ್ಲಿ ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಮ್ಯಾನೇಜರ್ ವಿದ್ಯಾಧರ್ ನಾನು ಕಲ್ಪತರು ನಾಡು ತಿಪಟೂರಿನಲ್ಲಿ ಸಲ್ಲಿಸಿರುವ ಸೇವೆ ಅವೀಸ್ಮರಣೀಯ,ಜನರ ಆತ್ಮೀಯತೆ ಹಾಗೂ ವಿಶ್ವಾಸಕ್ಕೆ ಚಿರರುಣಿಯಾಗಿದ್ದೇನೆ.ನಾವು ಬ್ಯಾಂಕ್ ಅಧಿಕಾರಿಗೆ,ಜನರೊಂದಿಗೆ ನಾವು ತೋರುವ ಆತ್ಮೀಯತೆ ಹಾಗೂ ನಡೆಯಂತೆ ಜನಗೌರವ ವಿಶ್ವಾಸದಿಂದ ಕಾಣುತ್ತಾರೆ. ಸರ್ಕಾರ ಹಾಗೂ ಬ್ಯಾಂಕ್ ನಿಯಮಗಳಂತೆ ಜನಸ್ನೇಹಿಯಾಗಿ ಕೆಲಸ ಮಾಡಿದರೆ, ಜನರ ಗೌರವ ಪ್ರೀತಿಗೆ ಪಾತ್ರರಾಗ ಬಹುದು,ತಿಪಟೂರಿನಲ್ಲಿ 3 ವರ್ಷ ಸಲ್ಲಿಸಿರುವ ಸೇವೆ ತೃಪ್ತಿ ತಂದಿದೆ,ಬ್ಯಾಂಕ್ ಸಿಬ್ಬಂದಿಯ ಸಹಕಾರ,ಜನರ ಅಭಿಮಾನಕ್ಕೆ ಕೃತಜ್ಞತೆಸಲ್ಲಿಸುವುದ್ದಾಗಿ ತಿಳಿಸಿದರು.

ಭೀಳ್ಕೊಡುಗೆ ಸಮಾರಂಭದಲ್ಲಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ತಿಪಟೂರು ಪರವಾಗಿ ಸನ್ಮಾನ ನೆರವೇರಿಸಿ ಮಾತನಾಡಿದ ಸಂಘದ ಸಂಸ್ಥಾಪಕ ಎನ್.ಬಾನುಪ್ರಶಾಂತ್ ,ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಜನಮನ್ನಣೆ ಸಿಕ್ಕೆಸಿಗುತ್ತದೆ.ಸರ್ಕಾರದ ಸೇವೆಯಲ್ಲಿ ಇರುವ ಅಧಿಕಾರಿಗಳಿಗೆ ವರ್ಗಾವಣೆ ಎನ್ನುವುದು ಸರ್ವೇ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ.ನಾನು ಮಾಡುವ ಕೆಲಸದಲ್ಲಿ ಜನಪರವಾಗಿ ಕೆಲಸ ಮಾಡಬೇಕು,ಜನಸ್ಪಂದನೆಯಿಂದ ಕೆಲಸ ಮಾಡಿದರೆ ಸಂಕಷ್ಟದಲ್ಲಿ ಇರುವವರಿಗೆ ನೆರವಾಗ ಬಹುದು.ಕಾನೂನು ಚೌಕಟ್ಟಿನಲ್ಲಿ ನಾನು ಯಾವರೀತಿ ಸಹಾಯಮಾಡಲು ಸಾಧ್ಯವಿದೆಯೋ .ಅಂತಹ ಸಹಾಯಮಾಡಿದರೆ,ನಾವು ನೀಡುವ ಸಾಲಸೌಲಭ್ಯ ಹಾಗೂ ನೆರವು,ಅವರ ಜೀವನ ರೂಪಿಸಿಕೊಳ್ಳಲು.ದಾರಿಯಾಗುತ್ತದೆ.ಇನಸ್ಪಂದನೆಯ ಮನಸ್ಸುಳ್ಳ ವಿದ್ಯಾಧರ್ ರವರು ತಮ್ಮ ಸೇವಾ ಅವಧಿಯಲ್ಲಿ.ಬ್ಯಾಂಕ್ ನಿಯಮಾನುಸಾರ ಸಾಕಷ್ಟು ಸಹಾಯ ಮಾಡಿದ್ದಾರೆ.ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಮತ್ತಿಘಟ್ಟ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂ.ಆರ್ ಕುಮಾರಸ್ವಾಮಿ.ನಾರಾಯಣಗೌಡ.ಸುಭಾಷ್ ಬಿ.ಮಲ್ಲಿಕಾರ್ಜುನ್.ಎಸ್.ಬಿ.ನಾಗರಾಜು.ಸಿಬ್ಬಂದಿಗಳಾದ ಸುನೀಲ್.ಭಾವತಾರಿಣಿ.ನವ್ಯ.ಶೈನಿಪ್ರಿಯ.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




