ತಿಪಟೂರು :ತಾಲ್ಲೋಕಿನ ಕಸಬಾ ಹೋಬಳಿ ಶಿವರ ಗ್ರಾಮದಲ್ಲಿ ರಾತ್ರಿ ಕುರಿ ಗೂಡಿಗೆ ನುಗ್ಗಿದ ಚಿರತೆಯೊಂದು ಕುರಿ ಗೂಡಿನಲ್ಲಿ ಇದ್ದ ಸುಮಾರು 8ಕುರಿಗಳನ್ನ ಬಲಿ ಪಡೆದಿದ್ದು,4ಕುರಿಗಳ ಗಾಯಗೊಂಡಿವೆ
ಶಿವರ ಗ್ರಾಮದ ರಾಜಶೇಖರ್ ಎಂಬುವವರಿಗೆ ಸೇರಿದ ಕುರಿ ಗೂಡಿನಲ್ಲಿ ಘಟನೆ ನಡೆದಿದ್ದು.
ರಾತ್ರಿ ಕುರಿಗೂಡಿಗೆ ಕುರಿ ನುಗ್ಗಿ 8ಕುರಿ ತಿಂದಿರುವ ಘಟನೆ ಬೆಳಗ್ಗೆ ಕುರಿಯನ್ನ ಆಚೆ ಬಿಡಲು ಹೋದಾಗ ಘಟನೆ ಬೆಳಕಿಗೆ ಬಂದಿದ್ದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ವಲಯ ಅರಣ್ಯಾಧಿಕಾರಿ ಮಧು ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಚಿರತೆ ಹೋಡಾಟ ಕಂಡುಬಂದಿದ್ದು ತಕ್ಷಣ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದು,ವಲಯ ಅರಣ್ಯಾಧಿಕಾರಿ ಮಧು ಚಿರತೆ ಸೆರೆಹಿಡಿಯಲು ಬೋನ್ ಇರಿಸಲಾಗುವುದು ಅಲ್ಲದೆ. ಕುರಿ ಕಳೆದುಕೊಂಡ ಸಂತ್ರಸ್ಥರಿಗೆ. ಸರ್ಕಾರದಿಂದದೊರೆಯುವ ಪರಿಹಾರ ದೊರಕಿಸಿಕೊಡುವುದ್ದಾಗಿ ತಿಳಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ










