ತಿಪಟೂರು ಉಪವಿಭಾಗ ಪೊಲೀಸ್ ಇಲಾಖೆ. ನಗರಪೊಲೀಸ್ ಠಾಣೆ ತಿಪಟೂರು ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳಿಂದ ವಿಶ್ವಮಾದಕ ವಸ್ತು ಸೇವನೆ ಹಾಗೂ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥ ನಡೆಸಲಾಯಿತು.

ತಿಪಟೂರು:ನಗರಸಭೆ ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆಹಾಗೂ ಸಾಗಾಟ ವಿರೋದಿ ದಿನಾಚಾರಣೆ ಜಾಗೃತಿ ಜಾಥಕ್ಕೆ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ ಚಾಲನೆ ನೀಡಿದರು.
ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯುವಕರು ಮಾದಕ ವ್ಯಸನದಿಂದ ದೂರಿರಬೇಕು,ನಶೆಬರಿಸುವ ವಸ್ತುಗಳು ಮನುಷ್ಯನ ಮಾನಸಿಕ ಸ್ಥಿಮಿತಕಳೆಯುವ ಜೊತೆಗೆ,ಸಮಾಜಘಾತುಕ ಕೃತ್ಯಗಳಿಗೆ ತೊಡಗುತ್ತಿದ್ದಾರೆ,ಗಾಂಜಾ,ಅಫೀಮ್,ಚಾರಸ್,ಕೋಕೇನ್ ನಂತಹ ವಸ್ತುಗಳು ಜಗತ್ತಿನಾಧ್ಯಂತ ಸಾವಿರಾರು ಯುವಕರು ಜೀವನಹಾಳುಮಾಡಿಕೊಳ್ಳುತ್ತಿದ್ದಾರೆ,ವಿದ್ಯಾರ್ಥಿಗಳು ಮಾದಕವಸ್ತುಗಳಿಂದ ದೂರವಿರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ತಿಪಟೂರು ಉಪವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ವಿನಾಯಕ ಶೆಟಿಗೇರಿ ಮಾತನಾಡಿ ಮಾದಕ ವ್ಯಸನ ಮನುಷ್ಯನ ಮಾನಸಿಕ ಹಾಗೂ ದೈಹಿಕವಾಗಿ ಅಪಾಯ ಉಂಟುಮಾಡುತ್ತದೆ ಅಲ್ಲದೆ ಮನುಷ್ಯನ ಜೀವಕ್ಕೆ ಕಂಟಕವಾಗ ಬಹುದು.ಪೊಲೀಸ್ ಇಲಾಖೆ ಮಾದಕವಸ್ತುನಿಗ್ರಹಕ್ಕೆ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದ್ದು.ಸಮಾಜಕ್ಕೆ ಮಾರಕವಾಗಿರುವ ಪಿಡುಗನ್ನ ನಿಗ್ರಹಿಸಲು ಸಾರ್ವಜನಿಕರ ಸಹಕಾರ ಅಗತ್ಯ ನಮ್ಮ ತಿಪಟೂರು ವ್ಯಾಪ್ತಿಯಲ್ಲಿ ಮಾದಕ ವ್ಯಸನ ಅಥವಾ ಸಾಗಾಟದಂತ ಕೃತ್ಯಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ,ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಸನ್ನದವಾಗಿದೆ.ಪೊಲೀಸ್ ಇಲಾಖೆ ಹಾಗೂ ತಾಲ್ಲೋಕಿನ ವಿವಿಧ ಇಲಾಖೆಗಳು ಹಾಗೂಸಂಘ ಸಂಸ್ಥೆಗಳು ನೆರವಿನಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.ಮಾದಕ ವೆಸನ ಎಷ್ಟು ಅಪಾಯಕಾರಿಯಾಗಿದೆ ಎಂದರೆ ಯುಎನ್ಓಡಿಸಿ ಸರ್ವೆ ಪ್ರಕಾರ ಪ್ರಪಂಚದಲ್ಲಿ 292 ಮಿಲಿಯನ್ ಯುವಕರು ಮಾದಕವಸ್ತುಗಳಿಗೆ ದಾಸರಾಗಿದ್ದಾರೆ.ನಶೆಬರುವ ವಸ್ತುಗಳಿಂದ ವಿದ್ಯಾರ್ಥಿಗಳು ಹಾಗೂ ಯುವಕರು ದೂರವಿರಬೇಕು,ನಾವು ಎಚ್ಚರವಾಗಿರುವ ಜೊತೆಗೆ ಸಮಾಜದ ಇತರರಿಗೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು,ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಖ್ಯಾತವೈದ್ಯರಾದ ಡಾ//ಶ್ರೀಧರ್ ಮಾತನಾಡಿ ನಶೆ ಉಂಟುಮಾಡುವ ವಸ್ತುಗಳು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ.ವಿದ್ಯಾರ್ಥಿಗಳು ಬೀಡಿ ಸಿಗರೇಟು.ಮದ್ಯ.ಗುಟ್ಕ,ಗಾಂಜಾ.ಅಫೀಮ್ ನಂತಹ ವಸ್ತುಗಳಿಂದ ದೂರವಿರಬೇಕು.ಎಂದು ತಿಳಿಸಿದರು
ತಿಪಟೂರು ನಗರದ ಬಿ.ಹೆಚ್ ರಸ್ತೆ ಮೂಲಕ ಸಾಗಿದ ಜಾಗೃತಿ ಜಾಥ ಕಲ್ಪತರು ಕ್ರೀಡಾಂಗಣದಲ್ಲಿ ಸಮಾರೋಪ ನಡೆಸಲಾಯಿತು.ಸಾರ್ವಜನಿಕರು ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೋಕು ಪಂಚಾಯ್ತಿ ಇಒ ಸುದರ್ಶನ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಚಂದ್ರಶೇಖರ್.ನಗರಠಾಣೆ ಸಬ್ ಇನ್ಪೆಕ್ಟರ್ ಕೃಷ್ಣಪ್ಪ.ಹೊನ್ನವಳ್ಳಿ ಸಬ್ ಇನ್ಪೆಕ್ಟರ್ ರಾಜೇಶ್.ಗ್ರಾಮಾಂತರ ಠಾಣೆ ಸಬ್ ಇನ್ಪೆಕ್ಟರ್ ನಾಗರಾಜು.ಕೆ.ಬಿ ಕ್ರಾಸ್ ಸಬ್ ಇನ್ಪೆಕ್ಟರ್ ಮಹೇಶ್.ಖ್ಯಾತ ವೈದ್ಯರಾದ ಡಾ//ವಿವೇಚನ್.ತಾಲ್ಲೋಕು ವೈದ್ಯಾಧಿಕಾರಿ ಚನ್ನಕೇಶವ.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




