ತಿಪಟೂರು :ತಾಲ್ಲೋಕಿನ ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಪಟೂರು ವೈಭವಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ಸಹಯೋಗದಲ್ಲಿ ತಾಯಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಭಿರ ನಡೆಸಲಾಯಿತು.

ಶಿಭಿರಕ್ಕೆ ಚಾಲನೆ ನೀಡಿದ ವೈಭವಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಮಧುಸೂಧನ್ ಮಾತನಾಡಿ ಗರ್ಭಿಣಿಯರು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚು ಆಧ್ಯತೆ ನೀಡಬೇಕು ಹಸಿರು ತರಕಾರಿ ಮೊಟ್ಟೆ ಮಾಂಸ ಸೇರಿದಂತೆ ಪೌಷ್ಟಿಕ ಆಹಾರ ಹೆಚ್ಚು ಸೇವನೆ ಮಾಡಿದರೆ ತಾಯಿಯ ಹೊಟ್ಟೆಯಲ್ಲಿ ಆರೋಗ್ಯ ಪೂರ್ಣಭೃಣ ಬೆಳವಣಿಗೆ ಹೊಂದುತ್ತದೆ.ನಿರಂತರವಾಗಿ ಆರೋಗ್ಯತಪಾಸಣೆ ಮಾಡಿಸಿಕೊಂಡರೆ.ಆರೋಗ್ಯಪೂರ್ಣ ಮಗುವಿನ ಜನನವಾಗುತ್ತದೆ.ನವಜಾತ ಶಿಶು ಆರೋಗ್ಯವಾಗಿರಲು ತಾಯಿ ಮಾನಸಿಕ ಸ್ಥಿತಿ ಹೊಂದಿರಬೇಕು,ಹಾಗೂಕೆಲವರು ಮೂಡನಂಬಿಕೆಯಿಂದ ಬಾಣಂತಿಯರು ಪಥ್ಯಾಹಾರಗಳನ್ನ ಸೇವನೆ ಮಾಡುವುದರಿಂದ ಮಗುವಿಗೆ ಪೌಷ್ಠಿಕಾಂಶದಕೊರತೆ ಉಂಟಾಗಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.ಆದರಿಂದ ಹಣ್ಣು ತರಕಾರಿ,ಮೊಟ್ಟೆ ಸೇರಿಂತೆ ಬಾಣಂತಿಯರು ಪೌಷ್ಟಿಕ ಆಹಾರ ಸೇವನೆಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಪ್ರಸೂತಿ ತಜ್ಞರಾದ ಡಾ//ಕಾರ್ತಿಕ್ ಮಾತನಾಡಿ ನವಜಾತ ಶಿಶುಗಳಿಗೆ ತಾಯಿಯ ಹಾಲು ಅಮೃತಕ್ಕೆ ಸಮಾನವಾಗಿದ್ದು .ಮಕ್ಕಳಲ್ಲಿ ನವಜಾತಶಿಶುಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವಜೊತೆಗೆ, ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ,ಆದರೆ ಕೆಲವರು ಮೂಡನಂಬಿಕೆಯಿಂದ ಹುಟ್ಟುದ ಮಗುವಿಗೆ ತಾಯಿಹಾಲು ನೀಡದೆ,ಹಾಲನ್ನ ಚೆಲ್ಲುವ ಕೆಲಸ ಮಾಡುತ್ತಾರೆ,ಪಥ್ಯಾಹಾರದ ಹೆಸರಿನಲ್ಲಿ ಪೌಷ್ಠಿಕ ಆಹಾರಗಳು ತಾಯಿಗೆ ದೊರೆಯದಂತೆ ಮಾಡುತ್ತಿದ್ದಾರೆ.ತಾಯಿ ಆರೋಗ್ಯವಿದರೆ ಮಾತ್ರ ಮಗು ಆರೋಗ್ಯವಾಗಿ ಇರುತ್ತದೆ,ಪೌಷ್ಠಿಕಾಂಶ ಉಳ್ಳ ಹಣ್ಣು.ತರಕಾರಿ ಮೊಟ್ಟೆ ನೀಡಿ,ತಾಯಿ ಮಕ್ಕಳ ಆರೈಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಆಯುರ್ವೇದಿಕ ವೈದ್ಯರಾದ ಡಾ//ಕೃತಿಕ ಮಾತನಾಡಿ ವೈಭವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯಕೀಯ ಸೇವೆಗಳಲ್ಲಿ ನವಜಾತ ಶಿಶು ಆರೈಕೆ ಹಾಗೂ ಐಸಿಯು ಸೌಲಭ್ಯಹೊಂದಿದೆ.ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಹೈಟೆಕ್ ವೈದ್ಯಕೀಯ ಸೇವೆ ನೀಡುತ್ತಿದೆ,ಅಲ್ಲದೆ ತಾಯಿ ಹಾಗೂ ಮಕ್ಕಳ ಆರೈಕೆಗಾಗಿ ಆಯುರ್ವೇದ ಆಸ್ಪತ್ರೆ ಸೌಲಭ್ಯವಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ//ಪವನ್ ಕುಮಾರ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




