ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆಗ್ರಾಮದ ತರಳಬಾಳು ಸಂಸ್ಥಾನ ಮಠದ ಶ್ರೀತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಏಪ್ರಿಲ್ 30ರಂದು ಅದ್ದೂರಿ ಬಸವ ಜಯಂತಿ ಕಾರ್ಯಕ್ರಮವನ್ನ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ,ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಆಯೋಜನೆ ಮಾಡಲಾಗಿದೆ.

ತಿಪಟೂರು ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಸ್ಥಳೀಯ ಸಲಹಾಸಮಿತಿ ಅಧ್ಯಕ್ಷ ಹೆಚ್. ವಿ ನಾಗರಾಜು ತರಳಬಾಳು ಶ್ರೀಮಠದ ಸಂಪ್ರದಾಯದಂತೆ ಪ್ರತಿವರ್ಷ ಬಸವಜಯಂತಿ ಆಚರಿಸುತ್ತಾ ಬಂದಿದ್ದು,ಸಿರಿಗೆರೆ ತರಳಬಾಳು ಬೃಹನ್ಮಠದ ಸೂಚನೆಯಂತೆ,ತಿಪಟೂರು ತುರುವೇಕೆರೆ,ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಸಾಧು ಸದ್ದರ್ಮ ವೀರಶೈವ ಸಮಾಜದ ಬಂಧುಗಳು ಹಾಗೂ ಬಸವ ಧರ್ಮ ಅನುಯಾಯಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆಯನ್ನು ಹಾಲುಕುರ್ಕೆ, ತರಳಬಾಳು ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ,ಬಸವಜಯಂತಿ ಅಂಗವಾಗಿ ಶ್ರೀಮಠದ ಕರ್ತೃಗದ್ದುಗೆಯಲ್ಲಿ ವಿಶೇಷ ಪೂಜೆ ಹಾಗೂ ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಸ್ಕೃತಿಕ ಕಲಾ ತಂಡಗಳೊಂದಿಗೆ ವೈಭವದಮೆರಣಿಗೆ ಏರ್ಪಡಿಸಲಾಗಿದೆ. ಸಂಜೆ 05ಗಂಟೆಗೆ ತರಳಬಾಳು ಜಗದ್ಗುರು ಸದ್ದರ್ಮ ಸಿಂಹಾಸನಾಧೀಶ್ವರ ಶ್ರೀಶ್ರೀ ಡಾ// ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಹಾಗೂ ಕೆರೆಗೋಡಿ ರಂಗಾಪುರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್, ಅತಿಥಿಗಳಾಗಿ ಶಾಸಕ ಕೆ. ಷಡಕ್ಷರಿ, ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕ ಬಿ. ನಂಜಾಮರಿ, ಜಿಲ್ಲಾಧಿಕಾರಿ ಶುಭಕಲ್ಯಾಣ್, ತಿಪಟೂರು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ. ಸಿರಿಗೆರೆ ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್ ಆರ್ ಬಸವರಾಜಪ್ಪ ಭಾಗವಹಿಸಲಿದ್ದು ಬಿಳಿಗೆರೆ ಕೃಷ್ಣಮೂರ್ತಿ, ಹಾಗೂ ತುಮಕೂರಿನ ಗೀತಾ ವಸಂತ ಅವರಿಂದ ಉಪನ್ಯಾಸ ನಡೆಯಲಿದೆ, ಚಿಕ್ಕನಾಯಕನಹಳ್ಳಿ, ಸಮಾಜದ ಅಧ್ಯಕ್ಷ ಮರುಳ ಸಿದ್ದಪ್ಪ, ತುರುವೇಕೆರೆ ಸಮಾಜದ ಅಧ್ಯಕ್ಷ ಷಡಕ್ಷರಿ ಇವರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ, ತೋಟಪ್ಪ ಉತ್ತಂಗಿ ಮತ್ತು ಅಕ್ಕನ ಬಳಗ ಸಿರಿಗೆರೆ ಇವರಿಂದ ವಚನ ಗೀತೆ ಮತ್ತು ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಂದ ವಚನ ನೃತ್ಯ, ಗೋವಿನ ಹಾಡು ನೃತ್ಯ ರೂಪಕ ನೆಡೆಯಲಿದೆ 12ನೇ ಶತಮಾನದ 22 ಸಾವಿರ ವಚನಗಳನ್ನು ಅಂತರ್ಜಾಲ ತಂತ್ರಾಂಶ ದಲ್ಲಿ ಬಿಡುಗಡೆ ಮಾಡಲಾಗುತ್ತದೆ, ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ, ಚಿಕ್ಕನಾಯಕನಹಳ್ಳಿ ಉಪಾಧ್ಯಕ್ಷ ಸಿದ್ದರಾಮಯ್ಯ, ಹುಳಿಯಾರಿನ ಕಾರ್ಯದರ್ಶಿ ಚನ್ನಬಸವಯ್ಯ, ಶಿವ ವಿವಿಧ ದೇಶ ಸಹಕಾರಿ ಸಂಘದ ಅಧ್ಯಕ್ಷ ಆನಂದ್ ಮೂರ್ತಿ, ತಾಲ್ಲೂಕಿನ ಕಾರ್ಯದರ್ಶಿ ವೀರಭದ್ರಪ್ಪ, ಉಪಾಧ್ಯಕ್ಷ ಪ್ರಶಾಂತ್ ಕರೀಕೆರೆ, ದಿನೇಶ್ ಗೆದ್ಲೇಹಳ್ಳಿ, ಲಿಂಗರಾಜು, ವಿಜಯಕುಮಾರ್, ಚಂದ್ರಶೇಖರ್, ಶಿವಾನಂದಮೂರ್ತಿ ಮುಂತಾದವರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ




