Spread the love

:ರಾಜ್ಯಸರ್ಕಾರ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಉದೇಶದಂತೆ ಮೇ 5ರಿಂದ ರಾಜ್ಯಸರ್ಕಾರ ಪರಿಶಿಷ್ಟ ಜಾತಿಗಳ ಗಣತಿ ಆರಂಭಿಸಿದು, ಮಾದಿಗ ಸಮುದಾಯದ ಬಂದುಗಳು ತಮ್ಮ ಮನೆಬಳಿ ಬರುವ ಗಣತಿದಾರರ ಬಳಿ ಗಣತಿ ನಮೂನೆ 61ರಲ್ಲಿ ಮಾದಿಗ ಎಂದು ನಮೂದಿಸಿ,ನಮ್ಮ ಸಮುದಾಯದ ಮುಂದಿನ ಪೀಳಿಗೆ ಸರ್ಕಾರದ ಸಮಲತ್ತುಗಳನ್ನ ಜನಸಂಖ್ಯೆ ಆಧಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ನೆರವಾಗುತ್ತದೆ,ಎಂದು ಮನವಿ ಮಾಡಿದರು.


ನಗರದ ಆದಿ ಜಾಂಬವ ವಿವಿಧೋದ್ದೇಶ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆವರಣದಲ್ಲಿ ಆಯೋಜಿಸಿದ ಪರಿಶಿಷ್ಠ ಜಾತಿಗಣತಿ ಕುರಿತು ಸಭೆ ನಡೆಸಲಾಯಿತು.
ಒಳಮೀಸಲಾತಿ ಹೋರಾಟಸಮಿತಿ ಜಿಲ್ಲಾಧ್ಯಕ್ಷ ವೈ. ಬಾಲಕೃಷ್ಣ ಮಾತನಾಡಿ ಪರಿಶಿಷ್ಟ ಜಾತಿಯಲ್ಲಿಯೇ ಮಾದಿಗ ಸಮುದಾಯ ಅತಿಹೆಚ್ಚು ಸಂಖ್ಯೆಯಲ್ಲಿ ಇದ್ದರೂ ಸಹ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸವಲತ್ತು ಪಡೆಯಲು ಸಾಧ್ಯವಾಗಿಲ್ಲ,ನಮ್ಮ ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಒಳಮೀಸಲಾತಿ ಜಾರಿಯಾಗಬೇಕು,ಎಂದು ಕಳೆದ 30ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ,ಹೋರಾಟದ ಫಲವಾಗಿ ಮಾನ್ಯ ಸರ್ವೋಚ್ಚ ನ್ಯಾಯಲಯದ ನಿರ್ದೇಶನದಂತೆ,ರಾಜ್ಯಸರ್ಕಾರ ಜೆಸ್ಟಿಸ್ ನಾಗಮೋಹನ್ ದಾಸ್ ಆಯೋಗ ನೇಮಿಸಿದೆ,ಆದರೆ ಜಾತಿದತ್ತಾಂಶಗಳ ಗೊಂದಲದಿಂದ,ಪರಿಶಿಷ್ಟ ಜಾತಿಗಳ ಗಣತಿ ಆರಂಭಿಸಿದ್ದು,ಮಾದಿಗ ಸಮುದಾಯಕ್ಕೆ ಇದ್ದೊಂದು ಸುವರ್ಣಾವಕಾಶ,ಪ್ರತಿಯೊಬ್ಬರು ಯಾವುದೇ ಗೊಂದಲಕ್ಕೆ ಒಳಗಾಗದೆ, ಜಾತಿಗಣಗೆ ಬರುವ ಗಣತಿದಾರರ ಬಳಿ ಗಣತಿ ನಮೂನೆ 61ರಲ್ಲಿ ಮಾದಿಗ ಎಂದು ನಮೂದಿಸಿ,ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಉತ್ತಮ ಅವಕಾಶ ಬಳಸಿಕೊಳ್ಳಿ,ನಿಮ್ಮ ಹಿಂದಿನ ಶಾಲಾ ದಾಖಲೆಗಳಲ್ಲಿ ಏನೇ ಇದ್ದರೂ ಪರವಾಗಿಲ್ಲ ಗಣತಿ ವೇಳೆ ಮಾದಿಗ ಎಂದು ನಮೂದಿಸಿ ಎಂದು ತಿಳಿಸಿದರು.


ನರಸಿಂಹಯ್ಯ (ಹೇಮಾವತಿ)ಮಾತನಾಡಿ ಒಳಮೀಸಲಾತಿ ಗಣತಿವೇಳೆ ಮಾದಿಗ ಸಮುದಾಯದ ಬಂಧುಗಳು ಮಾದಿಗ ಎಂದು ನಮೂದಿಸಲು,ಜನಾಂಗದ ಹಿರಿಯರು ,ಯುವಕರು,ನೌಕರರು,ಹಾಗೂ ಎಲ್ಲಾ ಮುಖಂಡರು ಒಗ್ಗಟಿನಿಂದ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು,ನಮಗೆ ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಲು ಮರೆಯಬೇಡಿ.ನೀವು ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡಿದರೆ,ಮುಂದಿನ ಪೀಳಿಗೆಗೆ ಅನ್ಯಾಯವಾಗಲು ನೀವೆಕಾರಣವಾಗ ಬೇಕಾಗುತ್ತದೆ,ಐತಿಹಾಸಿಕ ಪ್ರಮಾದಕ್ಕೆ ಕಾರಣವಾಗಬೇಡಿ ಜಾತಿಗಣತಿ ಮುಗಿಯುವವರೆಗೆ ನಿಮ್ಮ ವಯುಕ್ತಿಕ ಕೆಲಸಗಳು ಎಷ್ಟೆಇದ್ದರೂ,ಬದಿಗಿಟ್ಟು,ಪ್ರತಿಹಳ್ಳಿ ಪ್ರತಿ ಕಾಲೋನಿಗಳು,ಹಟ್ಟಿಗಳಿಗೆ ಹೋಗಿ ಜಾಗೃತಿ ಕೆಲಸ ಮಾಡಿ,ನಗರ ಪ್ರದೇಶದಲ್ಲಿ ಈಗಲೂ ಸಹ ನಗರಗಳಲ್ಲಿ ನಮ್ಮ ಜನಾಂಗದವರು ವಾಸ ಮಾಡುವ ಮನೆಗಳನ್ನ ಗುರ್ತಿಸಿ ಮಾದಿಗ ಎಂದು ನಮೂದಿಸಲು ತಿಳಿಸಿ ಪ್ರತಿ ಬಡಾವಣೆ ಹಾಗೂ ವಾರ್ಡ್ ಗಳಲ್ಲಿ ಜಾಗೃತಿಗೆ ಮುಂದಾಗಿ ಆಗಮಾತ್ರ ನಮ್ಮ ನಿಮ್ಮ 30ವರ್ಷಗಳ ಹೋರಾಟಕ್ಕೆ ಫಲದೊರೆಯುತ್ತದೆ,ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮುಖಂಡರಾದ ನರಸೀಯಪ್ಪ.ಶಿವನಂಜಪ್ಪ.ಗಂಗಾಧರ್.ಚಂದ್ರಣ್ಣ.ಡಾ//ಲಿಂಗಯ್ಯ,ಕೆ.ಇಬಿ ನರಸಿಂಹಮೂರ್ತಿ,ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೊಪ್ಪ ಶಾಂತಪ್ಪ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!