Spread the love

:ನಗರಸಭೆ ಚುನಾವಣೆ ನಡೆಸಲು ತಿಪಟೂರು ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ದಿನಾಂಕ ನಿಗಧಿಗೊಳಿಸಿದ್ದು,ಕೇವಲ ಒಂದೇ ದಿನಕ್ಕಾಗಿ ಚುನಾವಣೆ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.ಆದರೆ ಚುನಾವಣಾಧಿಕಾರಿಗಳು ನಿಯಮಾನುಸಾರ ಚುನಾವಣೆಗೆ ತಯಾರಿ ನಡೆಸಿ,ಅಕ್ಟೋಬರ್ 29 ರಂದು ಮಧ್ಯಹ್ನ 2 ಗಂಟೆಗೆ ದಿನಾಂಕ ನಿಗದಿಗೊಳಿಸಿದ್ದಾರೆ.ಅಕ್ಟೋಬರ್ 30ಕ್ಕೆ ನಗರಸಭೆ ಅಧಿಕಾರಾವಧಿ ಮುಕ್ತಾಯಗೊಳ್ಳುವ ಕಾರಣ.ಕೇವಲ ಒಂದು ದಿನದ ಅಧಿಕಾರಕ್ಕಾಗಿ ಚುನಾವಣೆ ನಡೆಸುವಂತ್ತಾಗಿದೆ.

ಕಾಂಗ್ರೇಸ್ ಹಾಗೂ ಬಿಜೆಪಿ ಎರಡು ಪಕ್ಷದಲ್ಲೂ ಉತ್ಸಾಹ ಮರೆಯಾಗಿದ್ದು.ಉಪ್ಪುಕಾರ,ಸಿಹಿ ಇಲ್ಲ ಊಟದಂತ್ತಾಗಿದೆ.ಕಳೆದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ಭಾರೀ ಕುತೂಹಲ,ಪೈಪೋಟಿ ನಡೆದು ಕುದುರೇ ವ್ಯಾಪಾರದ ಮೂಲಕ ಬಿಜೆಪಿ ಸದಸ್ಯರನ್ನ ಹೈಜಾಕ್ ಮಾಡಿ,ಕಾಂಗ್ರೇಸ್ ಪಕ್ಷ ನಗರಸಭೆ ಗದ್ದುಗೆ ಒಲಿಸಿಕೊಂಡಿತ್ತು.ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ರಾಜೀನಾಮೆ ಹಾಗೂ ನಾಲ್ಕುಜನ ಸದಸ್ಯರ ಅನರ್ಹತೆ ಪ್ರಹಸನದಿಂದ ಮತ್ತೆ ನಗರಸಭೆ ಚುನಾವಣೆ ಚರ್ಚೆಗಳು ಹುಟ್ಟುಹಾಕಿದವು,ಬಿಜೆಪಿ ಸದಸ್ಯರು ಚುನಾವಣೆ ನಡೆಸುವಂತ್ತೆ ಜಿಲ್ಲಾಧಿಕಾರಿಗಳಿಗೆ ಮನವಿ,ಸಲ್ಲಿಸಿದಕಾರಣ,ಉಪವಿಭಾಗಾಧಿಕಾರಿಗಳು,ದಿನಾಂಕ ನಿಗಧಿಗೊಳಿಸಿದ್ದಾರೆ.ಚುನಾವಣೆ ದಿನಾಂಕ ನಿಗಧಿಯಾದರೂ ನಗರಸಭೆ ಸದಸ್ಯರಲ್ಲಿ ಉತ್ಸಹ ಕಾಣದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ಕಾಂಗ್ರೇಸ್ ಪಕ್ಷದಿಂದ ಹಾಲಿ ಪ್ರಭಾರ ಅಧ್ಯಕ್ಷೆ ಶ್ರೀಮತಿ ಮೇಘಶ್ರೀ ಭೂಷಣ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗುವ ನಿರೀಕ್ಷೆ ಇದ್ದು,ಬಿಜೆಪಿ ಯಿಂದ ಕಳೆದ ಚುನಾವಣೆ ಪರಾಜಿತ ಅಭ್ಯಾರ್ಥಿ ಶ್ರೀಮತಿ ಲತಾಲೋಕೇಶ್ .ಉಪಾಧ್ಯಕ್ಷರಾಗಿ ಕೇಬಲ್ ಸಂಗಮೇಶ್ ಹೆಸರುಗಳು ಚಲಾವಣೆಯಲ್ಲಿವೆ, ಕಾಂಗ್ರೇಸ್ ಪಕ್ಷದಿಂದ ಉಪಾಧ್ಯಕ್ಷ ಆಕಾಂಕ್ಷಿ ಯಾರಾಗುತ್ತಾರೆ ಎನ್ನೂ ಹೆಸರು ಫೈನಲ್ ಆಗಿಲ್ಲ.ನಗರಸಭೆಯಲ್ಲಿ ಬಿಜೆಪಿ 11ಸದಸ್ಯರು,ಕಾಂಗ್ರೇಸ್ ಪಕ್ಷದ 09 ಸದಸ್ಯರು ,ಜೆಡಿಎಸ್ ಪಕ್ಷದಿಂದ 05ಜನ ಸದಸ್ಯರು ಪಕ್ಷೇತರರಾಗಿ 06ಜನ ಶಾಸಕರು ಹಾಗೂ ಸಂಸದರ ಮತ ಸೇರಿ33ಮತಗಳ ಆಗುತ್ತವೆ.ಆದರೆ ಅಸಲಿ ಕಹಾನಿಪ್ರರಂಭವಾಗೋದೆ ಇಲ್ಲಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿಪ್ ಉಲ್ಲಂಗಿಸಿ ಅಡ್ಡ ಮತದಾನದ ಮಾಡಿ ಅನಾರ್ಹತೆ ಹೊಂದಿದ್ದ,ನಗರಸಭೆ ಸದಸ್ಯರಾದ ಶ್ರೀಮತಿ ಅಶ್ವಿನಿದೇವರಾಜು,ಎ.ಬಿ.ಜಯರಾಮ್. ಆಸೀಫಾ ಬಾನು,ಪದ್ಮ ಶಿವಪ್ಪ ಈ ನಾಲ್ಕು ಜನ ಸದಸ್ಯರ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದೆ ?ಎನ್ನಲಾಗಿದ್ದು,ತಮ್ಮ ಮತದಾನದ ಹಕ್ಕು ಚಲಾವಣೆಗೆ ಅವಕಾಶ ಸಿಕ್ಕಿರುವ ಕಾರಣ,ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮತ್ತೆ ವಿಪ್ ಜಾರಿಗೊಳಿಸುತ್ತಾವ.ಅನೋ ಜಿಗ್ನಾಸೆ ಹುಟ್ಟಿಹಾಕಿದ್ದು,ಒಂದುವೇಳೆ ವಿಪ್ ಜಾರಿ ಮಾಡಿದರೆ,ನಾಲ್ಕುಜನ ತಮ್ಮ ತಮ್ಮ ಪಕ್ಷಕ್ಕೆ ಮತಚಲಾವಣೆ ಮಾಡುತ್ತಾರೆಯೆ ಅಥವಾ ಅಡ್ಡ ಮತದಾನ ಮಾಡುತ್ತಾರ ಕಾದುನೋಡ ಬೇಕಿದೆ.ಒಂದು ದಿನವಾದರೂ ಕಾಂಗ್ರೇಸ್ ಹಾಗೂ ಬಿಜೆಪಿಗೆ ಪ್ರತಿಷ್ಟೆಯ ಪ್ರಶ್ನಾಯಾಗಿದೆ.ಚುನಾವಣೆಯಲ್ಲಿ ಸೋತರೆ ಅಪಮಾನಕ್ಕೆ ಒಳಗಾಗ ಬೇಕಾಗುತ್ತದೆ ಅನೋ ಗುಸುಗುಸು ಆರಂಭವಾಗಿವೆ.ಗೆದ್ದರೆ ಅಧಿಕಾರ ಸೋತರೆ ಹೋರಾಟ ಅನೋದಕ್ಕು ಸಮಯವಿಲ್ಲ,ಅಧಿಕಾರ ಸಿಕ್ಕು ನಾಮಫಲಕದಲ್ಲಿ ಹೆಸರು ಬಂದು ಕುರ್ಚಿಯಲ್ಲಿ ಕೂರುವ ಮೊದಲೆ ಅಧಿಕಾರಾವಧಿ ಮುಕ್ತಾಯವಾಗುತ್ತದೆ.ಆದರೆ ಏನೇ ಆದರೂ ಈ ಚುನಾವಣೆ ಇತಿಹಾಸದ ಮೈಲುಗಲ್ಲಾಗಿ ಉಳಿಯುತ್ತದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!